AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆ ಬಿಸಿಲಿನ ಝಳ ಹೆಚ್ಚಾದಂತೆ ಹೆಚ್ಚುತ್ತಿದೆ ಕಾಲೋಚಿತ ಹಣ್ಣು ಮತ್ತು ತರಕಾರಿಗಳ ಬೆಲೆ

ಬೆಂಗಳೂರಲ್ಲಿ ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್​​ಗೆ ಮುಟ್ಟಿದ್ದು ಕೆಆರ್​ ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆ, ಯಶವಂತಪುರ, ಮಡಿವಾಳ ಮತ್ತು ಹಾಪ್​ಕಾಮ್ಸ್​​ಗಳಲ್ಲಿ ಈಗಾಗಲೆ ಕಾಲೋಚಿತವಾಗಿ ಸಿಗುವ ಕಲ್ಲಂಗಡಿ, ಕರಬೂಜ ಹಣ್ಣು ಮತ್ತು ಟೊಮೇಟೊ ಹಣ್ಣುಗಳ ಬೆಲೆ ಜಾಸ್ತಿಯಾಗಿವೆ.

ಬೇಸಿಗೆ ಬಿಸಿಲಿನ ಝಳ ಹೆಚ್ಚಾದಂತೆ ಹೆಚ್ಚುತ್ತಿದೆ ಕಾಲೋಚಿತ ಹಣ್ಣು ಮತ್ತು ತರಕಾರಿಗಳ ಬೆಲೆ
ಸಾಂಧರ್ಬಿಕ ಚಿತ್ರ
ವಿವೇಕ ಬಿರಾದಾರ
|

Updated on: Mar 07, 2023 | 8:10 AM

Share

ಬೆಂಗಳೂರು: ಚಳಿಗಾಲ ಮುಗಿದು ಬೇಸಿಗೆ ಶುರುವಾಗಿದೆ. ಶಿವರಾತ್ರಿ (Shivaratri) ಮುಗಿಯುತ್ತಿದ್ದಂತೆ ಶಿವ ಶಿವ ಎನ್ನುವಷ್ಟು ಬಿಸಿಲಿನ ತಾಪಮಾನ ಏರುತ್ತಾ ಹೋಗುತ್ತದೆ. ಈ ಸಮಯದಲ್ಲಿ ತಂಪಾದ ಪಾನಿಯಾ, ಹಣ್ಣು ಮತ್ತು ತರಕಾರಿಗಳಿಗೆ ಭಾರೀ ಬೇಡಿಕೆ ಬರುತ್ತದೆ. ಇನ್ನು ಸಿಲಿಕಾನ್​ ಸಿಟಿಯಲ್ಲಿ (Silicon city) ಬಿಸಿಲಿನ ತಾಪಮಾನ 30 ಡಿಗ್ರಿ ಸೆಲ್ಸಿಯಸ್​​ಗೆ ಮುಟ್ಟಿದ್ದು, ಜನರು ಬಿಸಿಲಿನ ಬೇಗೆಗೆ ಹೈರಾಣಾಗುತ್ತಿದ್ದಾರೆ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಟ್ಟುಕೊಳ್ಳಲು ಜನರು ತಂಪಾದ ಹಣ್ಣು ಮತ್ತು ತರಕಾರಿಗಳ ಮೊರೆ ಹೋಗಿದ್ದು, ಆದರೆ ಇವುಗಳ ಬೆಲೆ ಕೂಡ ಗಗನಕ್ಕೇರಿವೆ.

ನಗರದ ಹಣ್ಣಿನ ಮಾರುಕಟ್ಟೆಗಳಾದ ಕೆಆರ್​ ಮಾರುಕಟ್ಟೆ (KR Market), ಕಲಾಸಿಪಾಳ್ಯ ಮಾರುಕಟ್ಟೆ (Kalasipalya Market), ಯಶವಂತಪುರ (Yeshwantpur), ಮಡಿವಾಳ (Madiwala) ಮತ್ತು ಹಾಪ್​ಕಾಮ್ಸ್​​ಗಳಲ್ಲಿ (Hopcoms) ಈಗಾಗಲೆ ಕಾಲೋಚಿತವಾಗಿ ಸಿಗುವ ಕಲ್ಲಂಗಡಿ, ಕರಬೂಜ ಹಣ್ಣು ಮತ್ತು ಟೊಮೇಟೊ ಹಣ್ಣುಗಳ ಬೆಲೆ ಜಾಸ್ತಿಯಾಗಿವೆ. ಕಲ್ಲಂಗಡಿ ಹಣ್ಣಿನ ಬೆಲೆ ಕಳೆದ ಕೆಲವು ದಿನಗಳಲ್ಲಿ ಶೇ 50 ರಷ್ಟು ಏರಿಕೆಯಾಗಿದೆ. ಕಳೆದ ವಾರ ಕಲ್ಲಂಗಡಿ ಹಣ್ಣು ಕೆಜಿಗೆ 15 ರಿಂದ 20 ರೂ. ಮಾರಾಟವಾಗುತ್ತಿತ್ತು. ಆದರೆ ಈಗ ಪ್ರತಿ ಕೆಜಿಗೆ 20-30 ರೂ. ಮಾರಾಟ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾದರೆ ಬೆಲೆ ಇನ್ನೂ ಜಾಸ್ತಿಯಾಗುವ ಸಾಧ್ಯತೆ ಇದೆ.

