ಬೆಂಗಳೂರಿನಲ್ಲಿ ಮಹಿಳೆ ಕೊಲೆ ಕೇಸ್: ಮೃತಳೊಂದಿಗೆ ಸಂಪರ್ಕದಲ್ಲಿದ್ದ ಓರ್ವನ ಮೇಲೆ ಶಂಕೆ, ತಾಯಿ ದೂರಿನನ್ವಯ ಎಫ್ಐಆರ್
ಬೆಂಗಳೂರು ನಗರದಲ್ಲಿ ಹೊರ ರಾಜ್ಯದ ಮಹಿಳೆ ಬರ್ಬರ ಕೊಲೆ ಮಾಡಿ ಶವವನ್ನು 28 ಪೀಸ್ ಮಾಡಿ ಫ್ರಿಜ್‌ನಲ್ಲಿಟ್ಟಿರುವ ಭಯಾನಕ ಘಟನೆ ವೈಯಾಲಿಕಾವಲ್‌ನ ಪೈಪ್‌ಲೈನ್ ರಸ್ತೆಯ ವೀರಣ್ಣ ಭವನದ ಬಳಿ ನಡೆದಿದೆ. ಸದ್ಯ ಮೃತಳ ತಾಯಿ ದೂರು ಆಧರಿಸಿ ಪೊಲೀಸರು ಎಫ್ಐಆರ್ ದಾಖಲಿಸಲಾಗಿದೆ. ಓರ್ವನ ಮೇಲೆ ಸದ್ಯ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು, ಸೆಪ್ಟೆಂಬರ್ 21: ಸಿಲಿಕಾನ್ ಸಿಟಿ ಶನಿವಾರ ಭಯಾನಕ ಕೌರ್ಯಕ್ಕೆ ಸಾಕ್ಷಿಯಾಗಿದೆ. ದೆಹಲಿಯ ಶ್ರದ್ದಾ ವಾಕರ್ ಹತ್ಯೆಯ ಮಾದರಿಯಲ್ಲಿ ವೈಯಲಿಕಾವಲ್‌ನಲ್ಲಿ ಕೊಲೆಯಾಗಿದೆ. ಇಲ್ಲಿನ ವಿನಾಯಕ ಲೇಔಟ್‌ನಲ್ಲಿರುವ ಮನೆಯಲ್ಲಿ ಒಂಟಿ ಮಹಿಳೆಯ (Woman) ಬರ್ಬರ ಹತ್ಯೆಯಾಗಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಾಲಕ್ಷ್ಮೀ ತಾಯಿ ಸೀಮಾ ಅವರಿಂದ ದೂರು ಪಡೆದಿರುವ ಪೊಲೀಸರು ಎಫ್ಐಆರ್ ದಾಖಿಲಿಸಿಕೊಂಡಿದ್ದಾರೆ. ಕೊಲೆ ಆರೋಪಿಗಾಗಿ 8 ತಂಡಗಳನ್ನು ರಚಿಸಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೃತ ಮಹಾಲಕ್ಷ್ಮೀ ತಾಯಿಯೇ ಮೊದಲು ಕೊಲೆ ನೋಡಿದ್ದಾಗಿ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ವಾಸನೆ ಬರುತ್ತಿದೆ ಎಂದು ಅಕ್ಕಪಕ್ಕದ ಮನೆಯವರು ಫೋನ್ ಮಾಡಿ ಅವರನ್ನು ಕರೆಸಿದ್ದಾರೆ. ತಾಯಿ ಮನೆಗೆ ಬಂದಾಗ ಬಾಗಿಲು ತೆರೆದಿದ್ದಾರೆ. ಆಗ ಭಯಾನಕ ಸ್ಥಿತಿ ಕಂಡು ಗಾಬರಿಯಾಗಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಈ ನಡುವೆ ತಾಯಿ ಮೃತ ಮಹಾಲಕ್ಷ್ಮೀ ಗಂಡನಿಗೆ ಫೋನ್ ಮಾಡಿ ಮಾಹಿತಿ ನೀಡಿ ಕರೆಸಿದ್ದಾರೆ. ಈ ವೇಳೆ ಮೃತಳ ಗಂಡ ಮತ್ತು ಆಕೆಯ ನಾಲ್ಕು ವರ್ಷದ ಮಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮೇಲಿನ ಮನೆಯವರಿಗೆ ಕೆಲವು ಬಾರಿ ಸಣ್ಣ ಪ್ರಮಾಣದಲ್ಲಿ ವಾಸನೆ ಬಂದಿದೆ. ಆದಾದ ಮೇಲೆ ಹೆಚ್ಚಾಗಿ ವಾಸನೆ ಬಗ್ಗೆ ಯಾರು ಗಮನ ಹರಿಸಿಲ್ಲ. ಅಕ್ಕಪಕ್ಕದ ಏರಿಯಾ ಸಹ ಸ್ವಲ್ಪಮಟ್ಟಿಗೆ ಗಲೀಜಾಗಿರುವ ಕಾರಣ ವಾಸನೆ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ. ಮೃತ ದೇಹ ಫ್ರಿಡ್ಜ್ನಲ್ಲಿ ಇದ್ದ ಕಾರಣ ಹೆಚ್ಚು ವಾಸನೆ ಬಂದಿಲ್ಲ.
