ಕರ್ನಾಟಕದ ಹಿತ ಕಾಯಲು ಬದ್ಧರಾಗಿದ್ದೇವೆ ಎನ್ನುತ್ತಲೇ ಸಿಎಂಗೆ ಕೆಲ ಬೇಡಿಕೆ ಇಟ್ಟ ಬಿಜೆಪಿ ಸಂಸದರು

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು(ಗುರುವಾರ) ಸಂಸದರು, ಮಂತ್ರಿಗಳ ಸಭೆಯನ್ನು ನವದೆಹಲಿಯ ಖಾಸಗಿ ಹೋಟೆಲ್​ವೊಂದರಲ್ಲಿ ಆಯೋಜಿಸಲಾಗಿತ್ತು. ಸಭೆಯಲ್ಲಿ ರೈಲ್ವೆ, ನೀರಾವರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದ್ದು, ಇದೀಗ ಸಭೆಯ ಕುರಿತು ಸಚಿವ ಪ್ರಹ್ಲಾದ್​ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಹಿತ ಕಾಯಲು ಬದ್ಧರಾಗಿದ್ದೇವೆ ಎನ್ನುತ್ತಲೇ ಸಿಎಂಗೆ ಕೆಲ ಬೇಡಿಕೆ ಇಟ್ಟ ಬಿಜೆಪಿ ಸಂಸದರು
ಸಿಎಂ ನೇತೃತ್ವದ ನೂತನ ಸಂಸದರ ಸಭೆ ಅಂತ್ಯ; ಜೋಶಿ, ಬೊಮ್ಮಾಯಿ ಹೇಳಿದ್ದಿಷ್ಟು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Jun 27, 2024 | 11:01 PM

ನವದೆಹಲಿ, ಜೂ.27: ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಇಂದು(ಗುರುವಾರ) ದೆಹಲಿಯ ಖಾಸಗಿ ಹೋಟೆಲ್​ನಲ್ಲಿ ರಾಜ್ಯದಿಂದ ಆಯ್ಕೆಯಾದ ನೂತನ ಸಂಸದರ ಸಭೆಯನ್ನು ಆಯೋಜಿಸಿದ್ದರು. ಈ ವೇಳೆ ಕರ್ನಾಟಕದ ಸಂಪನ್ಮೂಲ, ನೆಲ, ಜಲ ಕುರಿತು ಸುದಿರ್ಘ ಸಮಾಲೋಚನೆ ನಡೆಸಲಾಯಿತು. ಇದೀಗ ಸಭೆ ಮುಗಿದಿದ್ದು, ಸಭೆ ಬಳಿಕ ಹಲವು ನಾಯಕರು ಪ್ರತಿಕ್ರಿಯಿಸಿದ್ದಾರೆ. ಯಾರ್ಯಾರು ಏನೇನು ಹೇಳಿದರು? ಈ ಕುರಿತು ವಿವರ ಇಲ್ಲಿದೆ.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ

ಈ ಸಭೆ ಬಳಿಕ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ‘ಸಿಎಂ ಎಲ್ಲ ಸಂಸದರ ಸಭೆ ನಡೆಸಿದರು. ಸಭೆಯಲ್ಲಿ ಅನೇಕ ವಿಷಯಗಳು ಇತ್ತು. ನಾವು ಅವರಿಗೆ ಒಂದು ಮನವಿ ನೀಡಿದ್ದೇವೆ. ಅವರು ಕೂಡ ಹಲವಾರು ಯೋಜನೆ ಅನುಮತಿಗೆ ಮನವಿ ಮಾಡಿದ್ದಾರೆ. ನೆಲ, ಜಲ, ಸಂಸ್ಕೃತಿ ಭಾಷೆಗಾಗಿ ನಾವು ಬದ್ಧರಾಗಿ ಕೆಲಸ ಮಾಡುತ್ತೇವೆ ಎಂದರು.

