ಬೆಂಗಳೂರಿನಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 21, 2023 | 11:25 AM

ಜು.11 ರಂದು ನಗರದ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್​ನಲ್ಲಿ ಕಾರು ನಿಲ್ಲಿಸಿದ್ದ ಹಿನ್ನಲೆ ಬಾಣಸವಾಡಿ ಸಂಚಾರಿ ಠಾಣೆಯ ಪೇದೆ ಉಮೇಶ್ ಎಂಬುವವರು ಕ್ಲಾಂಪ್ ಹಾಕಿದ್ದರು. ಈ ಕಾರಣ ಅವರ ಮೇಲೆ ಹಲ್ಲೆ ಮಾಡಲಾಗಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ಕರ್ತವ್ಯನಿರತ ಸಂಚಾರಿ ಪೊಲೀಸ್​ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ಆರೋಪಿ ಬಂಧನ
ಹಲ್ಲೆ ಮಾಡಿದ್ದ ಆರೋಪಿ
Follow us on

ಬೆಂಗಳೂರು: ಜು.11 ರಂದು ನಗರದ ಬಾಣಸವಾಡಿ(Banaswadi) ಠಾಣಾ ವ್ಯಾಪ್ತಿಯಲ್ಲಿ ನೋ ಪಾರ್ಕಿಂಗ್​ನಲ್ಲಿ ಕಾರು ನಿಲ್ಲಿಸಿದ್ದ ಹಿನ್ನಲೆ ಬಾಣಸವಾಡಿ ಸಂಚಾರಿ ಠಾಣೆಯ ಪೇದೆ ಉಮೇಶ್ ಎಂಬುವವರು ಕ್ಲಾಂಪ್ ಹಾಕಿದ್ದರು. ಈ ಕಾರಣಕ್ಕೆ ನಡುರಸ್ತೆಯಲ್ಲಿಯೇ ಕರ್ತವ್ಯನಿರತ ಪೊಲೀಸ್(Police) ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದರು. ಇದೀಗ ಕೃತ್ಯವೆಸಗಿದ್ದ ಆರೋಪಿಗಳನ್ನ ಬಂಧಿಸಿ, ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ. ಸುಲೇಮಾನ್​ ಬಂಧಿತ ಆರೋಪಿ. ಇನ್ನು ಹಲ್ಲೆಗೊಳಗಾದ ಸಂಚಾರಿ ಪೊಲೀಸ್ ಸಿಬ್ಬಂದಿ ನಿನ್ನೆ ಬಾಣಸವಾಡಿ ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನ ಬಂಧಿಸಲಾಗಿದ್ದು, ಘಟನೆ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಜಂಟಿ ಪೊಲೀಸ್​ ಆಯುಕ್ತ ಎಂ ಎನ್​ ಅನುಚೇತ್​ ಅವರು ಟ್ಟೀಟ್​ ಮಾಡಿದ್ದಾರೆ.

ಘಟನೆ ವಿವರ

ಜು.11 ರ ಸಂಜೆ 6 ಗಂಟೆ ಸುಮಾರಿಗೆ ಪಾರ್ಕಿಂಗ್ ವಿಚಾರವಾಗಿ ಪರಿಶೀಲನೆ ನಡೆಸುತಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ಉಮೇಶ್​. ಈ ವೇಳೆ ಕಾರ್ ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿರುವುದು ಪತ್ತೆಯಾಗಿದೆ. ಹೀಗಾಗಿ ಗಾಡಿಯ ಟೈರ್​ಗೆ ಕ್ಲಾಂಪಿಂಗ್ ಹಾಕಿದ್ದಾರೆ. ಈ ವೇಳೆ ಇದನ್ನು ವ್ಯಕ್ತಿಯೊಬ್ಬ ಪ್ರಶ್ನಿಸಿ, ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸ್​ ಹಲ್ಲೆ ಮಾಡಿದ ಪ್ರಮುಖ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ನಿಜಕ್ಕೂ ಹಲ್ಲೆಗೆ ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:Dakshina Kannada: ಜಾಗದ ವಿಚಾರವಾಗಿ ಯೋಧನ ಪತ್ನಿ ಮೇಲೆ ಹಲ್ಲೆ ಆರೋಪ; ಆಸ್ಪತ್ರೆಗೆ ದಾಖಲು

ಹಲ್ಲೆ ವೇಳೆ ಮಹಿಳೆಯೊರ್ವರನ್ನ ಆಸ್ಪತ್ರೆಗೆ ಕರೆತಂದಿದ್ದ ಆರೋಪಿ

ಇನ್ನು ಹಲ್ಲೆ ಮಾಡಿದ ಆರೋಪಿಯು ಮಹಿಳೆಯೊರ್ವರನ್ನ ಆಸ್ಪತ್ರೆಗೆ ಕರೆತಂದಿದ್ದರು. ಈ ಸಂದರ್ಭದಲ್ಲಿ ಈ ಗಲಾಟೆಯಾಗಿದೆ. ಈ ಕುರಿತು ಕರ್ತವ್ಯನಿರತ ಪೊಲೀಸ್​ ಮೇಲೆ ಹಲ್ಲೆ ಮಾಡಿದ ಆರೋಪಿಯಿಂದ ನಿಖರ ಮಾಹಿತಿ ಪಡೆಯುತ್ತಿದ್ದಾರೆ. ವಿಚಾರಣೆ ಬಳಿಕ ಹಲ್ಲೆಯ ಸತ್ಯ ಅಸತ್ಯತೆಗಳು ಹೊರಬಿಳಲಿದೆ. ಇನ್ನು ಪೊಲೀಸ್​ ಸಿಬ್ಬಂದಿ ಮೇಲೆ ನಡೆದ ಹಲ್ಲೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆಗಳು ಬರುತ್ತಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