ಬೆಂಗಳೂರು: ಪ್ರಿಯತಮನೊಂದಿಗೆ ಸೇರಿ ಸ್ವಂತ ಮಗುವನ್ನು ಕಚ್ಚಿ, ಫ್ರಿಡ್ಜ್ ನೀರು ಸುರಿದ ತಾಯಿ
ಬೆಂಗಳೂರಿನಲ್ಲಿ ಮತ್ತೊಬ್ಬ ಮಹಿಳೆಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದ ಅಮಾನವೀಯ ಘಟನೆ ನಡೆದಿದೆ. ಪತಿ ಮೇಲಿನ ಕೋಪಕ್ಕೆ ಪ್ರಿಯಕರನೊಂದಿಗೆ ಸೇರಿ ತನ್ನ ಸ್ವಂತ ಮಗುವಿಗೆ ತಾಯಿ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಇತ್ತೀಚೆಗೆ, ಮಹಿಳೆಯೊಬ್ಬಳು ತನ್ನ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ್ದ ಪ್ರಕರಣ ನಡೆದಿತ್ತು.
ಬೆಂಗಳೂರು, ಮಾ.8: ನಗರದಲ್ಲಿ (Bengaluru) ಮತ್ತೊಬ್ಬ ಮಹಿಳೆಯೊಬ್ಬಳು ತನ್ನ ಸ್ವಂತ ಮಗುವಿನ ಮೇಲೆ ಕ್ರೌರ್ಯ ಮೆರೆದ ಅಮಾನವೀಯ ಘಟನೆ ನಡೆದಿದೆ. ಪತಿ ಮೇಲಿನ ಕೋಪಕ್ಕೆ ಪ್ರಿಯಕರನೊಂದಿಗೆ ಸೇರಿ ತನ್ನ ಮೂರು ವರ್ಷದ ಮಗುವಿಗೆ ತಾಯಿ ಚಿತ್ರ ಹಿಂಸೆ ನೀಡಿದ ಆರೋಪ ಕೇಳಿಬಂದಿದೆ. ಮಹಿಳೆಯೊಬ್ಬಳು ತನ್ನ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿದ್ದ ಪ್ರಕರಣದ ನೆನಪು ಮನಸ್ಸಿನಿಂದ ಮಾಸುವ ಮುನ್ನವೇ ಈ ಕೃತ್ಯ ಬೆಳಕಿಗೆ ಬಂದಿದೆ.
ಆಯೇಷಾ ಎಂಬಾಕೆ ಇಮ್ರಾನ್ ಖಾನ್ ಎಂಬಾತನನ್ನು ಮದುವೆಯಾಗಿದ್ದು, ಒಂದು ಹೆಣ್ಣು ಮಗು ಜನಿಸಿದೆ. ಸದ್ಯ ದಂಪತಿ ವಿಚ್ಛೇದನ ಪಡೆದುಕೊಂಡಿದ್ದು, ಆಯೇಷಾ ತವರಿಗೆ ಹೋಗಿ ತಾಯಿ ಜೊತೆ ನೆಲೆಸಿದ್ದಾಳೆ. ಆಯೇಷಾಗೆ ಸಲೀಂ ಎಂಬ ಪ್ರಿಯಕರನೂ ಇದ್ದಾನೆ. ಅದರಂತೆ, ಪತಿ ಇಮ್ರಾನ್ ಖಾನ್ ಮೇಲಿನ ಕೋಪಕ್ಕೆ ಆಯೇಷಾ ತನ್ನ ಪ್ರಿಯಕರ ಸಲೀಂ ಜೊತೆ ಸೇರಿಕೊಂಡು ತಾನು ಹೆತ್ತ ಮಗು ಎಂದು ನೋಡದೆ ಚಿತ್ರಹಿಂಸೆ ನೀಡಿದ್ದಾಳೆ.
