ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ: ಮೆರವಣಿಗೆ ತೆರಳುವಾಗ ಮುಸಲ್ಮಾನರಂತೆ ಸನ್ನದ್ಧರಾಗಿ ಹೋಗುವಂತೆ ಕರೆ

ಯಾದಗಿರಿಯ ಶಹಾಪುರದಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ ಸಿಂಹ, ‘ಹಿಂದೂಗಳಿಗೆ ಎಚ್ಚರಿಕೆ ಹಾಗೂ ಸಲಹೆ ಕೊಡಲು ಬಯಸ್ತೀನಿ. ಈ ಸರ್ಕಾರ ನಿಮ್ಮನ್ನ ರಕ್ಷಣೆ ‌ಮಾಡೋದಿಲ್ಲ, ಹೀಗಾಗಿ ಮುಸ್ಲಿಮರು ಹೇಗೆ ಪೆಟ್ರೋಲ್ ಬಾಂಬ್, ತಲ್ವಾರ್ ಬಳಸುತ್ತಾರೋ, ಹಾಗೇ ನೀವು ಕೂಡ ಸನ್ನದ್ಧರಾಗಿ‌ ಮೆರವಣಿಗೆ ಹೋಗಿ ಎಂದು ಕರೆ ಕೊಟ್ಟಿದ್ದಾರೆ.

ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ: ಮೆರವಣಿಗೆ ತೆರಳುವಾಗ ಮುಸಲ್ಮಾನರಂತೆ ಸನ್ನದ್ಧರಾಗಿ ಹೋಗುವಂತೆ ಕರೆ
ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ
Follow us
ಅಮೀನ್​ ಸಾಬ್​
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 21, 2024 | 9:00 PM

ಯಾದಗಿರಿ, ಸೆ.21: ಮುಸಲ್ಮಾನರಂತೆ ಪೆಟ್ರೋಲ್ ‌ಬಾಂಬ್, ಕಲ್ಲು ಹಿಡಿದು ಶೋಭಾಯಾತ್ರೆಗೆ ಹೋಗುವಂತೆ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಹಿಂದೂಗಳಿಗೆ ಕರೆ ಕೊಟ್ಟಿದ್ದು, ಈ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದಾರೆ. ಇಂದು(ಶನಿವಾರ) ಯಾದಗಿರಿಯ ಶಹಾಪುರದಲ್ಲಿ ಮಾತನಾಡಿದ ಅವರು, ‘ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗದಲ್ಲಿ ಬಹಳ ದೊಡ್ಡ ಶೋಭಾಯಾತ್ರೆ ಇದೆ. ಲಕ್ಷಾಂತರ ಜನ ಹಿಂದೂಗಳು ಭಾಗಿ ಆಗುತ್ತಾರೆ. ಹಿಂದೂಗಳಿಗೆ ಎಚ್ಚರಿಕೆ ಹಾಗೂ ಸಲಹೆ ಕೊಡಲು ಬಯಸ್ತೀನಿ. ಈ ಸರ್ಕಾರ ನಿಮ್ಮನ್ನ ರಕ್ಷಣೆ ‌ಮಾಡೋದಿಲ್ಲ, ಹೀಗಾಗಿ ಮುಸ್ಲಿಮರು ಹೇಗೆ ಪೆಟ್ರೋಲ್ ಬಾಂಬ್, ತಲ್ವಾರ್ ಬಳಸುತ್ತಾರೋ, ಹಾಗೇ ನೀವು ಕೂಡ ಸನ್ನದ್ಧರಾಗಿ‌ ಮೆರವಣಿಗೆ ಹೋಗಿ ಎಂದು ಕರೆ ಕೊಟ್ಟಿದ್ದಾರೆ.

