Bengaluru News: ಶೋಕಿ ಜೀವನಕ್ಕೆ ಕಳ್ಳತನವನ್ನೇ ಕಾಯಕ ಮಾಡಿಕೊಂಡ ಖತರ್ನಾಕ್ ಗ್ಯಾಂಗ್​ ಅರೆಸ್ಟ್​

ಇತ್ತೀಚಿನ ದಿನಗಳಲ್ಲಿ ಹೈ ಫೈ ಜೀವನದ ಆಸೆಗೆ ಬಿದ್ದು, ಅಡ್ಡದಾರಿ ತುಳಿಯುತ್ತಿದ್ದಾರೆ. ಅದರಂತೆ ಇಲ್ಲೊಂದೊ ಗ್ಯಾಂಗ್​ ಶೋಕಿ ಜೀವನ ನಡೆಸಲು ಕಳ್ಳತನದ ಹಾದಿ ಹಿಡಿದು ಇದೀಗ ಜೆಪಿ ನಗರ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

Bengaluru News: ಶೋಕಿ ಜೀವನಕ್ಕೆ ಕಳ್ಳತನವನ್ನೇ ಕಾಯಕ ಮಾಡಿಕೊಂಡ ಖತರ್ನಾಕ್ ಗ್ಯಾಂಗ್​ ಅರೆಸ್ಟ್​
ಆರೋಪಿಗಳು
Follow us
Jagadisha B
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 11, 2023 | 8:58 AM

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೈ ಫೈ ಜೀವನದ ಆಸೆಗೆ ಬಿದ್ದು, ಅಡ್ಡದಾರಿ ತುಳಿಯುತ್ತಿದ್ದಾರೆ. ಅದರಂತೆ ಇಲ್ಲೊಂದೊ ಗ್ಯಾಂಗ್​ ಶೋಕಿ ಜೀವನ ನಡೆಸಲು ಕಳ್ಳತನದ ಹಾದಿ ಹಿಡಿದು ಇದೀಗ ಜೆಪಿ ನಗರ ಪೊಲೀಸ(J P Nagar Police)ರ ಕೈಗೆ ಸಿಕ್ಕಿಬಿದ್ದಿದ್ದಾರೆ. ಹೌದು ಶೋಕಿ ಜೀವನಕ್ಕೆ ಬಿದ್ದ ಈ ಗ್ಯಾಂಗ್​, ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದರು. ಸರ್ಕಾರಿ ಕಚೇರಿ, ಅಪಾರ್ಟ್ಮೆಂಟ್, ದೊಡ್ಡ ದೊಡ್ಡ ಮನೆಗಳನ್ನೇ ಟಾರ್ಗೆಟ್​ ಮಾಡುತ್ತಿದ್ದ ಇವರು, ಅಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನ ಕದ್ದು ಪರಾರಿಯಾಗುತ್ತಿದ್ದರು. ಇದೀಗ ಖದೀಮರು ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾರೆ.

ದೊಡ್ಡ ದೊಡ್ಡ ಸ್ಥಳಗಳೇ ಇವರ ಟಾರ್ಗೆಟ್ ; ಆದ್ರೆ, ಕದಿಯುತಿದ್ದದ್ದು ಮಾತ್ರ ಸಣ್ಣ ವಸ್ತು

ಇನ್ನು ಇವರು ದೊಡ್ಡ ದೊಡ್ಡ ಸ್ಥಳಗಳನ್ನೇ ಟಾರ್ಗೆಟ್​ ಮಾಡಿದ್ರು, ಇವರ ಕಣ್ಮುಂದೆ ಲಕ್ಷ ಹಣ ಸಿಕ್ಕಿದ್ದರೂ ಮುಟ್ಟುತ್ತಿರಲಿಲ್ಲ. ದೊಡ್ಡ ವಸ್ತುಗಳನ್ನ ಕದ್ರೆ, ಲಾಕ್ ಆಗ್ತಿವಿ ಎಂದು, ಮಾಲೀಕನೇ ದೂರು ಕೊಡಲು ಹಿಂದೆಟು ಹಾಕುವ ಕೇವಲ ಸಣ್ಣ ವಸ್ತುವನ್ನೇ ಟಾರ್ಗೆಟ್ ಮಾಡುತ್ತಿದ್ದರು. ಹೌದು ಮನೆಗಳಿಗೆ ನುಗ್ಗುತ್ತಿದ್ದ ಇವರು ಬ್ಯಾಟರಿಗಳನ್ನ ಕದಿಯುತ್ತಿದ್ದರು. ಕಳೆದ ಕಳೆದ ಆರು ತಿಂಗಳಲ್ಲಿ 50ಕ್ಕೂ ಅಧಿಕ ಬ್ಯಾಟರಿಗಳನ್ನ ಕದ್ದು ಆರೋಪಿಗಳಾದ ಮಹಮದ್ ಹರ್ಷದ್, ಸೈಯದ್ ಯಾರಬ್, ಸಿದ್ಧಿಕಿ ಎಂಬುವವರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ನೆಲಮಂಗಲ: ಪೊಲೀಸ್ ಠಾಣೆ ಬಳಿಯೇ ಕಳ್ಳರ ಕರಾಮತ್ತು, ಮೀನಿನ ವ್ಯಾಪಾರಿಯ ಮನೆ ಬೀಗ ಮುರಿದು ಕಳ್ಳತನ

ಜಲಮಂಡಳಿ ಸೇವಾ ಠಾಣೆಯಲ್ಲಿ ಒಂದೇ ಕಡೆ ಐದು ಬ್ಯಾಟರಿ ಕದ್ದ ಕಳ್ಳರು

ಈ ಕಳ್ಳರು ಇತ್ತೀಚೆಗೆ ಜಲಮಂಡಳಿ ಸೇವಾ ಠಾಣೆಯಲ್ಲಿ, ಒಂದೇ ಕಡೆ 5 ಬ್ಯಾಟರಿ ಕಳ್ಳತನ ಮಾಡಿದ್ದರು. ಈ ಸಂಬಂಧ ದೂರು ನೀಡಿದಾಗ, ಖದೀಮರು ಸಿಕ್ಕಿ ಬಿದ್ದಿದ್ದಾರೆ. ವಿಚಾರಣೆ ವೇಳೆ ಸರಣಿ ಕಳ್ಳತನದ ಅಸಲಿ ಕಹಾನಿ ಬೆಳಕಿಗೆ ಬಂದಿದ್ದು, ಸಣ್ಣಪುಟ್ಟ ಶೋಕಿ ಜೀವನವೇ ಬದುಕು ಎಂದುಕೊಂಡು ಕಳ್ಳತನ ಮಾಡಿದ್ದಾರೆ. ಆರೋಪಿಗಳನ್ನ ಬಂಧಿಸಿದ ಪೊಲೀಸರು 52 ಬ್ಯಾಟರಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಜೆಪಿನಗರ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