ಬೆಂಗಳೂರು, ಜೂ.27: ಸಿಲಿಕಾನ ಸಿಟಿ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅದರಂತೆ ಇದೀಗ ಆರ್.ಟಿ.ನಗರ(RT Nagar)ದ ಮನೆಯೊಂದರಲ್ಲಿ ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. 25 ವರ್ಷದ ರಂಜಿತಾ ಮೃತ ರ್ದುದೈವಿ. ದಂಪತಿ ಸೇರಿಕೊಂಡು ತಳ್ಳುವ ಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದ್ದು, ಯಾವ ಕಾರಣಕ್ಕೆ ಸಾವನ್ನಪ್ಪಿದ್ದಾರೆ ಎಂಬುದು ಇನ್ನು ತಿಳಿದಿಲ್ಲ. ಘಟನಾ ಸ್ಥಳಕ್ಕೆ ಆರ್.ಟಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆ: ತೇರದಾಳ ತಾಲೂಕಿನ ಹನಗಂಡಿ ಗ್ರಾಮದಲ್ಲಿ ಶ್ವಾನಗಳ ದಾಳಿಗೆ 3 ಮೇಕೆಗಳು ದಾರುಣವಾಗಿ ಕೊನೆಯುಸಿರೆಳೆದಿದೆ. ಇನ್ನುಳಿದಂತೆ ಮೂರು ಮೇಕೆ, ಒಂದು ಕುರಿ, ಐದು ದಿನದ ಕರುವಿಗೆ ಶ್ವಾನಗಳು ಕಚ್ಚಿ ಗಾಯಗೊಳಿಸಿದೆ. ಧರೇಶ್ ಎಂಬುವರಿಗೆ ಕರು ಸೇರಿದ್ದು, ಮೇಕೆಗಳು ಹಸನ್ ಸಾಬ್ ಅಲಸ್, ತಾಲಿಬ್ ಅಲಸ್ ಎಂಬುವರಿಗೆ ಸೇರಿದೆ. ಇನ್ನು ಕುರಿ, ವಿಠ್ಠಲ ಮಾಖಾನಿ ಎಂಬುವವರದ್ದಾಗಿದೆ. ಘಟನೆ ನಡೆಯುತ್ತಿದ್ದಂತೆ ಬೀದಿ ನಾಯಿಗಳ ಸ್ಥಳಾಂತರಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಉಡುಪಿ, ಮಂಗಳೂರಿನಲ್ಲಿ ಭಾರಿ ಮಳೆ; ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ, ಮಂಗಳೂರಿನಲ್ಲಿಬ್ಬರು ಸಾವು
ರಾಯಚೂರು: ನಗರದ ಹೊರವಲಯದ ಪವರ್ ಗ್ರಿಡ್ ಬಳಿ ಮರಳು ಸಾಗಣೆ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ದುರ್ಘಟನೆಯಲ್ಲಿ ಲಾರಿ ಚಾಲಕನ ಕಾಲು ಮುರಿದಿದ್ದು, ರಾಜಾವಲಿ ಸಾಬ್ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಯಚೂರಿನ ಜಂಬಣ್ಣ ಎಂಬುವರಿಗೆ ಸೇರಿದ ಮರಳಿನ ಟಿಪ್ಪರ್ ಇದಾಗಿದ್ದು, ಅಪಘಾತ ನಡೆಯುತ್ತಿದ್ದಂತೆ ಟಿಪ್ಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಘಟನೆ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