ಮಗುವನ್ನು ಕಚ್ಚಿ, ಅದಕ್ಕೆ ಫ್ರಿಡ್ಜ್ ನೀರು ಸರಿದು ಚಿತ್ರಹಿಂಸೆ ನೀಡಲಾಗಿದೆ. ಅಲ್ಲದೆ, ಮಗಳ ಕೈಗೆ ಸಿಗರೇಟ್ನಿಂದ ಸುಡಲಾಗಿದೆ. ಬಳಿಕ ಈ ಮಗುವಿನ ಮೇಲೆ ಸಲೀಂ ಹಲ್ಲೆ ನಡೆಸಿದ್ದಾನೆ. ಕೆಆರ್ಎಸ್ ಬಳಿಯ ಲಾಡ್ಜ್ನಲ್ಲಿ ಹೋಗಿ ಮಗಳನ್ನು ನೆಲಕ್ಕೆ ಬಿಸಾಡಿರುವ ಆರೋಪವೂ ಕೇಳಿಬಂದಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲೊಂದು ಅಮಾನುಷ ಕೃತ್ಯ, ಹೆತ್ತ ತಾಯಿಯಿಂದಲೇ ಮಗುವಿನ ಮೇಲೆ ಹಲ್ಲೆ
ಚಿತ್ರಹಿಂಸೆಯ ಬಳಿಕ ಘಟನೆಯನ್ನು ತಂದೆಗೆ ಹೇಳಿದರೆ ತಂದೆಯ ಜೊತೆ ನಿನ್ನನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಇದರಿಂದ ಭಯಗೊಂಡ ಮಗು ತಂದೆಯ ಜೊತೆ ಘಟನೆಯನ್ನು ಹೇಳಿಕೊಂಡಿರಲಿಲ್ಲ. ಕೆಲ ದಿನಗಳ ನಂತರ ಘಟನೆ ಬಗ್ಗೆ ಬಾಯಿಬಿಟ್ಟಿದ್ದು, ಇಮ್ರಾನ್ ನೀಡಿದ ದೂರಿನ ಅನ್ವಯ ಅಯೇಷಾ, ಈಕೆಯ ಪ್ರಿಯಕರ ಸಲೀಂ ಮತ್ತು ಜಬೀರ್ ಎಂಬವರ ವಿರುದ್ಧ ಜೆಜೆನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಯೇಷಾ ಜೊತೆ ಮಾತನಾಡಲು ಮನೆಗೆ ಹೋಗುತ್ತಿದ್ದ ಸಲೀಂ‘
ಘಟನೆ ಬಗ್ಗೆ ಟಿವಿ9 ಜೊತೆ ಮಾತನಾಡಿದ ಮಗುವಿನ ತಂದೆ ಇಮ್ರಾನ್, ಆಯೇಷಾ ಜೊತೆ ಮಾತನಾಡಲು ಹೊರಗಡೆಯಿಂದ ಜಾವೀರ್, ಸಲೀಮ್ ಅನ್ನುವವರು ಬರುತ್ತಿದ್ದಾರೆ. ಮನೆಯಿಂದ ಹೊರಗೆ ಹೋಗಿ ಎಂದು ಹೇಳುತ್ತಾರೆ. ಮಗುವಿಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ. ಜಾವೀರ್ ಎಂಬಾತ ಮಗುವಿನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಮಗುವಿಗೆ ಚಿಕಿತ್ಸೆ ಕೊಟ್ಟಿದ್ದಾರೆ. ಮಗುವಿಗೆ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ನಾನು ದೂರು ಕೊಟ್ಟಿದ್ದಾನೆ. ನನ್ನ ಮಾಜಿ ಪತ್ನಿ ಮತ್ತು ಬಾಯ್ ಫ್ರೆಂಡ್ ಬಂದಿದ್ದರು. ವಿಚಾರಣೆ ಮಾಡಿ ಕಳುಹಿಸಿ ಕೊಟ್ಟಿದ್ದಾರೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮರುಕಳಿಸಿದ ಮಗುವಿನ ಮೇಲಿನ ಕ್ರೌರ್ಯ
ಮಹಿಳೆಯೊಬ್ಬಳು ತನ್ನ ಮಗುವನ್ನು ಮನೆಯಲ್ಲಿ ಕೂಡಿ ಹಾಕಿ, ಮನಬಂದಂತೆ ಹೊಡೆದು ಬಡಿದು ಹಲ್ಲೆ ಮಾಡಿ ಕ್ರೌರ್ಯ ಮೆರೆದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಸ್ಟ್ಯಾಲಿನ್ ಎನ್ನುವ ಮಹಿಳೆ ತನ್ನ ಪ್ರಿಯಕರನ ಜೊತೆ ಸೇರಿ ಎರಡ್ಮೂರು ವರ್ಷದ ಮಗುವಿನ ಮೇಲೆ ಹಲ್ಲೆ ಮಾಡಿದ್ದು, ಮಗುವಿನ ಮೈತುಂಬ ಗಾಯಗಳಾಗಿದ್ದವು.
ಬೆಂಗಳೂರಿನ ವೀರಭದ್ರ ನಗರದಲ್ಲಿ ಈ ಅಮಾನವೀಯ ಘಟನೆ ನಡೆದಿದೆ. ತನ್ನ ಮೇಲೆ ತಾಯಿ ಕ್ರೌರ್ಯ ಮೆರೆದ ಭಗ್ಗೆ 2-3 ವರ್ಷದ ಮಗು ತೊದಲನುಡಿಯಲ್ಲೇ ಸ್ಥಳೀಯರೊಂದಿಗೆ ಹೇಳಿಕೊಂಡಿತ್ತು. ಮನೆಗೆ ಬಂದ ಅಂಕಲ್‌ವೊಬ್ಬರ್ ಕುಕ್ಕರ್‌ನಿಂದ ತಲೆಗೆ ಹೊಡೆದಿದ್ದು, ಅಮ್ಮ ಕೂಡ ನೀನು ಬೇಡ ಮನೆ ಬಿಟ್ಟು ಹೋಗು ಎಂದು ಕಾಲಲ್ಲಿ ಒದ್ದಿದ್ದಾಳೆ ಎಂದು ಮಗು ಹೇಳಿಕೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಸಂಘಟನೆಯೊಂದು ಮಗುವಿನ ರಕ್ಷಣೆ ಮಾಡಿತ್ತು. ಅಲ್ಲದೆ, ಮಗುವಿನ ತಾಯಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:37 pm, Fri, 8 March 24