ಬೆಂಗಳೂರು: ಮಹಾಮಾರಿ ಕೊರೊನಾ(Coronavirus) ಬೆಂಗಳೂರು ಶಾಲಾ ಮಕ್ಕಳ ಶಿಕ್ಷಣಕ್ಕೆ(Students) ಬರೆಯಿಟ್ಟಿದೆ. ಕೊರೊನಾ ಕಾಟದಿಂದ ಶಾಲೆಗಳಲ್ಲಿ ಶಿಕ್ಷಣ ಕಾರ್ಯ ಸರಿಯಾಗಿ ನಡೆಯುತ್ತಿಲ್ಲ. ಆದ್ರೆ ಇಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ಶಿಕ್ಷಣ ಇಲಾಖೆಗೆ ಅರ್ಧಕ್ಕೆ ಶಾಲೆಬಿಟ್ಟ ಮಕ್ಕಳ ಪತ್ತೆ ಟೆನ್ಷನ್ ಶುರುವಾಗಿದೆ. ಶಾಲೆ ಬಿಟ್ಟವರ ಪೈಕಿ ಅರ್ಧಕ್ಕಿಂತ ಕಡಿಮೆ ಮಕ್ಕಳು ಮಾತ್ರ ಶಾಲೆಗೆ ವಾಪಸ್ ಆಗಿದ್ದಾರೆ. ಇನ್ನು ಉಳಿದವರನ್ನು ಮತ್ತೆ ಶಾಲೆಗೆ ಕರೆತರುವುದು ದೊಡ್ಡ ಸವಾಲಾಗಿದೆ. ಕೊರೊನಾ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಮಕ್ಕಳ ಸುರಕ್ಷತೆಗಾಗಿ ಶಾಲೆಗಳನ್ನು ಬಂದ್ ಮಾಡಿಸಿತ್ತು. ಸದ್ಯ ಕೊರೊನಾ ಕಡಿಮೆಯಾದ ಹಿನ್ನೆಲೆ ಮತ್ತೆ ಶಾಲೆಗಳನ್ನು ತೆರೆಯಲಾಗಿದೆ. ಆದ್ರೆ ಮಕ್ಕಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ. ಅನೇಕ ಮಕ್ಕಳು ಶಾಲೆಗಳ ಮೇಲೆ ಒಲವು ಕಳೆದುಕೊಂಡಿದ್ದಾರೆ.
2021-22ನೇ ಸಾಲಿನ ಅಧಿಕೃತ ಅಂಕಿಅಂಶಗಳ ಪ್ರಕಾರ 6-14 ಹಾಗೂ 14-16 ವರ್ಷದ 34,411 ಮಕ್ಕಳು ಡ್ರಾಪೌಟ್ ಆಗಿದ್ದಾರೆ. 34,411 ಮಕ್ಕಳು ಅರ್ಧಕ್ಕೆ ಶಾಲೆಯನ್ನು ಬಿಟ್ಟಿದ್ದಾರೆ. ಶಾಲೆ ಅರ್ಧಕ್ಕೆ ಬಿಟ್ಟ ಮಕ್ಕಳ ಸಂಖ್ಯೆಯಲ್ಲಿ ಬೆಂಗಳೂರು ದಕ್ಷಿಣ ಮತ್ತು ಉತ್ತರ ಶೈಕ್ಷಣಿಕ ಜಿಲ್ಲೆಗಳೇ ಮೊದಲು. ಈ ಶೈಕ್ಷಣಿಕ ಜಿಲ್ಲೆಗಳಲ್ಲಿ 6 ರಿಂದ 14 ವಯೋಮಿತಿಯ 2,143 ಮಕ್ಕಳು ಹಾಗೂ 14 ರಿಂದ 16 ವರ್ಷ ವಯೋಮಿತಿಯ 4,465 ಸೇರಿ ಬರೋಬ್ಬರಿ 6,608 ಮಕ್ಕಳು ಶಾಲೆಯನ್ನ ಅರ್ಧಕ್ಕೆ ಬಿಟ್ಟಿದ್ದಾರೆ. ಶಾಲೆಬಿಟ್ಟ 34,411 ಮಕ್ಕಳ ಪೈಕಿ 15,552 ಮಕ್ಕಳು ವಾಪಸ್ ಆಗಿದ್ದು ಉಳಿದ ಮಕ್ಕಳನ್ನ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಯತ್ನಿಸುತ್ತಿದೆ. ಸರ್ಕಾರಿ ಶಾಲೆಗಳ ಅಂಕಿ ಅಂಶ ಕಂಡು ಶಿಕ್ಷಣ ಇಲಾಖೆಯೇ ತಬ್ಬಿಬ್ಬಾಗಿದ್ದು 1 ರಿಂದ 10ನೇ ತರಗತಿ ಮಕ್ಕಳ ಸರ್ವೇಯಲ್ಲಿ ಅಂಕಿ ಅಂಶ ಬೆಳಕಿಗೆ ಬಂದಿತ್ತು. ಸದ್ಯ ಮಕ್ಕಳ ಪತ್ತೆ ಹಚ್ಚುವ ಕೆಲಸದಲ್ಲಿ ಶಿಕ್ಷಣ ಇಲಾಖೆ ತೊಡಗಿದೆ.
ಇನ್ನು ಮತ್ತೊಂದೆಡೆ ಮಹಾಮಾರಿ ಕೊರೊನಾದಿಂದ ಶಾಲೆಗಳು ಬಂದ್ ಆಗುತ್ತಿದ್ದಂತೆ ಮಕ್ಕಳು ತಮ್ಮ ಪೋಷಕರ ಜೊತೆ ಕೂಲಿ ಕೆಲಸಗಳಿಗೆ ಹೋಗಲು ಶುರು ಮಾಡಿದ್ದಾರೆ. ಹಾಗೂ ಓದಿವಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ. ಈ ವಿಚಾರಗಳು ಸಹ ಮಕ್ಕಳು ಶಾಲೆಗೆ ಬಾರದಿರಲು ಕಾರಣವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 14,366 ಜನರಿಗೆ ಕೊರೊನಾ ದೃಢ; 58 ಮಂದಿ ಸಾವು