AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: 83 ಸಾವಿರ ಮೌಲ್ಯದ ಆಪಲ್ ವಾಚ್ ಕದ್ದ ಸ್ವಿಗ್ಗಿ ಜೀನಿ ಎಕ್ಸಿಕ್ಯೂಟಿವ್

ಬೆಂಗಳೂರು ಮೂಲದ ಸ್ವಿಗ್ಗಿ ಜೀನಿ ಡೆಲಿವರಿ ಎಕ್ಸಿಕ್ಯೂಟಿವ್ ಓರ್ವ ತನ್ನ 82,999 ರೂ. ಮೊತ್ತದ ಆಪಲ್ ವಾಚ್ ಅಲ್ಟ್ರಾವನ್ನು ಕದ್ದಿದ್ದರು ಎಂದು ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಆರೋಪಿಸಿ ಟ್ವೀಟ್​​ ಮಾಡಿದ್ದಾರೆ.

Bengaluru News: 83 ಸಾವಿರ ಮೌಲ್ಯದ ಆಪಲ್ ವಾಚ್ ಕದ್ದ ಸ್ವಿಗ್ಗಿ ಜೀನಿ ಎಕ್ಸಿಕ್ಯೂಟಿವ್
ಸ್ವಿಗ್ಗಿ
ವಿವೇಕ ಬಿರಾದಾರ
|

Updated on: Jul 14, 2023 | 7:52 AM

Share

ಬೆಂಗಳೂರು: ಬೆಂಗಳೂರು ಮೂಲದ ಸ್ವಿಗ್ಗಿ ಜೀನಿ (Swiggy genie) ಡೆಲಿವರಿ ಎಕ್ಸಿಕ್ಯೂಟಿವ್ ಓರ್ವ ತನ್ನ 82,999 ರೂ. ಮೊತ್ತದ ಆಪಲ್ ವಾಚ್ ಅಲ್ಟ್ರಾವನ್ನು ಕದ್ದಿದ್ದರು ಎಂದು ಬೆಂಗಳೂರು (Bengaluru) ಮೂಲದ ವ್ಯಕ್ತಿಯೊಬ್ಬರು ಆರೋಪಿಸಿ ಟ್ವೀಟ್ ಮಾಡಿದ್ದಾರೆ. Swiggy ಯ Genie ಸೇವೆ ಆಹಾರದ ಹೊರತಾಗಿ ಇತರ ವಸ್ತು ವಿತರಣಾ ಕಾರ್ಯಗಳನ್ನು ನಿರ್ವಹಿಸುತ್ತದೆ. ಜಯದೀಪ್ ಎಂಬ ಟ್ವಿಟರ್​​ (Twitter) ಬಳಕೆದಾರರ ಸ್ನೇಹಿತರಿಂದ ಸ್ವಿಗ್ಗಿ ಜೀನಿ ಡೆಲಿವರಿ ಬಾಯ್​​ ಆಪಲ್ ವಾಚ್ ಅಲ್ಟ್ರಾ ಅನ್ನು ಪಡೆದಿದ್ದಾನೆ.

ನಂತರ ಅದನ್ನು ತೆಗೆದುಕೊಂಡು ಜಯದೀಪ್​​ ಅವರ ಬಳಿ ಬರುತ್ತಿರುತ್ತಾನೆ. ದಾರಿ ಮಧ್ಯೆ ಇದ್ದಕ್ಕಿದ್ದಂತೆ ಆರ್ಡ್​​ ಕ್ಯಾನ್ಸಲ್​​ ಮಾಡಿ ನಂತರ ಮಾರ್ಗ ಬದಲಿಸಿ ಜಯದೀಪ ಅವರ ನಂಬರ್​ ಅನ್ನು ಬ್ಲಾಕ್​ ಮಾಡುತ್ತಾನೆ. ಡೆಲಿವೆರಿ ಬಾಯ್​ ಆರ್ಡ್​​ ಕ್ಯಾನ್ಸಲ್​​ ಮಾಡಿದ ತಕ್ಷಣ ಜಯದೀಪ ಅವರು ಗಾಭರಿಗೊಂಡಿದ್ದಾರೆ. ನಂತರ ಐಫೋನ್‌ನಲ್ಲಿನ ಸ್ಥಳ ಟ್ರ್ಯಾಕಿಂಗ್ ವೈಶಿಷ್ಟ್ಯದ ಸಹಾಯದಿಂದ, ಮತ್ತು ರ್ಯಾಪಿಡೋ ಬೈಕ್​ ಬುಕ್​ ಮಾಡಿಕೊಂಡು ಆತನನ್ನು ಬೆನ್ನು ಹತ್ತುತ್ತಾರೆ.

ಇದನ್ನೂ ಓದಿ: Karnataka Budget 2023: ಸ್ವಿಗ್ಗಿ, ಜೊಮಾಟೊ ಸೇರಿದಂತೆ ಡೆಲಿವರಿ ಬಾಯ್​​ಗಳಿಗೆ 4 ಲಕ್ಷ ರೂ. ಜೀವ, ಅಪಘಾತ ವಿಮೆ; ಬಜೆಟ್​​ನಲ್ಲಿ ಘೋಷಣೆ

ಹೀಗೆ ಆತನನ್ನು ಬೆನ್ನು ಹತ್ತಿ 2 ಗಂಟೆ ಸುಮಾರಿಗೆ ಅವನನ್ನು ಟ್ರ್ಯಾಕ್ ಮಾಡಿದ್ದಾರೆ. ನಂತರ ಆತನಿಂದ ವಾಚ್​​ ಪಡೆಯುತ್ತಾರೆ. ಇನ್ನು ಘಟನೆಯ ನಂತರ Swiggy ಯ Genie ಸೇವೆಯ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ.್ ಸಂಭಾವ್ಯ ಕಳ್ಳತನ ಮತ್ತು ಮೋಸದ ಅಭ್ಯಾಸಗಳ ಬಗ್ಗೆ ಬಳಕೆದಾರರನ್ನು ಜಾಗರೂಕರಾಗಿರಿಸುತ್ತದೆ.

ಈ ಘಟನೆಯು Swiggy ನ Genie ಸೇವೆಯ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಯ ಬಗ್ಗೆ ಕಳವಳವನ್ನು ಉಂಟುಮಾಡಿದೆ, ಸಂಭಾವ್ಯ ಕಳ್ಳತನ ಮತ್ತು ಮೋಸದ ಅಭ್ಯಾಸಗಳ ಬಗ್ಗೆ ಬಳಕೆದಾರರನ್ನು ಜಾಗರೂಕರಾಗಿರಿಸುತ್ತದೆ. ಘಟನೆಗೆ ಸಂಬಂಧಿಸಿದಂತೆ ಸ್ವಿಗ್ಗಿ ಇನ್ನೂ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ, ಆದರೆ ಡೆಲಿವರಿ ಮ್ಯಾನ್ ವಾಚ್ ಕದ್ದ ನಂತರ ಕಂಪನಿಯು ಇಮೇಲ್ ಅನ್ನು ಡ್ರಾಪ್ ಮಾಡಲು ಕೇಳಿದೆ ಎಂದು ಸಂತ್ರಸ್ತೆಯ ಸ್ನೇಹಿತ ಟ್ವಿಟರ್‌ನಲ್ಲಿ ವರದಿ ಮಾಡಿದ್ದಾರೆ. ಸದ್ಯಕ್ಕೆ ಸಂತ್ರಸ್ತೆ ದೂರು ಅಥವಾ ಎಫ್‌ಐಆರ್ ದಾಖಲಿಸಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