ಬೆಂಗಳೂರು: ಮೊದಲಿನಿಂದಲೂ ಬಿಟ್ ಕಾಯಿನ್ ಪ್ರಕರಣ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ. ನಿನ್ನೆ ಹೆಚ್.ಡಿ.ಕುಮಾರಸ್ವಾಮಿಯವರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಬಿಟ್ ಕಾಯಿನ್ ಬಗ್ಗೆ ಸರ್ಕಾರ ಕೆಲ ದಾಖಲೆ ಬಿಡುಗಡೆ ಮಾಡಿದೆ. ಆದರೆ ಅವರಿಗೆ ಏನು ಬೇಕೋ ಅದನ್ನೇ ಬಿಡುಗಡೆ ಮಾಡಿದ್ದಾರೆ. ಪ್ರಧಾನಿ ಮೋದಿಗೆ (Narendra modi) ಬರೆದಿರುವ ಪತ್ರದ ಬಗ್ಗೆ ಮಾತಾಡುತ್ತಿಲ್ಲ. ಬಿಟ್ ಕಾಯಿನ್ (Bitcoin) ತನಿಖೆ ಬಗ್ಗೆ ಪ್ರಧಾನಿ ಅವರು ಮಾತಾಡುತ್ತಿಲ್ಲ. ಪ್ರಧಾನಿ ಈ ವಿಚಾರ ಬಿಟ್ಟು ಬಿಡಿ ಎಂದು ಹೇಳಿರಬಹುದು. ಆದರೆ ನಾವು ಮಾತ್ರ ಬಿಟ್ ಕಾಯಿನ್ ವಿಚಾರ ಬಿಡಲ್ಲ. ಬಿಟ್ ಕಾಯಿನ್ ದಂಧೆ ಬಗ್ಗೆ ನಾವು ದಾಖಲೆ ಸಂಗ್ರಹಿಸುತ್ತಿದ್ದೇವೆ ಎಂದು ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಸಮಯ ಬಂದಾಗ ಖಂಡಿತ ಬಿಟ್ ಕಾಯಿನ್ ದಾಖಲೆ ಬಿಡುಗಡೆ ಮಾಡುತ್ತೇವೆ. ನಾವು ಇದನ್ನು ಬಹಿರಂಗ ಮಾಡುತ್ತಿಲ್ಲ. ಬಿಜೆಪಿ ನಾಯಕರೇ ನಮಗೆ ಮಾಹಿತಿ ನೀಡುತ್ತಿದ್ದಾರೆ. ಇಂದು ಪಕ್ಷದ ಕಾರ್ಯಕ್ರಮ ಇದೆ. ಸಂಜೆ ನಂತರ ನಮ್ಮ ಪ್ರಾಮುಖ್ಯತೆ ಬದಲಾಗಬಹುದು. ಈ ವಿಚಾರವಾಗಿ ಇನ್ನಷ್ಟು ಮಾಹಿತಿ ಪಡೆಯುತ್ತೀವಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬಿಟ್ ಕಾಯಿನ್ ಬಿಟ್ ಹಾಕ್ಬಿಡಿ ಅಂದರೆ ಬಿಟ್ ಹಾಕ್ಕೊಳ್ಳಲಿ. ನಾವು ಸುಮ್ಮನೆ ಕುಳಿತುಕೊಳ್ಳೋದಿಲ್ಲ. ನಾವು ಮತ್ತೆ ಬರುತ್ತೇವೆ. ಈಗ ಪಕ್ಷದ ಕೆಲಸ ಇದೆ. ಇಂದು (ನವೆಂಬರ್ 12) ಸಂಜೆ ಎಲ್ಲಾ ನಿರ್ಧಾರವಾಗುತ್ತದೆ ಎಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
12 ವರ್ಷದ ಬಳಿಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭ: ಡಿ.ಕೆ.ಶಿವಕುಮಾರ್
12 ವರ್ಷದ ಬಳಿಕ ಕಾಂಗ್ರೆಸ್ ಸದಸ್ಯತ್ವ ಅಭಿಯಾನ ಆರಂಭವಾಗುತ್ತಿದೆ. ಪ್ರತಿಯೊಬ್ಬ ನಾಯಕರು 25 ಸಾವಿರ ಸದಸ್ಯತ್ವ ಮಾಡಬೇಕು. ಪದ್ಮನಾಭನಗರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆಂದು ವಿಶ್ವಾಸ ಇದೆ. ಆರ್.ಅಶೋಕ್ ಕಾಂಗ್ರೆಸ್ ಪಕ್ಷದ ಬಾವುಟ ಕಿತ್ತುಹಾಕಿದ್ದಾರೆ. ಪಾಪಾ ಆ ಕೆಲಸವಾದರೂ ಮಾಡುತ್ತಿದ್ದಾರಲ್ಲಾ ಎಂದು ಡಿ.ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬಳಿಕ ಮಾತನಾಡಿದ ಅವರು ಸರ್ಕಾರ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಪಿಕ್ಪಾಕೆಟ್ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ. ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್‌ನಿಂದ ಪಾದಯಾತ್ರೆ ಮಾಡುತ್ತೇವೆ. ಪದ್ಮನಾಭನಗರದ ಮೂಲಕವೇ ಪಾದಯಾತ್ರೆ ಹೋಗುತ್ತೇವೆ. ಆಗ ಈ ಭಾಗದವರು ಪಾದಯಾತ್ರೆಯಲ್ಲಿ ಭಾಗಿಯಾಗಬೇಕು. ಬೆಂಗಳೂರು ಹಾಗೂ ಕಾವೇರಿ ಜಲಾನಯನ ಪ್ರದೇಶಕ್ಕೆ ಈ ಯೋಜನೆ ಉಪಕಾರಿ. ಹೀಗಾಗಿ ಮೇಕೆದಾಟು ಯೋಜನೆ ಜಾರಿ ಮಾಡಬೇಕು. ಈ ಬಗ್ಗೆ ನಾವು ಕೂಡ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ:
Tv9 Digital Live | ಬಿಟ್ ಕಾಯಿನ್ Bitcoin ಎಂದರೇನು? ಭಾರತಕ್ಕೆ ಬರುತ್ತಾ ಡಿಜಿಟಲ್ ಕರೆನ್ಸಿ?
Published On - 2:51 pm, Fri, 12 November 21