ರೇಬಿಸ್ ರೋಗ ತಡೆಗಟ್ಟಲು ಬಿಬಿಎಂಪಿ ವ್ಯಾಪ್ತಿಯ ಬೀದಿ ನಾಯಿಗಳ ಸಮೀಕ್ಷೆ

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬೀಸ್ ರೋಗ ತಡೆಗಟ್ಟಲು ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ‌ನ ಬೀದಿ‌ ನಾಯಿಗಳ ಸಮೀಕ್ಷೆಗೆ ಪಶುಪಾಲನಾ ವಿಭಾಗ ಮುಂದಾಗಿದೆ.

ರೇಬಿಸ್ ರೋಗ ತಡೆಗಟ್ಟಲು ಬಿಬಿಎಂಪಿ ವ್ಯಾಪ್ತಿಯ ಬೀದಿ ನಾಯಿಗಳ ಸಮೀಕ್ಷೆ
ಬೀದಿ ನಾಯಿಗಳು
Follow us
TV9 Web
| Updated By: ವಿವೇಕ ಬಿರಾದಾರ

Updated on: Jul 11, 2023 | 9:21 AM

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹೀಗಾಗಿ ಬೀದಿ ನಾಯಿಗಳ (Dogs) ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ಬಿಬಿಎಂಪಿ (BBMP) ವ್ಯಾಪ್ತಿಯ ಎಂಟು ವಲಯಗಳಲ್ಲಿ‌ನ ಬೀದಿ‌ ನಾಯಿಗಳ ಸಮೀಕ್ಷೆಗೆ (Survey) ಪಶುಪಾಲನಾ ವಿಭಾಗ ಮುಂದಾಗಿದೆ. ಬಿಬಿಎಂಪಿ WVS ಸರ್ವೆ 2023 ಮೊಬೈಲ್ ಆ್ಯಪ್ ಮೂಲಕ ಬೀದಿ ನಾಯಿ ಸಮೀಕ್ಷೆ ನಡೆಸಲಾಗುತ್ತದೆ. ಮೊಬೈಲ್ ಆ್ಯಪ್‌ನಲ್ಲಿ ಬೀದಿ ನಾಯಿ ಫೋಟೋ‌ ತಗೆದು ಫೋಟೋ ಅಪ್ಲೋಡ್ ಮಾಡಲಾಗುತ್ತದೆ. ಸಮೀಕ್ಷೆ ನಂತರ ನಾಯಿಗಳಿಗೆ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆಂಟಿರೇಬೀಸ್ ಲಸಿಕೆ ನೀಡಲಾಗಿದೆಯೇ ಅಥವಾ ಇಲ್ಲವೇ ಎಂಬುವುದನ್ನು ಮಾಹಿತಿ ಅಪ್ಲೋಡ್ ಮಾಡಲಾಗುತ್ತದೆ.

ಸಂತಾನ ಹರಣ ಚಿಕಿತ್ಸೆ ಆಗದೇ ಇದ್ದರೇ, ಸಮೀಕ್ಷೆ ಮೂಲಕ ಮುಂದಿನ ದಿನಗಳಲ್ಲಿ ಬೀದಿ ನಾಯಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. 2019 ನೇ ಸಾಲಿನಲ್ಲಿ ಬಿಬಿಎಂಪಿಯಿಂದ ನಡೆದ ಸಮೀಕ್ಷೆಯಲ್ಲಿ ಸುಮಾರು 3.10 ಲಕ್ಷ ಬೀದಿ ನಾಯಿಗಳಿವೆ.

ಇದನ್ನೂ ಓದಿ: ಬೆಂಗಳೂರು ನಗರದಲ್ಲಿ 16 ಸಾವಿರ, ರಾಜ್ಯದಲ್ಲಿ 2 ಲಕ್ಷ ಎಕರೆ ಕಂದಾಯ ಭೂಮಿ ಒತ್ತುವರಿ

ಒಟ್ಟು 50 ಟೀಮ್​​ಗಳನ್ನು ಮಾಡಲಾಗಿದ್ದು ಒಂದು ಟೀಮ್‌ನಲ್ಲಿ ಇಬ್ಬರು ಸಮೀಕ್ಷಾದಾರರು ಇದ್ದು, ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆ 2019 ರಲ್ಲಿ ಸಮೀಕ್ಷೆ ಮಾಡಿ ಸಂತಾನಹರಣ ಚಿಕಿತ್ಸೆ ನೀಡಿದ್ದು, ಈ  ಕಾರ್ಯಕ್ರಮ ಯಶಸ್ವಿ ಅನುಷ್ಟಾನದ ಬಗ್ಗೆ ತಿಳಿಯುವ ಸಲುವಾಗಿ ಬೀದಿನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