ಹಲ್ಲೆ, ನಿಂದನೆ ಆರೋಪಿಸಿ ವಿದ್ಯಾರ್ಥಿಗಳಿಂದ ಟ್ವೀಟ್‌, ಆರೋಪ ತಳ್ಳಿ ಹಾಕಿದ ಪೊಲೀಸ್

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ13ರ ಮಧ್ಯರಾತ್ರಿ 2.30 ಸಮಯದಲ್ಲಿ ಸದ್ದುಗುಂಟೆಪಾಳ್ಯದ ಆಂಜನೇಯ ದೇಗುಲ ಬಳಿ ರಸ್ತೆಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಬೀಟ್ ಪೊಲೀಸರು ನಿಂದಿಸಿ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿ ಆರೋಪಿಸಿದ್ದಾರೆ. ಮುಸ್ಲಿಂರಾಗಿದಕ್ಕೆ ನಮ್ಮನ್ನು ಪೊಲೀಸರು ನೀವು ಪಾಕಿಸ್ತಾನದವರೆಂದು ನಿಂದಿಸಿದ್ದಾರೆ. ಅಲ್ಲದೆ ವಾರಂಟ್ ಇಲ್ಲದೆ ಬಲವಂತವಾಗಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸಿಎಎ, NRC ಪ್ರೊಟೆಸ್ಟ್ ಇನ್ಫೋ ಪೇಜ್​ನಲ್ಲಿ […]

ಹಲ್ಲೆ, ನಿಂದನೆ ಆರೋಪಿಸಿ ವಿದ್ಯಾರ್ಥಿಗಳಿಂದ ಟ್ವೀಟ್‌, ಆರೋಪ ತಳ್ಳಿ ಹಾಕಿದ ಪೊಲೀಸ್
ಸಾಧು ಶ್ರೀನಾಥ್​

Updated on: Jan 15, 2020 | 1:49 PM

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಟ್ವೀಟ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜನವರಿ13ರ ಮಧ್ಯರಾತ್ರಿ 2.30 ಸಮಯದಲ್ಲಿ ಸದ್ದುಗುಂಟೆಪಾಳ್ಯದ ಆಂಜನೇಯ ದೇಗುಲ ಬಳಿ ರಸ್ತೆಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಬೀಟ್ ಪೊಲೀಸರು ನಿಂದಿಸಿ ಹಲ್ಲೆ ಮಾಡಿದ್ದಾರೆಂದು ವಿದ್ಯಾರ್ಥಿ ಆರೋಪಿಸಿದ್ದಾರೆ.

ಮುಸ್ಲಿಂರಾಗಿದಕ್ಕೆ ನಮ್ಮನ್ನು ಪೊಲೀಸರು ನೀವು ಪಾಕಿಸ್ತಾನದವರೆಂದು ನಿಂದಿಸಿದ್ದಾರೆ. ಅಲ್ಲದೆ ವಾರಂಟ್ ಇಲ್ಲದೆ ಬಲವಂತವಾಗಿ ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಸಿಎಎ, NRC ಪ್ರೊಟೆಸ್ಟ್ ಇನ್ಫೋ ಪೇಜ್​ನಲ್ಲಿ ವಿಡಿಯೋ ಅಪ್​ಲೋಡ್ ಮಾಡಿದ್ದಾರೆ.

ಇದಾದ ನಂತರ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಟ್ವೀಟ್‌ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ತಡರಾತ್ರಿ ಐವರು ಯುವಕರು ರಸ್ತೆ ಬದಿ ನಿಂತಿದ್ದರು. ಈ ವೇಳೆ ವಿಚಾರಿಸಲು ಯುವಕರ ಬಳಿ ಪೊಲೀಸರು ತೆರಳಿದ್ದರು. ಆದ್ರೆ ಪೊಲೀಸರನ್ನು ಕಂಡು ಇಬ್ಬರು ಯುವಕರು ಓಡಿ ಹೋಗಿದ್ದರು. ಪೊಲೀಸರು ಎಂದಾಗ ಐಡಿ ಕಾರ್ಡ್ ತೋರಿಸಿ ಎಂದು ಕೇಳಿದ್ದಾರೆ. ಐಡಿ ತೋರಿಸಿ ಯುವಕರನ್ನು ಠಾಣೆಗೆ ಕರ್ಕೊಂಡು ಬಂದಿದ್ದೇವೆ. ಈ ವೇಳೆ ಮೂವರನ್ನು ವಿಚಾರಣೆ ನಡೆಸಿ, ಸಣ್ಣ ಕೇಸ್ ಹಾಕಿ ಯುವಕರನ್ನು ಬಿಟ್ಟು ಕಳಿಸಿದ್ದೇವೆಂದು ಸ್ಪಷ್ಟನೆ ನೀಡಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us