ಬೆಂಗಳೂರು ಭಾರತದ ಟೆಕ್ ಹಬ್ (Tech Hub) ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಬೆಂಗಳೂರು ವಿಚಿತ್ರ ಘಟನೆಗಳು ಮತ್ತು ಸನ್ನಿವೇಶಗಳ ಚಿನ್ನದ ಗಣಿ ಎಂದು ನಿಮಗೆ ತಿಳಿದಿದೆಯೇ? ಬೆಂಗಳೂರು ತಮಾಷೆಯ ಸಂಗತಿಗಳ ಕಾರಣದಿಂದ ಆಗಾಗ ಟ್ವಿಟ್ಟರ್ನಲ್ಲಿ ಸದ್ದಾಗುತ್ತಲೇ ಇರುತ್ತದೆ. ಕೆಲವು ದಿನಗಳ ಹಿಂದೆ ರೂಮ್‌ಮೇಟ್‌ಗಳಿಬ್ಬರ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಆ್ಯಪ್ ಚಾಟ್ (WhatsApp Chat) ಟ್ವಿಟರ್‌ನಲ್ಲಿ ವೈರಲ್ ಆಗಿತ್ತು. ಇದೀಗ, ಸ್ವಿಗ್ಗಿ ಫುಡ್ ಡೆಲಿವರಿ ಏಜೆಂಟ್‌ಗೆ ಸಂಬಂಧಿಸಿದ ಅಚ್ಚರಿಯ ಘಟನೆಯೊಂದು ವೈರಲ್ ಆಗಿದೆ.
ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕೆಫೆ ಕಾಫಿ ಡೇ (ಸಿಸಿಡಿ) ಔಟ್‌ಲೆಟ್‌ನಲ್ಲಿ ಕಾಫಿ ಕುಡಿಯಬೇಕೆನಿಸಿದ್ದರಿಂದ ಸ್ವಿಗ್ಗಿಯಲ್ಲಿ ಆರ್ಡರ್ ಮಾಡಿದ್ದರು. ಆ ಆರ್ಡರ್ ಅನ್ನು ಅಕ್ಸೆಪ್ಟ್ ಮಾಡಿದ ಸ್ವಿಗ್ಗಿ ಡೆಲಿವರಿ ಏಜೆಂಟ್ ಎಷ್ಟು ಹೊತ್ತಾದರೂ ಡೆಲಿವರಿ ನೀಡಲು ಬರಲಿಲ್ಲ. ಕೊನೆಗೆ ಅವರು ಫೋನ್ ಮಾಡಿ ಹೇಳಿದ ಮಾತು ಕೇಳಿ ಸ್ವಿಗ್ಗಿಯಲ್ಲಿ ಕಾಫಿ ಆರ್ಡರ್ ಮಾಡಿದ ಗ್ರಾಹಕನಿಗೆ ನಗಬೇಕೋ/ ಅಳಬೇಕೋ ತಿಳಿಯಲಿಲ್ಲವಂತೆ. (Source)
Hello @peakbengaluru, the latest Bangalore update is broken. pic.twitter.com/GlDRJgdreh
— Omkar Joshi (@omkar__joshi) May 4, 2022
Sounds like something from an episode of Silicon Valley
— Ronojoy Mazumdar (@RonoMaz) May 5, 2022
ಓಂಕಾರ್ ಜೋಶಿ ಎಂಬುವವರು ಟ್ವಿಟರ್‌ನಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಸ್ವಿಗ್ಗಿ ಡೆಲಿವರಿ ಏಜೆಂಟ್ ತಾನು ಕಾಫಿಯನ್ನು ಡೆಲಿವರಿ ನೀಡುವ ಬದಲು ಡಂಜೋ (Dunzo) ಎಂಬ ಮತ್ತೊಂದು ಡೆಲಿವರಿ ಅಪ್ಲಿಕೇಶನ್‌ನಿಂದ ಇನ್ನೊಬ್ಬ ವ್ಯಕ್ತಿಯನ್ನು ಬುಕ್ ಮಾಡಿ, ಅವರ ಮೂಲಕ ತನ್ನ ಗ್ರಾಹಕನಿಗೆ ಕಾಫಿಯನ್ನು ಕಳುಹಿಸಿಕೊಟ್ಟಿದ್ದಾರೆ. ತನ್ನ ಗ್ರಾಹಕನಿಗೆ ಡಂಜೋದಲ್ಲಿ ಕಾಫಿ ಕಳುಹಿಸಿರುವುದಾಗಿ ಹೇಳಿದ ಸ್ವಿಗ್ಗಿ ಡೆಲಿವರಿ ಬಾಯ್ ತನಗೆ 5 ಸ್ಟಾರ್ ಕೊಡುವಂತೆ ಮನವಿ ಮಾಡಿದ್ದಾನೆ!
Can I dunzo myself to office ?
Ola/Uber be changing 300.— nithin kagalkar (@KagalkarNithin) May 5, 2022
ಈ ಟ್ವೀಟ್ 2,500 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಈ ಪೋಸ್ಟ್ ನೋಡಿ ನೆಟಿಜನ್‌ಗಳು ತಮಾಷೆಯಾಗಿ ಈ ಪೋಸ್ಟ್ಗೆ ಕಮೆಂಟ್ ಹಾಕುತ್ತಿದ್ದಾರೆ. ಆ ಸ್ವಿಗ್ಗಿ ಡೆಲಿವರಿ ಬಾಯ್ ಇನ್ನೆಂತಹ ಸೋಮಾರಿ ಇರಬಹುದು ಎಂದು ಕೆಲವರು ಕಮೆಂಟ್ ಮಾಡಿದ್ದರೆ ಇನ್ನು ಕೆಲವರು ಟ್ರಾಫಿಕ್ ಉಸಾಬರಿಯೇ ಬೇಡವೆಂದು ಆತ ಜಾಣತನ ಪ್ರದರ್ಶಿಸಿದ್ದಾನೆ ಎಂದು ತಮಾಷೆ ಮಾಡಿದ್ದಾರೆ.
One more layer can be added, the dunzo guy uses an e-bike from yulu to deliver
Deliveryception
— APJ (@apj234) May 5, 2022
Published On - 7:22 pm, Thu, 5 May 22