ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಪರಾರಿಯಾಗಿದ್ದ ಕಳ್ಳ ತಮಿಳುನಾಡಿನಲ್ಲಿ ಸೆರೆ

ಅರೋಪಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ. ರಾತ್ರಿ ವೇಳೆ ಸಣ್ಣ ಸಣ್ಣ ಮನೆಗಳಿಗೆ ಎಂಟ್ರಿ ಕೊಟ್ಟು ಕದಿಯುತ್ತಿದ್ದ. ಬೀಗ ಹಾಕಿರುವ ಮನೆಗೆ ನುಗ್ಗಿ ಲೂಟಿ ಮಾಡುತ್ತಿದ್ದ. ಪೊಲೀಸರಿಗೆ ಸಿಕ್ಕಿ ಬಿದ್ದು ಎಸ್ಕೇಪ್ ಆಗಿ ಮತ್ತದೇ ಕೃತ್ಯ ಎಸಗುತ್ತಿದ್ದ.

ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಪರಾರಿಯಾಗಿದ್ದ ಕಳ್ಳ ತಮಿಳುನಾಡಿನಲ್ಲಿ ಸೆರೆ
ಬಂಧಿತ ಆರೋಪಿ

ಬೆಂಗಳೂರು: ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಕೊರೊನಾಗೆ ಚಿಕಿತ್ಸೆ ಪಡೆಯುವ ವೇಳೆ ಪರಾರಿಯಾಗಿದ್ದ. ಸದ್ಯ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಜಾನ್ ಪ್ರವೀಣ್ ಅಲಿಯಾಸ್ ಮೂಗು ಮಚ್ಚಿ ಎಂಬಾತ ಅರೆಸ್ಟ್ ಆಗಿದ್ದಾನೆ. ಸಿಸಿಟಿವಿ ದೃಶ್ಯ, ಫಿಂಗರ್ ಪ್ರಿಂಟ್ ಆಧರಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಬಾಗಲೂರು ಪೊಲೀಸರು ತಮಿಳುನಾಡಿನಲ್ಲಿ ಆರೋಪಿಯನ್ನು ಬಂಧಿಸಿ, 6.67 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 90 ಗ್ರಾಂ ಬೆಳ್ಳಿ ಮತ್ತು15 ಸಾವಿರ ನಗದನ್ನು ವಶಕ್ಕೆ ಪಡೆದಿದ್ದಾರೆ. ಮಕ್ಕಳ ಹುಂಡಿಗಳಲ್ಲಿದ್ದ ಹಣವನ್ನೂ ಕದಿಯುತ್ತಿದ್ದ ಆರೋಪಿಯಿಂದ 2,345 ಚಿಲ್ಲರೆ ಹಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಅರೋಪಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳ್ಳತನ ಮಾಡುತ್ತಿದ್ದ. ರಾತ್ರಿ ವೇಳೆ ಸಣ್ಣ ಸಣ್ಣ ಮನೆಗಳಿಗೆ ಎಂಟ್ರಿ ಕೊಟ್ಟು ಕದಿಯುತ್ತಿದ್ದ. ಬೀಗ ಹಾಕಿರುವ ಮನೆಗೆ ನುಗ್ಗಿ ಲೂಟಿ ಮಾಡುತ್ತಿದ್ದ. ಪೊಲೀಸರಿಗೆ ಸಿಕ್ಕಿ ಬಿದ್ದು ಎಸ್ಕೇಪ್ ಆಗಿ ಮತ್ತದೇ ಕೃತ್ಯ ಎಸಗುತ್ತಿದ್ದ. ಮರಿಯಣ್ಣನ ಪಾಳ್ಯದ ಸೆಕ್ಯೂರಿಟಿ ಗಾರ್ಡ್ ಮನೆಯಲ್ಲಿ ಕಳ್ಳತನ ನಡೆಸಿದ್ದ. ಕಳ್ಳತನ ಕೃತ್ಯ ಎಸಗಿ ಹೊರ ಬರುವ ವೇಳೆ ಸೆಕ್ಯೂರಿಟಿ ಕಳ್ಳನನ್ನು ನೋಡುತ್ತಾರೆ. ಕೂಡಲೇ ಹಿಡಿಯಲು ಮುಂದಾದಾಗ ಎಸ್ಕೇಪ್ ಆಗುತ್ತಾರೆ. ಆರೋಪಿಯ ಕಳ್ಳ ಹೆಜ್ಜೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಷ್ಟ ಪಟ್ಟು ಡಬಲ್ ಡ್ಯೂಟಿ ಮಾಡಿ ಮನೆ ಮಾಲೀಕ ಹಣ ಕೂಡಿಟ್ಟಿದ್ದರು. ಮನೆ ಮಾಲೀಕ ವೆಲ್ಡಿಂಗ್ ಜೊತೆಗೆ ರಾತ್ರಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದರು. ದುಡಿದು ಹಣವನ್ನು ಸಂಗ್ರಹಿಸಿಟ್ಟಿದ್ದರು. ಮನೆಯಲ್ಲಿದ್ದ ಹಣವನ್ನು ಆರೋಪಿ ಕದ್ದೊಯ್ದಿದ್ದ. ಈ ಬಗ್ಗೆ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮನೆ ಮಾಲೀಕ ದೂರು ನೀಡಿದ್ದರು.

ಕಳ್ಳತನ ಕೃತ್ಯ ನಡೆಯುವ ಕೆಲ ದಿನದ ಹಿಂದಷ್ಟೇ ಆರೋಪಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. ಮನೆಗಳ್ಳತನ ಕೇಸ್ನಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ ಕೊರೊನಾ ಚಿಕಿತ್ಸೆ ಪಡೆಯುವಾಗ ಪರಾರಿಯಾಗಿದ್ದ. ಎಸ್ಕೇಪ್ ಆಗಿ ಮತ್ತೆ ಕಳ್ಳತನ ನಡೆಸಿದ್ದ. ಕಳ್ಳತನ ನಡೆಸುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ

ಬಿಜೆಪಿಗೆ ಹೋಗುವಂತೆ ನಮಗೆ ಸಿದ್ದರಾಮಯ್ಯ ಹೇಳಿರಲಿಲ್ಲ; ಕುಮಾರಸ್ವಾಮಿಗೆ ಎಸ್.ಟಿ. ಸೋಮಶೇಖರ್ ತಿರುಗೇಟು

ಈ 4 ರಾಶಿಯ ಮಕ್ಕಳು ಚತುರರು, ಇವರಿಗೆ ಉತ್ತಮ ಮಾರ್ಗದರ್ಶನ ದೊರೆತರೆ ಇವರ ಭವಿಷ್ಯ ಉತ್ತಮವಾಗಿ ಇರುತ್ತದೆ!

Read Full Article

Click on your DTH Provider to Add TV9 Kannada