Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓದಿದ್ದು 7 ನೇ ಕ್ಲಾಸ್‌ ಆದ್ರೂ ಕಳ್ಳತನದಲ್ಲಿ ಮಾತ್ರ ಪಂಟರ್‌; ಇಂಥಾ ಐನಾತಿ ಕಳ್ಳನ್ನ ಎಲ್ಲಿಯೋ ನೋಡಿರಲಿಕ್ಕೆ ಸಾಧ್ಯ ಇಲ್ಲ ಬಿಡಿ

ಓದಿದ್ದು 7 ನೇ ಕ್ಲಾಸ್‌ ಆದ್ರೂ ಕಳ್ಳತನದಲ್ಲಿ ಮಾತ್ರ ಪಂಟರ್‌; ಇಂಥಾ ಐನಾತಿ ಕಳ್ಳನ್ನ ಎಲ್ಲಿಯೋ ನೋಡಿರಲಿಕ್ಕೆ ಸಾಧ್ಯ ಇಲ್ಲ ಬಿಡಿ

TV9 Web
| Updated By: ಆಯೇಷಾ ಬಾನು

Updated on:Feb 02, 2022 | 8:18 AM

ಇದು ತನ್ನ ಸ್ವಂತ ಮನೆ ಎನ್ನುವಂತೆ ನೀಟಾಗಿ ಮನೆಮುಂದೆಯೇ ಸ್ಕೂಟಿ ನಿಲ್ಲಿಸೋ ಭೂಪ...ಗೇಟ್‌ ಓಪನ್‌ ಮಾಡಿಕೊಂಡು ಮನೆಯೊಳಗೆ ಎಂಟ್ರಿಯಾಗ್ತಾನೆ...ಅರ್ಧಗಂಟೆಯಲ್ಲೇ ಕೆಲಸ ಮುಗಿಸಿಕೊಂಡು ಎಸ್ಕೇಪ್‌ ಆಗ್ತಾನೆ.

ಅವನು ಓದಿದ್ದು 7 ನೇ ಕ್ಲಾಸ್‌ ಆದ್ರೂ ಕಳ್ಳತನದಲ್ಲಿ ಮಾತ್ರ ಪಂಟರ್‌…13 ವರ್ಷದಿಂದಲೂ ಕಳ್ಳತನ ಮಾಡ್ತಿದ್ದ ಭೂಪ ಒಂದೇ ಒಂದು ಸಲವಾದ್ರೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಅದೇ ಖದೀಮ ಈಗ ಅರೆಸ್ಟ್ ಆಗಿದ್ದಾನೆ. ಅಷ್ಟಕ್ಕೂ ಅವನು ಕಳ್ಳತನ ಮಾಡ್ತಿದ್ದ ರೀತಿಯೇ ಶಾಕ್‌ ಆಗುವಂತಿದೆ. ವೃತ್ತಿಯಲ್ಲಿ ಮೆಕಾನಿಕ್‌ ಆಗಿದ್ದ ಇವನು ಬರೋಬ್ಬರಿ 13 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ. ಆದ್ರೆ ಪಾಪದ ಕೊಡ ತುಂಬುತ್ತಿದ್ದಂತೆ ಈಗ ಬಲೆಗೆ ಬಿದ್ದಿದ್ದಾನೆ. ಯೆಸ್‌.. ಮುರುಳಿ ಅಲಿಯಾಸ್‌ ಪ್ರಾಜೆಕ್ಟ್‌ ಮುರುಳಿ ಅಂತಾ ಕರೆಸಿಕೊಳ್ತಿರೋ ಇವನು ಅದೇಗೆ ಮನೆಗಳಿಗೆ ನುಗ್ತಿದ್ದ ಅನ್ನೋದನ್ನ ನೀವೆ ನೋಡಿ..

