ಈ ಬಾರಿ ರಾಜ್ಯೋತ್ಸವದ ದಿನ ಪ್ರತಿ ಮನೆಯ ಮೇಲೂ ಕನ್ನಡ ಧ್ವಜ ಹಾರಿಸುವಂತೆ ಡಾ. ಮಹೇಶ ಜೋಶಿ ಕರೆ
ನ.1ರಂದು ಪ್ರತಿಯೊಬ್ಬ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಾರೆ. ನಾಡಿನಾದ್ಯಂತ ಎಲ್ಲೆಡೆಯೂ ಹಳದಿ ಕೆಂಪು ಬಣ್ಣವು ರಾರಾಜಿಸಲಿ ಎಂದು ಡಾ. ಮಹೇಶ ಜೋಶಿ ಹೇಳಿದರು.
ಬೆಂಗಳೂರು: ಈ ಬಾರಿ ಕನ್ನಡ ರಾಜ್ಯೋತ್ಸವ (kannada rajyotsava) ದಂದು ಪ್ರತಿ ಮನೆಗಳ ಮೇಲೆ ಕನ್ನಡಧ್ವಜ ಹಾರಿಸುವಂತೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಕರೆ ನೀಡಿದರು. ಕನ್ನಡದ ಕಣ್ವ ಖ್ಯಾತಿಯ ಬಿ.ಎಂ.ಶ್ರೀಕಂಠಯ್ಯನವರು ರಚಿಸಿದ ಏರಿಸಿ ಹಾರಿಸಿ ಕನ್ನಡದ ಬಾವುಟ, ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ ಎನ್ನುವಂತೆ ಈ ಬಾರಿ ಅರ್ಥಪೂರ್ಣವಾಗಿ ಕನ್ನಡ ಪ್ರೇಮ ಮೆರೆಯೋಣ. ನ.1ರಂದು ಪ್ರತಿಯೊಬ್ಬ ಕನ್ನಡಿಗರು ಸಂಭ್ರಮದಿಂದ ಆಚರಿಸುತ್ತಾರೆ. ಅದರೊಂದಿಗೆ ಈ ಬಾರಿ ಪ್ರತಿಯೊಬ್ಬ ಕನ್ನಡಿಗನೂ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆಯ ಧ್ಯೋತಕವಾದ ಕನ್ನಡದ ಧ್ವಜವನ್ನು ನಾಡಿನಾದ್ಯಂತ ಎಲ್ಲೆಡೆಯೂ ಹಳದಿ ಕೆಂಪು ಬಣ್ಣವು ರಾರಾಜಿಸಲಿ. ಸ್ಫೂರ್ತಿಯ ಸೆಲೆ ಎಲ್ಲೆಡೆಯೂ ಪಸರಿಸಲಿ. ಎಲ್ಲರ ಮನ-ಮನೆಯಲ್ಲೂ ಕನ್ನಡತನ ಮೆರೆಯಲಿ ಎಂದು ಡಾ. ಮಹೇಶ ಜೋಶಿ ಹೇಳಿದರು.
ಸಾಧಕರಿಗೆ ಮತ್ತೆ ಪ್ರಶಸ್ತಿ ನೀಡಿ ಎಂದ ಕರವೇ ಕಾರ್ಯಕರ್ತರು
ರಾಯಚೂರು: ಕನ್ನಡ ರಾಜೋತ್ಸವ ಪ್ರಶಸ್ತಿ ವಿಚಾರವಾಗಿ ವಿವಾದ ಶುರುವಾಗಿದ್ದು, ಜಿಲ್ಲಾಡಳಿತದ ನಡೆ ವಿರುದ್ಧ ಕರವೇ ಕಾರ್ಯಕರ್ತರು ಡಿಸಿ ಸಭೆಯಲ್ಲೇ ಪ್ರತಿಭಟನೆ ನಡೆಸಿರುವಂತಹ ಘಟನೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದಿದೆ. ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ವಿನೋದ್ ರೆಡ್ಡಿ ನೇತೃತ್ವದ ಸಭೆಯಲ್ಲಿ ಪ್ರತಿಭಟನೆ ಮಾಡಿದ್ದು, ನಾಲ್ಕು ವರ್ಷಗಳಿಂದ ಜಿಲ್ಲಾ ಕನ್ನಡ ರಾಜೋತ್ಸವ ಪ್ರಶಸ್ತಿ ತಡೆಹಿಡಿಯಲಾಗಿದೆ. ಮತ್ತೆ ಸಾಧಕರಿಗೆ ಪ್ರಶಸ್ತಿ ನೀಡಿ ಎಂದು ಕರವೇ ಕಾರ್ಯಕರ್ತರು ಆಗ್ರಹಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:38 pm, Mon, 17 October 22