KSRTC Employees: 65 ವರ್ಷಗಳ ಪದ್ಧತಿಗೆ ಗುಡ್​ ಬೈ! ತಿಂಗಳ ಮೊದಲ ದಿನವೇ ಸಂಬಳ ಪಡೆದ ಕೆಎಸ್​ಆರ್​ಟಿಸಿ ನೌಕರರು

IAS ಅನ್ಬುಕುಮಾರ್ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಆಗಿ ಬಂದ ಮೇಲೆ ನಿಗಮದಲ್ಲಿ 65 ವರ್ಷದಿಂದ ಇದ್ದ ನಿಯಮವೊಂದನ್ನ ಕೈಬಿಟ್ಟು ವೇತನ ನೀಡುವ ವಿಚಾರದಲ್ಲಿ ಇದ್ದ ತಾರತಮ್ಯಕ್ಕೆ ಮಂಗಳ ಹಾಡಿದ್ದಾರೆ.

KSRTC Employees: 65 ವರ್ಷಗಳ ಪದ್ಧತಿಗೆ ಗುಡ್​ ಬೈ! ತಿಂಗಳ ಮೊದಲ ದಿನವೇ ಸಂಬಳ ಪಡೆದ ಕೆಎಸ್​ಆರ್​ಟಿಸಿ ನೌಕರರು
65 ವರ್ಷಗಳ ಪದ್ಧತಿಗೆ ಗುಡ್​ ಬೈ! ತಿಂಗಳ ಮೊದಲ ದಿನವೇ ಸಂಬಳ ಪಡೆದ ಕೆಎಸ್​ಆರ್​ಟಿಸಿ ನೌಕರರು! Image Credit source: DH
Follow us
TV9 Web
| Updated By: ಸಾಧು ಶ್ರೀನಾಥ್​

Updated on:Oct 01, 2022 | 7:43 PM

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 65 ವರ್ಷಗಳ ಇತಿಹಾಸದಲ್ಲೇ ಈ ದಿನ ಬಹಳ ವಿಶೇಷವಾದದ್ದು ಅದರಲ್ಲೂ ಕೆಎಸ್​ಆರ್​ಟಿಸಿ ಸಿಬ್ಬಂದಿ ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ ಅಂದರೂ ಕೂಡ ತಪ್ಪಾಗೋದಿಲ್ಲ. ಯಾಕಂದ್ರೆ 65 ವರ್ಷದ ಇತಿಹಾಸದಲ್ಲೇ ತಿಂಗಳ ಮೊದಲ ದಿನವೇ ನೌಕರರಿಗೆ (KSRTC Employees) ಸಂಬಳವನ್ನ ನೀಡಿರಲಿಲ್ಲ, ಏನಿದ್ರೂ 7ನೇ ತಾರೀಕಿನಂದು ನೌಕರರ ಬ್ಯಾಂಕ್ ಖಾತೆಗೆ ಸಂಬಳ ಸೇರುತಿತ್ತು! ಆದ್ರೆ ಇದೆ ಮೊದಲ ಬಾರಿಗೆ 1ನೇ ತಾರೀಕಿ ನಂದೇ ನೌಕರರಿಗೆ ಸಂಬಳ ಕೈ ಸೇರಿದೆ. ಇದಕ್ಕೆ ಕಾರಣ KSRTC ವ್ಯವಸ್ಥಾಪಕ ನಿರ್ದೇಶಕರಾದ ವಿ. ಅನ್ಬುಕುಮಾರ್ (KSRTC MD V Anbukumar).