ಇನ್ನು ರಾಜ್ಯದ ಹಿತ ಕಾಯಲು ಬದ್ಧರಾಗಿದ್ದೇವೆ, ಈ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ. ಕೆಲವು ಜಲ ಯೋಜನೆಗಳು ಕೋರ್ಟ್ ನಲ್ಲಿದ್ದು, ಅಪ್ಡೇಟ್​ಗಳು ಸರಿಯಾಗಿ ಸಿಗುತ್ತಿಲ್ಲ. ಅದನ್ನು ಸರಿಪಡಿಸಲು ಮನವಿ ಮಾಡಿದೆ. ರೈಲ್ವೆ ಯೋಜನೆಗೆ ಅತ್ಯಧಿಕ ಹಣ ಬಿಡುಗಡೆಯಾಗಿದೆ. ಭೂಮಿ ವಶಪಡಿಸಿಕೊಳ್ಳುವುದು ಇದೆ, ಅದನ್ನು ರಾಜ್ಯ ಸರ್ಕಾರ ಮಾಡಬೇಕು. ಜೊತೆಗೆ ಬಿಡುಗಡೆ ಮಾಡಿರುವ ಹಣ ಮೊದಲು ಬಳಕೆ ಮಾಡಬೇಕು. ಇನ್ನು ರಾಷ್ಟ್ರೀಯ ಹೆದ್ದಾರಿಗಳ ವಿಚಾರದಲ್ಲಿ ಭೂಮಿ ವಶಪಡಿಸಿಕೊಂಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ:ನನ್ನ ವಿರುದ್ಧ ಸೋತಿದ್ದಕ್ಕೆ ಸೋಮಣ್ಣಗೆ ಕೇಂದ್ರದಲ್ಲಿ ಮಂತ್ರಿಯಾಗುವ ಯೋಗ ಸಿಕ್ಕಿತು! ಮುಖ್ಯಮಂತ್ರಿ ಸಿದ್ದರಾಮಯ್ಯ

ಬಸವರಾಜ ಬೊಮ್ಮಾಯಿ

ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಸದರು, ಮಂತ್ರಿಗಳ ಸಭೆ ನಡೆದಿದೆ. ಇದೊಂದು ಒಳ್ಳೆಯ ಸಂಪ್ರದಾಯ ಎಂದು ನಾನು ಭಾವಿಸುತ್ತೇನೆ ಎಂದು ದೆಹಲಿಯಲ್ಲಿ ಸಂಸದರ ಸಭೆ ಬಳಿಕ ಬಸವರಾಜ ಬೊಮ್ಮಾಯಿ ಹೇಳಿದರು. ‘ಎಲ್ಲರೂ ಒಟ್ಟಾಗಿ ಕೆಲಸ ಮಾಡಿದ್ರೆ ಯಶಸ್ವಿ ಆಗ್ತೇವೆ ಎನ್ನುವುದು ಮುಖ್ಯ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಕೆಲಸದ ಬಗ್ಗೆ ಉತ್ತಮ ಚರ್ಚೆ ಆಗಿದೆ. ಕೇಂದ್ರದ ಯೋಜನೆ ಜೊತೆ ರಾಜ್ಯದಲ್ಲೂ ಸಾಥ್ ಇದ್ರೆ ಅಭಿವೃದ್ಧಿ ಮಾಡಬಹುದು. ರೈಲ್ವೆ, ನೀರಾವರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಅವರ ಜೊತೆ ಕೈಜೋಡಿಸಿ ರಾಜ್ಯದ ಪ್ರಗತಿಗೆ ಕೆಲಸ ಮಾಡಲಿದ್ದೇವೆ. ಸಚಿವೆ ನಿರ್ಮಲಾ ಅವರು ಸಹ ಹಣಕಾಸು ಸಂಬಂಧ ಎಲ್ಲಾ ಮಾಹಿತಿ ನೀಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:00 pm, Thu, 27 June 24

ತಾಜಾ ಸುದ್ದಿ