ಓರ್ವನ ಮೇಲೆ ಶಂಕೆ
ಈ ಹಿಂದೆ ನೆಲಮಂಗಲದ ಬಳಿ ಪತಿ ಜೊತೆ ಮಹಾಲಕ್ಷ್ಮೀ ವಾಸವಿದ್ದರು. ಆದರೆ ಗಂಡನ ಜೊತೆ ಬೇರೆಯಾದ ಬಳಿಕ ಒಬ್ಬಳೇ ಸುಮಾರು 6-7 ತಿಂಗಳಿಂದ ವೈಯಾಲಿಕಾವಲ್‌ನಲ್ಲಿ ವಾಸವಿದ್ದರು. ಮಂತ್ರಿ ಮಾಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಪ್ರತಿ ನಿತ್ಯ ಬೈಕ್‌ನಲ್ಲಿ ಓರ್ವ ಮನೆಗೆ ಪಿಕಪ್, ಡ್ರಾಪ್ ಮಾಡುತ್ತಿದ್ದ. ಕೊಲೆಯಾಗಿರುವ ಮಹಾಲಕ್ಷ್ಮೀಗೆ ಒಂದು ಮಗು ಸಹ ಇತ್ತು.
ಸೆಪ್ಟೆಂಬರ್ 2ರಂದು ಮಹಾಲಕ್ಷ್ಮೀ ಮೊಬೈಲ್ ಸ್ವಿಚ್ ಆಫ್ ಆಗಿತ್ತು. 19 ದಿನಗಳ ಹಿಂದೆಯೇ ಮಹಾಲಕ್ಷ್ಮೀಯನ್ನು ಕೊಲೆಗೈದಿರುವ ಮಾಹಿತಿ ಇದೆ. ಸದ್ಯ ಮೃತಳ ಜೊತೆ ನಿರಂತರ ಸಂಪರ್ಕದಲ್ಲಿದ್ದ ಓರ್ವನ ಮೇಲೆ ಅನುಮಾನ ವ್ಯಕ್ತವಾಗಿದೆ. ಮಹಾಲಕ್ಷ್ಮೀಗೆ ಓರ್ವ ಸಹೋದರಿ ಇದ್ದರು, ಇಬ್ಬರು ಅವಳಿ ಜವಳಿ ಮಕ್ಕಳಿದ್ದು, ಇಬ್ಬರೂ ಒಂದೇ ಕಟ್ಟಡದಲ್ಲಿ ಬೇರೆ ಬೇರೆ ಮನೆಯಲ್ಲಿ ವಾಸವಿದ್ದರು.
ದೇಹವನ್ನು ಉಲ್ಟಾ ಇಟ್ಟಿರುವ ಕೊಲೆಗಾರ
ಮೃತಳ ತಲೆಯನ್ನು ಫ್ರಿಡ್ಜ್ನ ತಳ ಭಾಗದಲ್ಲಿ, ಕೈ ಮತ್ತು ಕಾಲುಗಳನ್ನು ಮೇಲ್ಬಾಗದಲ್ಲಿ ಇಡಲಾಗಿದೆ. ಮುಖ ಸಹ ಹೊರಗೆ ಕಾಣಿಸದಂತೆ ತಿರುಗಿಸಿ ಇಡಲಾಗಿದೆ. ಅಂದರೆ ದೇಹವನ್ನು ಉಲ್ಟಾ ಇಡಲಾಗಿದೆ. ದೇವನ್ನು ಪೀಸ್ ಪೀಸ್ ಮಾಡಲಾಗಿದೆ. ಮೊದಲಿಗೆ ಮೂವತ್ತು ಪೀಸ್ ಎಂದು ಅಂದಾಜು ಮಾಡಲಾಗಿತ್ತು. ನಂತರ ಇಪತ್ತೆಂಟು ಪೀಸ್ ಲೆಕ್ಕಾಚಾರ ಇತ್ತು.
ಇದನ್ನೂ ಓದಿ: ಹಾವೇರಿ: ರೋಡ್ ರೋಲರ್ ಹರಿದು ಕೂಲಿ ಕಾರ್ಮಿಕರಿಬ್ಬರು ಸ್ಥಳದಲ್ಲೇ ಸಾವು
ದೇಹವನ್ನು ಫ್ರಿಡ್ಜ್ನಿಂದ ಹೊರ ತೆಗೆದ ಬಳಿಕ ದೇಹದ ತುಂಡುಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಎಲ್ಲಾ ತುಂಡುಗಳನ್ನು ಪೊಲೀಸರು ಮತ್ತು ಎಫ್ಎಸ್ಎಲ್ ಅಧಿಕಾರಿಗಳು ಲೆಕ್ಕಾಚಾರ ಮಾಡುತ್ತಿದ್ದಾರೆ. ಶೀಟ್ ಒಂದರಲ್ಲಿ ಮೃತಳ ದೇಹದ ಪೀಸ್ಗಳ ಲೆಕ್ಕ ಬರೆದುಕೊಂಡಿದ್ದು, 50 ರಿಂದ 60 ಪೀಸ್ಗೂ ಹೆಚ್ಚಳ ಎನ್ನಲಾಗಿದೆ. ಸದ್ಯ ಮೃತ ದೇಹ ಮತ್ತು ಸ್ಥಳ ಪರಿಶೀಲನೆ ಮುಕ್ತಾಯವಾಗಿದ್ದು, ಮೃತ ದೇಹವನ್ನು ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಾಳೆ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:50 pm, Sat, 21 September 24