ಬೆಂಗಳೂರು, ಜು.15: ಮಹಾನಗರದಲ್ಲಿ ಕಳ್ಳರ ಹಾವಳಿ ಮೀತಿಮೀರಿದೆ. ನಿನ್ನೆಯಷ್ಟೇ ಪೊಲೀಸರ ಸೋಗಿನಲ್ಲಿ ಯುವಕರಿದ್ದ ಬಾಡಿಗೆ ರೂಮಿಗೆ ನುಗ್ಗಿದ ಖದೀಮರು, ಚಾಕು ತೋರಿಸಿ ಹಣ, ಚಿನ್ನ ಕಳ್ಳತನ ಮಾಡಿಕೊಂಡು ಹೋಗಿದ್ದರು. ಇದೀಗ ಸಿನಿಮೀಯ ರೀತಿಯಲ್ಲಿ ಚಿನ್ನವಿರುವ ಬ್ಯಾಗ್ನ್ನು ಕಳ್ಳರು ದೋಚಿರುವ ಘಟನೆ ಕೆ.ಆರ್.ಮಾರ್ಕೆಟ್(KR Market) ಫ್ಲೈಓವರ್ ಮೇಲೆ ನಡೆದಿದೆ. ವ್ಯಾಪಾರಿಯೊಬ್ಬರು ಬೈಕ್ನಲ್ಲಿ 1.70 ಕೋಟಿ ಮೌಲ್ಯದ ಚಿನ್ನದ ಬ್ಯಾಗ್ ತೆಗೆದುಕೊಂಡು ಹೋಗುವಾಗ, ವ್ಯಾಪಾರಿ ಬೈಕ್ಗೆ ಅಡ್ಡಬಂದ ಇಬ್ಬರು ದುಷ್ಕರ್ಮಿಗಳು ಬೈಕ್ ನಿಧಾನ ಮಾಡಿಸಿದ್ದಾರೆ. ನಂತರ ನೇರವಾಗಿ ಚಿನ್ನವಿರುವ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ. ಈ ಕುರಿತು ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಈ ಘಟನೆ ನಡೆಯುತ್ತಿದ್ದಂತೆ ಹತ್ತಿರದ ಕಾಟನ್ಪೇಟೆ ಪೊಲೀಸ್ ಠಾಣೆಗೆ ವ್ಯಾಪಾರಿ ದೂರು ದಾಖಲಿಸಿದ್ದಾರೆ. ಘಟನೆ ಸಂಭಂದ ತನಿಖೆ ಶುರುಮಾಡಿರುವ ಪೊಲೀಸರು, ಸುತ್ತಮುತ್ತಲೂ ಎಲ್ಲಿಯಾದರೂ ಸಿಸಿಟಿವಿ ಕ್ಯಾಮೆರಾ ಇದೆಯೇ ಎಂದೂ ಹುಡುಕಾಡಿದ್ದು, ಘಟನೆ ಸ್ಥಳ ಸೇರಿ ಹತ್ತಿರ ಎಲ್ಲಿಯೂ ಕ್ಯಾಮೆರಾ ಅಳವಡಿಕೆಯಾಗಿಲ್ಲ. ಇದೀಗ ಹಲವಾರು ಅನುಮಾನ ಒಳಗೊಂಡು ತನಿಖೆ ಆರಂಭಿಸಿದ್ದಾರೆ. ಇನ್ನೂ ಬೆಂಗಳೂರಿನಲ್ಲಿ ಕಳ್ಳರ ಕಾಟ ಹೆಚ್ಚಾಗಿದೆ. ದಿನವೂ ನಗರದಾದ್ಯಂತ ಒಂದಾದರೂ ಇಂತಹ ಕೇಸ್ಗಳು ಪತ್ತೆಯಾಗುತ್ತಿವೆ. ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಇದಕ್ಕೆ ಬ್ರೇಕ್ ಹಾಕಬೇಕಾಗಿದೆ.
ಇದನ್ನೂ ಓದಿ:Bengaluru News: ಶೋಕಿ ಜೀವನಕ್ಕೆ ಕಳ್ಳತನವನ್ನೇ ಕಾಯಕ ಮಾಡಿಕೊಂಡ ಖತರ್ನಾಕ್ ಗ್ಯಾಂಗ್ ಅರೆಸ್ಟ್
ಕೊಪ್ಪಳ: ನಗರಸಭೆ ಪಕ್ಕದ ವಾಣಿಜ್ಯ ಮಳಿಗೆಯೊಂದರಲ್ಲಿ ಬೆಂಕಿ ಅವಘಡ ನಡೆದಿದೆ. ನಗರಸಭೆ ವಿದ್ಯುತ್ ಗುತ್ತಿಗೆದಾರ ಮೌಲಾಸಾಬ ಬನ್ನಿಕೊಪ್ಪ ಎಂಬುವವರು ಬಾಡಿಗೆ ಹೊಂದಿರುವ ಮಳಿಗೆಗೆ ಬೆಂಕಿ ಹಚ್ಚಿರುವ ಹಂಚಲಾಗಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಇದು ದಾಖಲೆಗಳ ನಾಶಕ್ಕಾಗಿ ಬೆಂಕಿ ಹಚ್ಚಿರುವ ಸಾಧ್ಯತೆಯಿರುವು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