ಕೋವಿಡ್ ರೂಪಾಂತರಿ ಪತ್ತೆಗೆ ಹೊಸ ಅಸ್ತ್ರ; ಜಂಟಿಯಾಗಿ ಕಾರ್ಯಾಚರಣೆಗಿಳಿದ ಬಿಬಿಎಂಪಿ, BWSSB

ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವೈರಸ್ ಪತ್ತೆ ಹಚ್ಚಲು BBMP ಮುಂದಾಗಿದೆ. BBMP ಪಾಲಿಕೆ ವ್ಯಾಪ್ತಿಯ 34 STP ಕೊಳಚೆ ನೀರು ಪರೀಕ್ಷೆ ಮಾಡಲಾಗುತ್ತೆ. ಮೊದಲು ಕೊಳಚೆ ನೀರನ್ನು ಸಂಗ್ರಹಿಸಿ ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತೆ.

ಕೋವಿಡ್ ರೂಪಾಂತರಿ ಪತ್ತೆಗೆ ಹೊಸ ಅಸ್ತ್ರ; ಜಂಟಿಯಾಗಿ ಕಾರ್ಯಾಚರಣೆಗಿಳಿದ ಬಿಬಿಎಂಪಿ, BWSSB
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:May 06, 2022 | 10:03 AM

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ 4ನೇ ಅಲೆಯ(Coronavirus 4th Wave) ಆತಂಕ ಹೆಚ್ಚಾಗಿದೆ. ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆ ಮತ್ತೆ ನಡುಕ ಹುಟ್ಟಿಸಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಪತ್ತೆಗೆ ಹೊಸ ಅಸ್ತ್ರ ಬಳಕೆಗೆ ಸಿದ್ಧತೆ ನಡೆದಿದೆ. ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಹೊಸ ತಳಿ ಪತ್ತೆಗೆ ಬಿಬಿಎಂಪಿ, BWSSB ಜಂಟಿಯಾಗಿ ರೂಪಾಂತರಿ ಪತ್ತೆಗೆ ಪ್ಲ್ಯಾನ್ ಮಾಡಿದೆ. 2ನೇ ಕೋವಿಡ್ ಅಲೆ ವೇಳೆ ಬಳಸಿದ ಬಾಣವೇ ಈಗಲೂ ಪ್ರಯೋಗ ಮಾಡಲು ಮುಂದಾಗಿದ್ದಾರೆ.

ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವೈರಸ್ ಪತ್ತೆ ಹಚ್ಚಲು BBMP ಮುಂದಾಗಿದೆ. BBMP ಪಾಲಿಕೆ ವ್ಯಾಪ್ತಿಯ 34 STP ಕೊಳಚೆ ನೀರು ಪರೀಕ್ಷೆ ಮಾಡಲಾಗುತ್ತೆ. ಮೊದಲು ಕೊಳಚೆ ನೀರನ್ನು ಸಂಗ್ರಹಿಸಿ ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಕೊಳಚೆ ನೀರಿನಿಂದಲೂ ಕೊರೊನಾ ರೂಪಾಂತರಿ ಹರಡುವ ಭೀತಿ ಇದೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೊಳಚೆ ನೀರಿನಲ್ಲಿ ರೂಪಾಂತರಿ ಪತ್ತೆಯಾಗಿತ್ತು. 15 ದಿನಗಳ ಹಿಂದೆಯೇ ಕೊಳಚೆ ನೀರು ಪರೀಕ್ಷೆ ಮಾಡಿದ ಬಳಿಕವೇ ಹೆಚ್ಚು ಜನರಿಗೆ ಸೋಂಕು ಹರಡುವುದನ್ನು ಅಲ್ಲಿ ತಪ್ಪಿಸಲಾಗಿತ್ತು. ಈ ಹಿನ್ನೆಲೆ ಬಿಬಿಎಂಪಿಯಿಂದ ರೂಪಾಂತರಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ 34 STP ಗಳಿಂದ ನೀರು ಸಂಗ್ರಹಿಸಿ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.

ಬೊಮ್ಮನಹಳ್ಳಿ, ಮಹದೇವಪುರ & ಪೂರ್ವ ವಲಯಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ. ಈ ವೇಳೆ ಶೇ.70 ರಷ್ಟು ಒಮಿಕ್ರಾನ್, ಶೇ.30 ರಷ್ಟು ಹಳೆ ಕೋವಿಡ್ ಡೆಲ್ಟಾ ಮಾದರಿ ಪತ್ತೆಯಾಗಿತ್ತು. ಇದೀಗ ಹೊಸ ಪ್ರಭೇದದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಈ ಹಿಂದೆ 15 ದಿನಗಳಿಗೆ ಒಮ್ಮೆ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ 7 ದಿನಗಳಿಗೆ ಒಂದು ಬಾರಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಕೊರೊನಾ 4ನೇ ಅಲೆ ಬರುವ ಮುನ್ನವೇ ಹೆಚ್ಚಿನ ನಿಗಾ ವಹಿಸಿ ಕೊರೊನಾ ತಡೆಗಟ್ಟಲು ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:37 am, Fri, 6 May 22