ಇವರು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂಡಿ) ಆಗಿ ಬಂದ ಮೇಲೆ ನಿಗಮದಲ್ಲಿ 65 ವರ್ಷದಿಂದ ಇದ್ದ ನಿಯಮವೊಂದನ್ನ ಕೈಬಿಟ್ಟು ವೇತನ ನೀಡುವ ವಿಚಾರದಲ್ಲಿ ಇದ್ದ ತಾರತಮ್ಯಕ್ಕೆ ಮಂಗಳ ಹಾಡಿದ್ದಾರೆ. ನಿಗಮ ಆರಂಭದಿಂದ ಇಲ್ಲಿಯವರೆಗೆ ತಿಂಗಳ 1 ರಂದು ಅಧಿಕಾರಿ ವರ್ಗಕ್ಕೆ, 4 ರಂದು ಮೆಕಾನಿಕ್ ಗಳಿಗೆ, 7 ರಂದು ಚಾಲಕ ನಿರ್ವಾಹಕರಿಗೆ ಸಂಬಳವಾಗುತ್ತಿತ್ತು. ಈ ತಾರತಮ್ಯವನ್ನು ಹೋಗಲಾಡಿಸಿ ಸೆಪ್ಟೆಂಬರ್ ತಿಂಗಳ ಸಂಬಳವನ್ನು (Salary) ಇಂದು ಅಂದ್ರೆ ಅಕ್ಟೋಬರ್ 1 ರಂದೆ ನೌಕರರ ಖಾತೆಗೆ ಸೇರುವಂತೆ ಮಾಡಿದ್ದಾರೆ. ಎಂಡಿ ಅನ್ಬುಕುಮಾರ್ ಅವರ ನಿರ್ಧಾರದಿಂದ ಚಾಲಕ ಹಾಗೂ ನಿರ್ವಾಹಕರು ಸಂತೋಷಗೊಂಡಿದ್ದಾರೆ. ಇದರಿಂದ 36 ಸಾವಿರ ನೌಕರರಿಗೆ ದಸರಾ ಹಬ್ಬದ ವೇಳೆಗೆ ಸಂಬಳವಾದಂತಾಗಿದೆ.

ಇಬ್ಬರು IAS ಅಧಿಕಾರಿಗಳ ವರ್ಗಾವಣೆ, 8 IAS ಅಧಿಕಾರಿಗಳಿಗೆ ಸ್ಥಳ ನಿಯೋಜನೆ

ಇಬ್ಬರು IAS ಅಧಿಕಾರಿಗಳ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ 8 IAS ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸ್ಥಳ ನಿಯೋಜನೆ ಮಾಡಿದೆ.

ವರ್ಗಾವಣೆ ಹೆಪ್ಸಿಬಾ ರಾಣಿ ಕೊರ್ಲಪಾಟಿ- ಜಂಟಿ ಕಾರ್ಯದರ್ಶಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮತ್ತು ಶಿಲ್ಪಾ ಶರ್ಮ-ನಿರ್ದೇಶಕಿ, ಕವಿಕಾ ಸಂಸ್ಥೆಗೆ ವರ್ಗವಾಗಿದ್ದಾರೆ.

ಸ್ಥಳ ನಿಯೋಜನೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್- ಆಯುಕ್ತೆ, ಪಂಚಾಯತ್ ರಾಜ್ ಇಲಾಖೆ, ಶ್ರೀವಿದ್ಯಾ ಪಿ.ಐ.-ಹೆಚ್ಚುವರಿ‌ ಕಾರ್ಯದರ್ಶಿ, ಕೌಶಲ್ಯಾಭಿವೃದ್ಧಿ ಇಲಾಖೆ, ಡಾ. ಶಿವಶಂಕರ ಎನ್.- ಇಡಿ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ರಾಜೇಶ್ ಗೌಡ ಎಂ.ಬಿ.- ಆಯುಕ್ತ ರೇಷ್ಮೆ ಇಲಾಖೆ, ಜಾನಕಿ ಕೆ.ಎಂ.- ನಿರ್ದೇಶಕಿ, ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆ, ಝಹೀರಾ ನಸೀಮ್- ಜಂಟಿ‌ ನಿರ್ದೇಶಕಿ, ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ್ ನಿರ್ದೇಶನಾಲಯ, ಸುಭ ಕಲ್ಯಾಣ್- ನಿರ್ದೇಶಕಿ, ಆರ್‌ಡಿ ಪಿಆರ್, ಇ-ಆಡಳಿತ, ಚಂದ್ರಶೇಖರ್ ಎನ್.- ಎಂಡಿ, ರೇಷ್ಮೆ ಮಾರುಕಟ್ಟೆ ಮಂಡಳಿ.

Published On - 7:34 pm, Sat, 1 October 22

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು