AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shobha Karandlaje: ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಶಿವಪೂಜೆಯಲ್ಲಿ ಭಾಗಿಯಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಇಂದು ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಶಿವ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

Shobha Karandlaje: ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಶಿವಪೂಜೆಯಲ್ಲಿ ಭಾಗಿಯಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಶಿವಪೂಜೆಯಲ್ಲಿ ಭಾಗಿಯಾದ ಸಚಿವೆ ಶೋಭಾ ಕರಂದ್ಲಾಜೆ
TV9 Web
| Updated By: ಆಯೇಷಾ ಬಾನು|

Updated on:Nov 12, 2021 | 2:14 PM

Share

ಬೆಂಗಳೂರು: ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ಜಂಗಮವಾಡಿ ಮಠಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಭೇಟಿ ನೀಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಸಹ ಉಸ್ತುವಾರಿ ಆಗಿರುವ ಶೋಭಾ ಮಠಕ್ಕೆ ಭೇಟಿ ನೀಡಿ ಶಿವಪೂಜೆಯಲ್ಲಿ ಪಾಲ್ಗೊಂಡಿದ್ದಾರೆ. ಜಗದ್ಗರುಗಳ ಆರ್ಶೀರ್ವಾದ ಪಡೆದಿದ್ದಾರೆ.

2022ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಐವರು ಕೇಂದ್ರ ನಾಯಕರನ್ನು ಬಿಜೆಪಿ ಸಹ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಈ ಪೈಕಿ ಉಡುಪಿ-ಚಿಕ್ಕಮಗಳೂರು ಬಿಜೆಪಿ ಸಂಸದೆ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಸಹ ಉಸ್ತುವಾರಿಯಾಗಿ ನೇಮಕಗೊಂಡಿದ್ದರು. ಇಂದು ಉತ್ತರಪ್ರದೇಶದ ವಾರಾಣಸಿಯಲ್ಲಿರುವ ಕಾಶಿ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಶಿವ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಹಾಸನಾಂಬ ದರ್ಶನ ಪಡೆದಿದ್ದ ಸಚಿವೆ ಶೋಭಾ ಇನ್ನು ವರ್ಷಕ್ಕೊಮ್ಮೆ ದರ್ಶನ ನೀಡುವ ಶಕ್ತಿ ದೇವತೆ ಹಾಸನಾಂಬೆ ದರ್ಶನ ಪಡೆಯಲು ನವೆಂಬರ್ 2ರಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಸನಕ್ಕೆ ಆಗಮಿಸಿದ್ದರು. ಹಾಸನಾಂಬೆಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಮಾಡಿದ್ದರು.

Shobha Karandlaje

ಜಗದ್ಗರುಗಳ ಆರ್ಶೀರ್ವಾದ ಪಡೆದ ಶೋಭಾ ಕರಂದ್ಲಾಜೆ

Shobha Karandlaje 2

ಜಗದ್ಗರುಗಳ ಆರ್ಶೀರ್ವಾದ ಪಡೆದ ಶೋಭಾ ಕರಂದ್ಲಾಜೆ

ಇದನ್ನೂ ಓದಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಮ್ಮ ನಿಯಂತ್ರಣದಲ್ಲಿಲ್ಲ, ಆದರೂ ಪ್ರಧಾನಿ ಮೋದಿ ಕಡಿಮೆ ಮಾಡಿದ್ದಾರೆ: ಶೋಭಾ ಕರಂದ್ಲಾಜೆ

Published On - 2:04 pm, Fri, 12 November 21