ಕೆ ಆರ್​ ಮಾರುಕಟ್ಟೆಯಲ್ಲಿ ಓರ್ವ ವ್ಯಾಪಾರಸ್ತ ಹೇಳುವ ಪ್ರಕಾರ ಈಗಾಗಲೆ ಕಲ್ಲಂಡಿ ಹಣ್ಣಿನ ಬೆಲೆ ಏರಿಕೆಯಾಗಿದೆ. ನಾವು ಪ್ರತಿ ದಿನ 50 ರಿಂದ 250 ಟನ್​ ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಕಲ್ಲಂಗಡಿ ಹಣ್ಣಿನ ಬೇಡಿಕೆ ಜಾಸ್ತಿಯಾದರೇ ಬೆಲೆ ಕೂಡ ಜಾಸ್ತಿಯಾಗುತ್ತದೆ ಮತ್ತು ಮಾರಾಟ ಕೂಡ ಜಾಸ್ತಿಯಾಗುತ್ತದೆ ಎಂದು ಹೇಳಿದ್ದಾರೆ.

ಕೆ.ಆರ್.ಮಾರುಕಟ್ಟೆಯಲ್ಲಿ ಸುಮಾರು ಹತ್ತಾರು ಸಗಟು ಕಲ್ಲಂಗಡಿ ವ್ಯಾಪಾರಿಗಳಿದ್ದಾರೆ. ಪ್ರತಿ ಕಲ್ಲಂಗಡಿ 4 ಕೆಜಿಯಿಂದ 12 ಕೆಜಿ ತೂಗುತ್ತದೆ. ಸದ್ಯದ ಮಟ್ಟಿಗೆ ಕೆ.ಆರ್.ಮಾರುಕಟ್ಟೆಯಲ್ಲಿ ಪ್ರತಿ ಸಗಟು ಮಾರಾಟಗಾರರು 1ಕೆಜಿ ಮಾರಾಟ ಮಾಡುತ್ತಿದ್ದಾರೆ. ಬೇಸಿಗೆ ಹೆಚ್ಚಾದಂತೆ ಕಲ್ಲಂಗಡಿ ಹಣ್ಣಿಗೆ ಬೇಡಿಕೆ ಹೆಚ್ಚಲಿದ್ದು, ಬೆಲೆ ಏರಿಕೆಯಾಗಲಿದೆ ಎಂದು ಕೆ.ಆರ್.ಮಾರುಕಟ್ಟೆಯ ಸಗಟು ಹಣ್ಣು ಮಾರಾಟಗಾರ ಮಂಜುನಾಥ್ ತಿಳಿಸಿದ್ದಾರೆ.

ಹಣ್ಣಿನ ಅಂಗಡಿಗಳ ಹೊರತಾಗಿ, ಬೇಸಿಗೆಯಲ್ಲಿ, ಬೆಂಗಳೂರಿನ ಹಲವಾರು ಬೀದಿ ಬದಿ ವ್ಯಾಪಾರಿಗಳು ಸಹ ಸಣ್ಣ ಪ್ರಮಾಣದಲ್ಲಿ ಕಲ್ಲಂಗಡಿ ಹಣ್ಣುಗಳನ್ನು ಮಾರಾಟ ಮಾಡಲು ಪ್ರಾರಂಭಿಸುತ್ತಾರೆ. ಈಗ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು 10 ರೂ.ಗೆ ಮಾರುತ್ತಿದ್ದಾರೆ. ಅನೇಕ ಮಾರಾಟಗಾರರು ಸಂಪೂರ್ಣ ಹಣ್ಣನ್ನು ಮಾರಾಟ ಮಾಡುವುದಕ್ಕಿಂತ ಹೆಚ್ಚು ತುಂಡುಗಳನ್ನು ಮಾರಾಟ ಮಾಡುತ್ತಾರೆ.

ಇನ್ನು ಪ್ರತಿಕೂಲ ಹವಾಮಾನದ ಕಾರಣದಿಂದ ಈ ವರ್ಷ ಹಣ್ಣುಗಳ ಉತ್ಪಾದನೆಯು ಕುಸಿಯುವ ಸಾಧ್ಯತೆಯಿದೆ. ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯು ಈ ಋತುವಿನಲ್ಲಿ 30 ಪ್ರತಿಶತದವರೆಗೆ ಕುಸಿಯಬಹುದು, ಮುಖ್ಯವಾಗಿ ಹೂಬಿಡುವ ಮತ್ತು ಫ್ರುಟಿಂಗ್ ಪ್ರಕ್ರಿಯೆಯ ಸಮಯದಲ್ಲಿ ಹೆಚ್ಚಿನ ತಾಪಮಾನದಿಂದಾಗಿ ಉತ್ಪಾದನೆ ಕಡಿಮೆಯಾಗುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?