2ಎ ಪ್ರವರ್ಗಕ್ಕೆ ಲಿಂಗಾಯತ ಪಂಚಮಸಾಲಿ ಸಮುದಾಯ ಸೇಪರ್ಡಿಸುವ ನಂಬಿಕೆ ಇದೆ: ಬಸವ ಜಯ ಮೃತ್ಯುಂಜಯ ಸ್ವಾಮಿ

| Updated By: preethi shettigar

Updated on: Mar 04, 2022 | 4:24 PM

ಸಮುದಾಯದ ನಾಯಕರ ಜೊತೆ ಚರ್ಚೆ ಮಾಡಿ ಯಾವ ರೀತಿ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಆದರೆ ಸಿಎಂ ಮೇಲೆ ತುಂಬಾ ನಂಬಿಕೆ ಇದೆ. ಇದೇ ಬಜೆಟ್ ಅಧಿವೇಶನದಲ್ಲಿಯೇ ಮೀಸಲಾತಿ ಜಾರಿ ಮಾಡುತ್ತಾರೆ ಎಂದು ಕುಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.

2ಎ ಪ್ರವರ್ಗಕ್ಕೆ ಲಿಂಗಾಯತ ಪಂಚಮಸಾಲಿ ಸಮುದಾಯ ಸೇಪರ್ಡಿಸುವ ನಂಬಿಕೆ ಇದೆ:  ಬಸವ ಜಯ ಮೃತ್ಯುಂಜಯ ಸ್ವಾಮಿ
ಬಸವ ಜಯ ಮೃತ್ಯುಂಜಯ ಸ್ವಾಮಿ
Follow us on

ಬೆಂಗಳೂರು: ಮಲೆಗೌಡರನ್ನು 2ಎ ಗೆ ಸೇರಿಸುವ ವಿಚಾರವಾಗಿ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಮಾಡಿದ್ದೇವೆ. ಇಂದು ಆಯೋಗ ವಿಚಾರಣೆ ನಡೆಸಿದೆ. 2ಎ ಪ್ರವರ್ಗಕ್ಕೆ ಲಿಂಗಾಯತ ಪಂಚಮಸಾಲಿ (Lingayat panchamasali) ಸಮುದಾಯ ಸೇಪರ್ಡಿಸುವ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಮೇಲೆ ನಂಬಿಕೆ ಇದೆ. ಈ ಬಜೆಟ್ ಅಧಿವೇಶನದಲ್ಲಿಯೇ ಮಿಸಲಾತಿ ಪೋಷಣೆ ಮಾಡುವ ನಂಬಿಕೆ ಇದೆ. ಒಂದು ವೇಳೆ ಈ ಬಜೆಟ್​ನಲ್ಲಿಯೂ ಬೇಡಿಕೆ ಈಡೇರಿಕೆಯಾಗದೇ ಹೋದರೆ ಹೋರಾಟ ಮಾಡುತ್ತೀವಿ ಎಂದು ಕುಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿ(Basava Jaya mruthyunjaya) ಹೇಳಿದ್ದಾರೆ.

ಸಮುದಾಯದ ನಾಯಕರ ಜೊತೆ ಚರ್ಚೆ ಮಾಡಿ ಯಾವ ರೀತಿ ಹೋರಾಟ ಮಾಡಬೇಕು ಎಂದು ನಿರ್ಧಾರ ಮಾಡಿದ್ದಾರೆ. ಆದರೆ ಸಿಎಂ ಮೇಲೆ ತುಂಬಾ ನಂಬಿಕೆ ಇದೆ. ಇದೇ ಬಜೆಟ್ ಅಧಿವೇಶನದಲ್ಲಿಯೇ ಮೀಸಲಾತಿ ಜಾರಿ ಮಾಡುತ್ತಾರೆ ಎಂದು ಕುಡಲ ಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮಿ ತಿಳಿಸಿದ್ದಾರೆ.

ಬಳಿಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಹಾಗೂ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ತಲಾ 100 ಕೋಟಿ ರೂ. ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು, ನಿಗಮ ಮಂಡಳಿಗೆ 100 ಕೋಟಿ ಕೊಟ್ಟಿದ್ದು, ಸ್ವಾಗತರ್ಹ. ಆದರೆ ಹಿಂದೆ ನೀಡಿರುವ 500 ಕೋಟಿ ರೂಪಾಯಿ ಹಣವೇ ಸಮರ್ಪಕ ಬಳಕೆಯಾಗಿಲ್ಲ. ಸರಿಯಾದ ಯೋಜನೆ ರೂಪಿಸಿಲ್ಲ. ಸಮರ್ಪಕ ಯೋಜನೆ ಮೂಲಕ ಅನುದಾನ ಬಳಕೆಯಾಗಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಪಂಚಮಸಾಲಿ 3ನೇ ಪೀಠ ಅಸ್ತಿತ್ವಕ್ಕೆ: ಮಹದೇವ ಶಿವಾಚಾರ್ಯ ಪೀಠಾರೋಹಣ, ಮುಂಚೂಣಿಯಲ್ಲಿ ನಿಂತ ಮುರುಗೇಶ್ ನಿರಾಣಿ

ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಮಾರ್ಚ್​ ಒಳಗಾಗಿ ಸರ್ಕಾರ ಪ್ರಕಟಿಸಬೇಕು: ಜಯಮೃತ್ಯುಂಜಯ ಸ್ವಾಮೀಜಿ