ಬೆಂಗಳೂರು: ಇಂದು ಮಧ್ಯಾಹ್ನ 2.30ಕ್ಕೆ ಸ್ವಾಮೀಜಿಗಳಿಂದ ತುರ್ತು ಸುದ್ದಿಗೋಷ್ಠಿ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ತಿಪಟೂರಿನ ಷಡಕ್ಷರಿ ರುದ್ರಮುನಿ ಸ್ವಾಮಿ, ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಸ್ವಾಮೀಜಿ ಭಾಗಿಯಾಗಲಿದ್ದಾರೆ.
ರಾಜಕೀಯ ಬೆಳವಣಿಗೆ ಕುರಿತ ಸ್ವಾಮೀಜಿಗಳ ಬಗ್ಗೆ ಆಕ್ಷೇಪ ಹಿನ್ನೆಲೆಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜುಲೈ 25ಕ್ಕೆ ಸರ್ವ ಸಮಾಜಗಳ ಮಠಾಧೀಶರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ನಾಡಿನ ಹಿತದೃಷ್ಟಿ, ಪ್ರಸ್ತುತ ಬೆಳವಣಿಗೆಯ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುತ್ತೆ. ಹೀಗಾಗಿ ಈ ಸಂಬಂಧ ಮಾಹಿತಿ ನೀಡಲು ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಠಿ ನಡೆಸಲು ಸ್ವಾಮೀಜಿಗಳು ಮುಂದಾಗಿದ್ದಾರೆ.
ತುರ್ತು ಸುದ್ದಿಗೋಷ್ಠಿ ದಿನಾಂಕ 25 /7/ 2021 ರಂದು ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಅರಮನೆ ಮೈದಾನ ವೈಟ್ ಪೆಟ್ಲ್ ನಂಬರ್ 3ರಲ್ಲಿ ಸರ್ವ ಸಮಾಜಗಳ ಮಠಾಧೀಶರ ಸನ್ನಿಧಿಯಲ್ಲಿ ನಾಡಿನ ಹಿತದೃಷ್ಟಿಯಿಂದ ಹಾಗೂ ಪ್ರಸ್ತುತ ಬೆಳವಣಿಗೆಯ ಕುರಿತು ಚರ್ಚಿಸುವ ಉದ್ದೇಶದಿಂದ ಸಭೆಯನ್ನು ಆಯೋಜಿಸಲಾಗಿದೆ ಈ ಕಾರಣದಿಂದ ದಿನಾಂಕ 23 /7 /2021 ರಂದು ಸಮಯ 2:30 ತುರ್ತು ಸುದ್ದಿಗೋಷ್ಠಿ ಕರೆಯಲಾಗಿದೆ ಈ ಸುದ್ದಿಗೋಷ್ಠಿ ಕರೆಯಲಾಗಿದೆ ಈ ಸುದ್ದಿಗೋಷ್ಠಿಯಲ್ಲಿ ತಿಪಟೂರಿನ ಷಡಕ್ಷರಿ ರುದ್ರಮುನಿ ಸ್ವಾಮಿಗಳು ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಪುಷ್ಪಗಿರಿ ಸಂಸ್ಥಾನಮಠದ ಶ್ರೀ ಸೋಮಶೇಖರ ಸ್ವಾಮೀಜಿ ಹಾಗೂ ಬೊಮ್ಮನಹಳ್ಳಿ ಅಗಡಿ ಸೂಗೂರು ಅರಕಲಗೂಡು ಶಿಗ್ಗಾವ್ ಶನಿವಾರ ಸಂತೆ ಅಕ್ಕಿಆಲೂರು ಭಾಗವಹಿಸಲಿದ್ದಾರೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಹಿರೇಮಠದ ಉತ್ತರಾಧಿಕಾರಿಯನ್ನಾಗಿ 4 ವರ್ಷದ ಬಾಲಕನ ನೇಮಕ; ಹಸಿರು ಶಾಲು ಹೊದಿಸಿ ಪೀಠಾಧಿಪತಿಯಾಗಿ ಘೋಷಣೆ
Published On - 1:40 pm, Fri, 23 July 21