ರಾಜ್ಯದಲ್ಲಿ ಮತ್ತೆ BA.4, BA.5 ಎಂಬ ಒಮಿಕ್ರಾನ್‌ನ ಎರಡು ಉಪತಳಿಗಳು ಪತ್ತೆ
ಹೊಸ ತಳಿಯ ಸೀಕ್ವೆನ್ಸ್ ಬಗ್ಗೆ ಮತ್ತಷ್ಟು ಅಧ್ಯಯನಕ್ಕೆ ವೈರಾಲಜಿಸ್ಟ್ ಮುಂದಾಗಿದೆ. ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್ ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ.
ಬೆಂಗಳೂರು: ಸುಳಿವೇ ಇಲ್ಲದಂತೆ ಮರೆಯಾಗಿದ್ದ ಕೊರೊನಾ ಮತ್ತೆ ಜನರಲ್ಲಿ ನಡುಕ ಹುಟ್ಟಿಸುತ್ತಿದೆ. ರಾಜ್ಯದಲ್ಲಿ ಮತ್ತೆ ಎರಡು ಒಮಿಕ್ರಾನ್ ಉಪತಳಿ ಪತ್ತೆಯಾಗಿದೆ. ರಾಜ್ಯದಲ್ಲಿ BA.2.12 ಪತ್ತೆ ಬಳಿಕ ಈಗ ಮತ್ತೆರಡು ಉಪತಳಿ ಪತ್ತೆಯಾಗಿವೆ. ಇದರಿಂದ ಕೊರೊನಾ 4ನೇ ಅಲೆಯ ಭಯ ಹೆಚ್ಚಾಗಿದೆ. BA.4 ಹಾಗೂ BA.5 ಎಂಬ ಒಮಿಕ್ರಾನ್ ನ ಎರಡು ಉಪತಳಿಗಳು ಪತ್ತೆಯಾಗಿವೆ.
ಹೊಸ ತಳಿಯ ಸೀಕ್ವೆನ್ಸ್ ಬಗ್ಗೆ ಮತ್ತಷ್ಟು ಅಧ್ಯಯನಕ್ಕೆ ವೈರಾಲಜಿಸ್ಟ್ ಮುಂದಾಗಿದೆ. ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಒಮಿಕ್ರಾನ್ ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ. ಈ ಉಪತಳಿ BA.2 ನ ಸೀಕ್ವೆನ್ಸ್ ಗಿಂತ ವಿಭಿನ್ನ ಎಂದು ತಜ್ಞರು ಹೇಳುತ್ತಿದ್ದಾರೆ. ಒಮಿಕ್ರಾನ್ ಸೋಂಕಿತರಿಗೂ ಮತ್ತೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಾಲ್ಕನೇ ಅಲೆಯಲ್ಲಿ ಸೋಂಕು ಹೆಚ್ಚಳಕ್ಕೆ ಈ ಹೊಸ ಉಪತಳಿಗಳು ಕಾರಣವಾಗುತ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ.
ರೂಪಾಂತರಿಯ ವಿವರ: ಡೆಲ್ಟಾ & ಸಬ್ ಲೈನ್ಸ್- 9.8%, ಈಟಾ,ಕಪ್ಪಾ,ಪಂಗೋ- 2.4%, ಒಮಿಕ್ರಾನ್- 87.8%, BA1.1.529- 17.6%, BA1 – 1.8%, BA2- 80.6%
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಕೋವಿಡ್ ರೂಪಾಂತರಿ ಪತ್ತೆಗೆ ಹೊಸ ಅಸ್ತ್ರ; ಜಂಟಿಯಾಗಿ ಕಾರ್ಯಾಚರಣೆಗಿಳಿದ ಬಿಬಿಎಂಪಿ, BWSSB ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ 4ನೇ ಅಲೆಯ(Coronavirus 4th Wave) ಆತಂಕ ಹೆಚ್ಚಾಗಿದೆ. ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆ ಮತ್ತೆ ನಡುಕ ಹುಟ್ಟಿಸಿದೆ. ಸದ್ಯ ರಾಜ್ಯದಲ್ಲಿ ಕೋವಿಡ್ ರೂಪಾಂತರಿ ಪತ್ತೆಗೆ ಹೊಸ ಅಸ್ತ್ರ ಬಳಕೆಗೆ ಸಿದ್ಧತೆ ನಡೆದಿದೆ. ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಹೊಸ ತಳಿ ಪತ್ತೆಗೆ ಬಿಬಿಎಂಪಿ, BWSSB ಜಂಟಿಯಾಗಿ ರೂಪಾಂತರಿ ಪತ್ತೆಗೆ ಪ್ಲ್ಯಾನ್ ಮಾಡಿದೆ. 2ನೇ ಕೋವಿಡ್ ಅಲೆ ವೇಳೆ ಬಳಸಿದ ಬಾಣವೇ ಈಗಲೂ ಪ್ರಯೋಗ ಮಾಡಲು ಮುಂದಾಗಿದ್ದಾರೆ.
