ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ‌; ಮಳೆಗಾಲದಲ್ಲಿಯು 32 ಡಿಗ್ರಿ ಬಿಸಿಲು ದಾಖಲು

| Updated By: ಆಯೇಷಾ ಬಾನು

Updated on: Sep 22, 2024 | 8:07 AM

ಕರ್ನಾಟಕ ರಾಜ್ಯದಲ್ಲಿ ಮಳೆಗಾಲವಿದ್ದರೂ ಹವಾಮಾನ ಮಾತ್ರ ಬೇಸಿಗೆಯ ಫೀಲ್ ಕೊಡುತ್ತಿದ್ದು, ಬಿಸಿಲಿನ ತಾಪಮಾನ ಮಾತ್ರ ನೆತ್ತಿ ಸುಡುತ್ತಿದೆ.‌ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ‌ವಾಗಿದೆ. ಮಳೆಗಾಲದಲ್ಲಿಯೂ 32 ಡಿಗ್ರಿಯಷ್ಟು ಬಿಸಿಲು ದಾಖಲಾಗಿದೆ. ಮಳೆಗಾಲದಲ್ಲಿಯೂ ಬಿಸಿಲಿನ ಫೀಲ್ ಆಗುತ್ತಿದ್ದು, ಸ್ಕಿನ್ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಜನರು ಆರೋಗ್ಯದ ಮೇಲೆ ನಿಗಾ ವಹಿಸಬೇಕಾಗಿದೆ.

ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ‌; ಮಳೆಗಾಲದಲ್ಲಿಯು 32 ಡಿಗ್ರಿ ಬಿಸಿಲು ದಾಖಲು
ಬೆಂಗಳೂರಿನಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಳ‌
Follow us on

ಬೆಂಗಳೂರು, ಸೆ.22: ಸಿಲಿಕಾನ್ ಸಿಟಿಯಲ್ಲಿ (Bengaluru) ಕಳೆದ ಒಂದು ವಾರದಿಂದ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದು, ಮಳೆಗಾಲದಲ್ಲಿ ಬೇಸಿಗೆಯ ಫೀಲ್ ಕೊಡುತ್ತಿದೆ. ಸುಡುಬಿಸಿಲು ಜನರ ನೆತ್ತಿ ಸುಡುತ್ತಿದ್ದು, ಇನ್ನು ಮೂರ್ನಾಲ್ಕು ದಿನಗಳು ಇದೇ ರೀತಿ ಹವಾಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಜ್ಞರು ಹೇಳ್ತಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ‌ ಮಳೆಗಾಲದಲ್ಲೂ ಬೇಸಿಗೆ ಅನುಭವವಾಗುತ್ತಿದ್ದು, ನಗರದಲ್ಲಿ ಬಿಸಿಲಿನ ಗರಿಷ್ಠ ಉಷ್ಣಾಂಶ 32 ಡಿಗ್ರಿಯವರೆಗೂ ದಾಟಿದೆ. ಇನ್ನು ಬಿಸಿಲಿನ ಜೊತೆಗೆ ಬಿಸಿಗಾಳಿಯ ಅನುಭವವು ಆಗುತ್ತಿದ್ದು, ಈ ಬಿಸಿಲಿನಿಂದ ಆರೋಗ್ಯದ ಮೇಲೆ‌ ಭಾರಿ ಪರಿಣಾಮ ಬೀರಲಿದೆ. ಸಧ್ಯ ಹವಾಮಾನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಬೆಳಗ್ಗಿನ ಜಾವದ ವೇಳೆ ಚಳಿಯ ಅನುಭವ, ಮಧ್ಯಾಹ್ನ ಬಿಸಿಲಿನ‌ ಅನುಭವ ಸಂಜೆಯಾಗುತ್ತಿದ್ದಂತೆ ಮಳೆಯ ವಾತಾವರಣ ಕಂಡುಬರುತ್ತಿದೆ.‌

ಇದೇ ವಾತಾವರಣ ಇನ್ನು ಒಂದು ವಾರ ಕಂಡುಬರಲಿದ್ದು, ಮಕ್ಕಳನ್ನ ಮಧ್ಯಾಹ್ನದ ವೇಳೆ ಬಿಸಿಲಿಗೆ ಬಿಡದಂತೆ ಎಚ್ಚರವಹಿಸಲು ಹವಾಮಾನ ಇಲಾಖೆ ತಜ್ಞರು ಹೇಳ್ತಿದ್ದಾರೆ. ಇನ್ನು, ಬಂಗಾಳಕೊಲ್ಲಿಯಲ್ಲಿ ಮೇಲ್ಮೆನಲ್ಲಿ ಯಾವುದೇ ಫಾರ್ಮ್‌ ಉಂಟಾಗದ ಕಾರಣ ಬಿಸಿಲಿನ ಪ್ರಮಾಣ ಜಾಸ್ತಿಯಾಗಿದ್ದು, ಮುಂದಿನ‌ ಒಂದು ವಾರ ಇದೇ ರೀತಿಯ ಅನುಭವ ಆಗಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕೆಎಂಎಫ್​​ ನಂದಿನಿ ತುಪ್ಪಕ್ಕೆ ಭಾರಿ ಡಿಮ್ಯಾಂಡ್; ಮತ್ತಷ್ಟು ತುಪ್ಪ ಪೂರೈಸುವಂತೆ ಟಿಟಿಡಿ ಮನವಿ

ಇನ್ನು, ಈ ಹವಾಮಾನ ವೈಪರಿತ್ಯದಿಂದಾಗಿ‌ ಮಕ್ಕಳಲ್ಲಿ‌ಶ್ವಾಸ ನಾಳ ಹಾಗೂ ಉಸಿರಾಟದ ಸಮಸ್ಯೆಗಳು ಕಂಡುಬರುತ್ತಿದ್ದು, ಹೊರಗಡೆ ಊಟವನ್ನ ಕಂಟ್ರೋಲ್ ಮಾಡಿ ಅಂತ ಡಾಕ್ಟರ್​ಗಳು ಸಲಹೆ ನೀಡ್ತಿದ್ದಾರೆ.

ಒಟ್ನಲ್ಲಿ, ಮಳೆಗಾಲದಲ್ಲಿಯೂ ಬಿಸಿಲಿನ ಫೀಲ್ ಆಗುತ್ತಿದ್ದು, ಸ್ಕಿನ್ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಜನರು ಆರೋಗ್ಯದ ಮೇಲೆ ನಿಗಾ ವಹಿಸಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