ಇದು ತನ್ನ ಸ್ವಂತ ಮನೆ ಎನ್ನುವಂತೆ ನೀಟಾಗಿ ಮನೆಮುಂದೆಯೇ ಸ್ಕೂಟಿ ನಿಲ್ಲಿಸೋ ಭೂಪ…ಗೇಟ್‌ ಓಪನ್‌ ಮಾಡಿಕೊಂಡು ಮನೆಯೊಳಗೆ ಎಂಟ್ರಿಯಾಗ್ತಾನೆ…ಅರ್ಧಗಂಟೆಯಲ್ಲೇ ಕೆಲಸ ಮುಗಿಸಿಕೊಂಡು ಎಸ್ಕೇಪ್‌ ಆಗ್ತಾನೆ..ಅಷ್ಟಕ್ಕೂ ಮೆಕಾನಿಕ್‌ ಆಗಿದ್ದ ಮುರುಳಿ ತಿಂಗಳಿಗೆ ಒಂದು ಎರಡು ಕಳ್ಳತನ ಮಾಡ್ತಿದ್ದ. ಅದ್ರಲ್ಲೂ ಮಕ್ಕಳನ್ನ ಶಾಲೆಗೆ ಡ್ರಾಪ್‌ ಮಾಡೋ ಪೋಷಕರನ್ನೇ ಟಾರ್ಗೆಟ್‌ ಮಾಡ್ತಿದ್ದ..ಹೌದು…ಪೋಷಕರು ತಮ್ಮ ಮಕ್ಕಳನ್ನ ಶಾಲೆಗೆ ಬಿಡಲು ಹೋಗ್ತಿದ್ದಂತೆ ಮನೆ ಬಳಿ ಬರ್ತಿದ್ದ ಮುರುಳಿ ಡೂಪ್ಲೀಕೇಟ್‌ ಕೀಯಿಂದ ಬಾಗಿಲು ಓಪನ್‌ ಮಾಡ್ತಿದ್ದ. ಮನೆಯೊಳಗೆ ನುಗ್ಗಿ ಎಲ್ಲವನ್ನೂ ದೋಚಿ ಎಸ್ಕೇಪ್‌ ಆಗ್ತಿದ್ದ. ಮನೆಗೆ ಬೀಗ ಹಾಕೋದವನ್ನ ದೂರದಿಂದಲೇ ನೋಡ್ತಿದ್ದ ಕಿಲಾಡಿ, ಅದನ್ನ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ. ಬಳಿಕ ಮನೆಗೆ ಹೋಗಿ ಕೀಯ ಆಕಾರವನ್ನ ನೋಡ್ತಿದ್ದ. ಅದ್ರಂತೆ ನಕಲಿ ಕೀ ತಯಾರು ಮಾಡ್ತಿದ್ದ. ವಿಷ್ಯ ಅಂದ್ರೆ ಡೂಪ್ಲಿಕೇಟ್‌ ಕೀ ಮಾಡೋಕೆ ಅಂತಾನೆ ಮನೆಯಲ್ಲೇ ಕೀ ಮೇಕರ್‌ ಮಷಿನ್‌ ಇಟ್ಟುಕೊಂಡಿದ್ದ.

ಇನ್ನು ಇತ್ತೀಚಿಗೆ ಆರ್‌.ಟಿ ನಗರ ಠಾಣಾ ವ್ಯಾಪ್ತಿಯಲ್ಲಿ ಕೈಚಳಕ ತೋರಿದ್ದ ಮುರುಳಿ ನಂತರ ಎಸ್ಕೇಪ್ ಆಗಿದ್ದ. ಈ ಬಗ್ಗೆ ಹೆಬ್ಬಾಳ ಮತ್ತು ಆರ್ ಟಿ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸಿಸಿಟಿವಿ ದೃಶ್ಯ ಆಧಾರದಲ್ಲಿ ಖದೀಮನನ್ನ ಬಂಧಿಸಿದ್ದಾರೆ. ಈತನಿಂದ ಚಿನ್ನಾಭರಣ ಖರೀದಿಸಿದ್ದ ಶಿವರಾಂ ಅನ್ನೋನನ್ನೂ ಅರೆಸ್ಟ್‌ ಮಾಡಿದ್ದು, 1 ಕೆಜಿ 110 ಗ್ರಾಂ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕೀ ತಯಾರಿ ಮಷಿನ್ ನನ್ನ ವಶಪಡಿಸಿಕೊಂಡಿದ್ದಾರೆ.

Published on: Feb 02, 2022 08:10 AM