ಕೊಳಚೆ ನೀರು ಪರೀಕ್ಷೆ ಮೂಲಕ ರೂಪಾಂತರಿ ವೈರಸ್ ಪತ್ತೆ ಹಚ್ಚಲು BBMP ಮುಂದಾಗಿದೆ. BBMP ಪಾಲಿಕೆ ವ್ಯಾಪ್ತಿಯ 34 STP ಕೊಳಚೆ ನೀರು ಪರೀಕ್ಷೆ ಮಾಡಲಾಗುತ್ತೆ. ಮೊದಲು ಕೊಳಚೆ ನೀರನ್ನು ಸಂಗ್ರಹಿಸಿ ಬಳಿಕ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಕೊಳಚೆ ನೀರಿನಿಂದಲೂ ಕೊರೊನಾ ರೂಪಾಂತರಿ ಹರಡುವ ಭೀತಿ ಇದೆ. ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಕೊಳಚೆ ನೀರಿನಲ್ಲಿ ರೂಪಾಂತರಿ ಪತ್ತೆಯಾಗಿತ್ತು. 15 ದಿನಗಳ ಹಿಂದೆಯೇ ಕೊಳಚೆ ನೀರು ಪರೀಕ್ಷೆ ಮಾಡಿದ ಬಳಿಕವೇ ಹೆಚ್ಚು ಜನರಿಗೆ ಸೋಂಕು ಹರಡುವುದನ್ನು ಅಲ್ಲಿ ತಪ್ಪಿಸಲಾಗಿತ್ತು. ಈ ಹಿನ್ನೆಲೆ ಬಿಬಿಎಂಪಿಯಿಂದ ರೂಪಾಂತರಿ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ 34 STP ಗಳಿಂದ ನೀರು ಸಂಗ್ರಹಿಸಿ ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆ ನಡೆಸಲು ಬಿಬಿಎಂಪಿ ಮುಂದಾಗಿದೆ.
ಬೊಮ್ಮನಹಳ್ಳಿ, ಮಹದೇವಪುರ & ಪೂರ್ವ ವಲಯಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ. ಈ ವೇಳೆ ಶೇ.70 ರಷ್ಟು ಒಮಿಕ್ರಾನ್, ಶೇ.30 ರಷ್ಟು ಹಳೆ ಕೋವಿಡ್ ಡೆಲ್ಟಾ ಮಾದರಿ ಪತ್ತೆಯಾಗಿತ್ತು. ಇದೀಗ ಹೊಸ ಪ್ರಭೇದದ ಬಗ್ಗೆ ಹೆಚ್ಚಿನ ನಿಗಾ ವಹಿಸಲಾಗುತ್ತಿದೆ. ಈ ಹಿಂದೆ 15 ದಿನಗಳಿಗೆ ಒಮ್ಮೆ ಪರೀಕ್ಷೆ ನಡೆಸಲಾಗುತ್ತಿತ್ತು. ಈಗ 7 ದಿನಗಳಿಗೆ ಒಂದು ಬಾರಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಕೊರೊನಾ 4ನೇ ಅಲೆ ಬರುವ ಮುನ್ನವೇ ಹೆಚ್ಚಿನ ನಿಗಾ ವಹಿಸಿ ಕೊರೊನಾ ತಡೆಗಟ್ಟಲು ಎಲ್ಲಾ ರೀತಿಯಲ್ಲಿ ಸಿದ್ಧತೆ ನಡೆದಿದೆ.
Published On - 11:25 am, Fri, 6 May 22