ಇನ್ನು ನಾಗಮಂಗಲದಲ್ಲಿ ಒಂದು ವಾರದ ಹಿಂದೆ ನಡೆದ ಘಟನೆ ನೋಡಿದರೆ ರಾಜ್ಯ ಸರ್ಕಾರಕ್ಕೆ ಗಣೇಶ ಮೆರವಣಿಗೆ, ಹಿಂದೂಗಳ ಹಬ್ಬ ಹರಿದಿನ ನಡೆಯುವುದು ಇಷ್ಟವಿಲ್ಲ ಎಂಬ ಸಂದೇಶವನ್ನ ನಾಗಮಂಗಲ ಘಟನೆ ‌ಮೂಲಕ ಹೊರ ಹಾಕಿದೆ. ಕಳೆದ ವರ್ಷ ನಾಗಮಂಗಲದ ಮೈಸೂರು ರಸ್ತೆ ಬಳಿ ದರ್ಗಾ ಎದುರು ಗಲಾಟೆ ಆಗಿತ್ತು. ಅನಗತ್ಯವಾಗಿ ಮುಸಲ್ಮಾನರು ಕಲ್ಲು ತೂರಾಟ ಮಾಡಿದ್ದರು. ಈ ವರ್ಷ ಅದೇ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋಗುತ್ತದೆ ಎಂದು  ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕಿತ್ತು. ಆದ್ರೆ, ಅದೇ ರಸ್ತೆಯಲ್ಲಿ ಈ ಬಾರಿ ಮೆರವಣಿಗೆ ಹೋಗಬೇಕಾದರೆ ಕಲ್ಲು ತೂರಾಟ ಮಾತ್ರವಲ್ಲ, ಪೆಟ್ರೋಲ್ ಬಾಂಬ್ ಹಾಕಿ ಕಲ್ಲು, ಚಪ್ಪಲಿ ಬಿಸಾಡಿ ತಲ್ವಾರ್ ತೋರಿಸಿದರು. ಹಾಗೇ ಹಿಂದೂಗಳ ಅಂಗಡಿ ಟಾರ್ಗೆಟ್ ‌ಮಾಡಿ ಸುಟ್ಟು ಹಾಕಿದರು. ಇಷ್ಟಾದರೂ ಸಹ ಅದೇನೂ ಆಕಸ್ಮಿಕ ಘಟನೆ ಎನ್ನುವ ರೀತಿ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಇತ್ತು.

ಇದನ್ನೂ  ಓದಿ:ಮುಸ್ಲಿಮರಿಂದ ಪೆಟ್ರೋಲ್ ಬಾಂಬ್, ತಲ್ವಾರ್ ಕಿತ್ತುಕೊಳ್ಳದಿದ್ದರೆ ನಾವು ಹಿಡಿಯಬೇಕಾಗುತ್ತೆ: ಪ್ರತಾಪ್ ಸಿಂಹ

ಈ ರಾಜ್ಯದ ಗೃಹ ಸಚಿವ ಪರಮೇಶ್ವರ ಹಾಗೂ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರಿಗೆ ಹಿಂದೂಗಳ ಬಗ್ಗೆ ಯಾವುದೇ ಸದಾಭಿಪ್ರಾಯವಿಲ್ಲ. ನಿಷ್ಠುರ ಭಾವನೆ ಇಟ್ಟಕೊಂಡು ನಿಷ್ಠೂರವಾಗಿಯೇ ನಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಎಲ್ಲೂ ಸಿದ್ದರಾಮಯ್ಯ ಅವರಿಗೆ ಗಣೇಶ ಮೆರವಣಿಗೆ ನಡೆಯೋದು ಇಷ್ಟವಿಲ್ಲ. ಸಿದ್ದರಾಮಯ್ಯ ‌ಮೊದಲಿನಿಂದಲೂ ಮುಸಲ್ಮಾನರ ಓಲೈಕೆ ಮಾಡ್ತಿದ್ದಾರೆ. ಸಿಎಂ ಅವರೇ ನಿಮಗೆ ಹಿಂದೂಗಳು ಓಟ್ ಹಾಕಿಲ್ವಾ?, 39 ಜನ ವೀರಶೈವ ಸಮಾಜದ ಶಾಸಕರು ನಿಮಗೆ ಬೆಂಬಲ ಕೊಟ್ಟಿಲ್ವಾ? ಆದ್ರೂ ನೀವು‌ ಮಾತೇತ್ತಿದ್ದರೆ ಹಿಂದೂಳಿದವರು ಎಂದು ಮಾತಾಡುತ್ತೀರಿ. ಹಿಂದೂಗಳ ಬಗ್ಗೆ ಧ್ವನಿ ಎತ್ತುವವರನ್ನ ಜಿಲ್ಲೆಗೆ ಬಾರದಂತೆ ನಿಷೇದಾಜ್ಞೆ ಹೊರಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಮಸೀದಿಗಳಿಂದ‌, ಮೂಲ್ಲಾಗಳಿಂದ ಎಂಥಂತಹ ಪ್ರಚೋದನಾಕಾರಿ ಹೇಳಿಕೆ ಬಂದರೂ ಕೂಡ ರಾಜ್ಯ ಸರ್ಕಾರ ಒಂದೇ ಒಂದು ದಿನಕ್ಕೂ‌ ಅವರ ವಿರುದ್ಧ ಆ್ಯಕ್ಷನ್ ತೆಗೆದುಕೊಳ್ಳಲಿಲ್ಲ. ಮೊನ್ನೆ ‌ಪುನೀತ್, ಶರಣ ಪಂಪ್ ವೆಲ್ ಹುಡುಕಿಕೊಂಡು ಆರ್ ಎಸ್ ಎಸ್ ಕಚೇರಿಗೆ ನುಗ್ಗಿದರು. ಆದರೆ, ನಾಗಮಂಗಲ ಗಲಾಟೆಯಲ್ಲಿ ಪೆಟ್ರೋಲ್ ಬಾಂಬ್, ತಲ್ವಾರ್ ಎಲ್ಲಿಂದ ಬಂತು ಎಂದು ಮಸೀದಿಗೆ ನುಗ್ಗಿದ್ರಾ?. ಮಸೀದಿಗೆ ನುಗ್ಗೋಕೆ ಇವರ ಕೈ ಯಿಂದ ಆಗೋಲ್ಲ. ಆದರೆ ಹಿಂದೂಗಳನ್ನ ಟಾರ್ಗೆಟ್ ‌ಮಾಡೋಕೆ ಪ್ರಯತ್ನ ‌ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Sat, 21 September 24

ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹ ರೀತಿ ಬರ್ತೀನಿ; ಚೈತ್ರಾ ಕುಂದಾಪುರ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಮೈಸೂರು: ಮುಡಾದಲ್ಲಿ 5 ಸಾವಿರ ಕೋಟಿ ರೂ. ಹಗರಣ, ಗಂಗರಾಜು ಗಂಭೀರ ಆರೋಪ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
ಗಣೇಶನಿಗೆ ತುಳಸಿಯನ್ನು ಯಾಕೆ ಅರ್ಪಿಸಬಾರದು? ತಿಳಿಯಲು ಈ ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
Nithya Bhavishya: ಈ ರಾಶಿಯವರಿಗೆ ಇಂದು ವ್ಯಾಪಾರದಲ್ಲಿ ಶುಭವಾಗಲಿದೆ
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಕೆಲಸಕ್ಕೆ ಮುಸ್ಲಿಂ ಯುವತಿಯನ್ನು ಕರೆ ತಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ!
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಪೋಷಕರೇ ಎಚ್ಚರ! ಆಟವಾಡುವಾಗ ಗೇಟ್ ಬಿದ್ದು ಒಂದೂವರೆ ವರ್ಷದ ಮಗು ಸಾವು
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ
ಭಕ್ತನಂತೆ ದೇವಸ್ಥಾನಕ್ಕೆ ಬಂದು ದೇವರ ವಿಗ್ರಹವನ್ನೇ ಕದ್ದ ಖತರ್ನಾಕ್ ಕಳ್ಳ