ಉದ್ಘೋಷಿತ ಅಪರಾಧಿಗಳ ಸುಳಿವು ಕೊಟ್ಟವರಿಗೆ ಸರ್ಕಾರದಿಂದ ಸಿಗಲಿದೆ 5 ಲಕ್ಷ ರೂ. ಬಹುಮಾನ
ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿ ಆಗುವ ಅಪರಾಧಿಗಳ ಮಾಹಿತಿ ನೀಡಿದರೆ ಭಾರಿ ಮೊತ್ತದ ಬಹುಮಾನ ನೀಡಲು ಸರ್ಕಾರ ಮುಂದಾಗಿದೆ.
ಬೆಂಗಳೂರು: ಮಹಿಳೆ, ಮಕ್ಕಳ ಮೇಲೆ ದೌರ್ಜನ್ಯ, ಕಳ್ಳ ಸಾಗಾಣಿಕೆ, ಡ್ರಗ್ಸ್ ಸಾಗಾಣಿಕೆ, ಆಯುಧ ಕಳ್ಳ ಸಾಗಾಣಿಕೆ ಸೇರಿದಂತೆ ಸಮಾಜಘಾತುಕ ಚಟುವಟಿಕೆಗಳಲ್ಲಿ ಭಾಗಿ ಆಗುವ ಅಪರಾಧಿಗಳ ಮಾಹಿತಿ ನೀಡಿದರೆ ಭಾರಿ ಮೊತ್ತದ ಬಹುಮಾನ ನೀಡಲು ಸರ್ಕಾರ ಮುಂದಾಗಿದೆ. ಉದ್ಘೋಷಿತ ಅಪರಾಧಿ (Proclaimed Offender) ಗಳ ಸುಳಿವು ನೀಡುವ ಖಾಸಗಿ ಮಾಹಿತಿದಾರರಿಗೆ 5 ಲಕ್ಷ ರೂ.ವರೆಗೆ ಬಹುಮಾನ ನೀಡಲಾಗುತ್ತದೆ. DG ಮತ್ತು IGPಗೆ ವಿಶೇಷ ಆರ್ಥಿಕ ವಿತ್ತಾಧಿಕಾರ ನೀಡಲು ಸರ್ಕಾರ ಮುಂದಾಗಿದೆ. ರಾಷ್ಟ್ರೀಯ ಸುರಕ್ಷತೆ, ಕಾನೂನು ಸುವ್ಯವಸ್ಥೆ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಕರಣದ ತೀವ್ರತೆಯ ಆಧಾರದಲ್ಲಿ ಬಹುಮಾನದ ಹಣದ ಬಗ್ಗೆ ನಿರ್ಧಾರ ಮಾಡಲಾಗುತ್ತದೆ. 20 ಸಾವಿರದಿಂದ 5 ಲಕ್ಷ ರೂಪಾಯಿವರೆಗೆ ಬಹುಮಾನ ನೀಡಬಹುದು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ಈ ಬಹುಮಾನ ಅನ್ವಯವಾಗಲ್ಲ.
ಇದನ್ನೂ ಓದಿ: ‘ದೇವದಾಸಿ ಮಕ್ಕಳಿಗೆ ತಾಯಿ ಹೆಸರೇ ಅಂತಿಮ’ ನಿರ್ಣಯಕ್ಕೆ ಸರ್ಕಾರದಿಂದ ಸಹಮತ
ಈ ಹಿಂದೆ NIA, CBI ಸೇರಿ ಹಲವು ಕೇಂದ್ರ ತನಿಖಾ ಸಂಸ್ಥೆಗಳು ಮಾತ್ರ ಇದು ಅನ್ವಯವಾಗುತ್ತದೆ. ಮಾಹಿತಿ ನೀಡಿದವರಿಗೆ ಭಾರಿ ಮೊತ್ತದ ಬಹುಮಾನ ಘೋಷಣೆ ಮಾಡಲಾಗುತ್ತಿದೆ. ಈಗ ರಾಜ್ಯ ಸರ್ಕಾರದಿಂದಲೂ ಬಹುಮಾನದ ಮೊತ್ತ ಏರಿಸುವ ನಿರ್ಧಾರ ಮಾಡಲಾಗಿದೆ. ಈ ಮೂಲಕ ಕಾನೂನು ಸುವ್ಯವಸ್ಥೆಗೆ ರಾಜ್ಯ ಸರ್ಕಾರ ಒತ್ತು ನೀಡಲಿದೆ. ಈ ರೀತಿ ಬಹುಮಾನ ಹೆಚ್ಚಳ ಮಾಡಿದರೆ ಸಾರ್ವಜನಿಕರು, ಮಾಹಿತಿದಾರರು ಉದ್ಘೋಷಿತ ಅಪರಾಧಿಗಳ ಬಗ್ಗೆ ಮಾಹಿತಿ ನೀಡಬಹುದು.
ಸರ್ಕಾರದ ಈ ವಿಶೇಷ ಯೋಜನೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ರಾಜ್ಯ ಪೊಲೀಸ್ ಮಖ್ಯಸ್ಥರು ಸಲ್ಲಿಸಿದ ಪ್ರಸ್ತಾವನೆಗೆ ಸಚಿವರು ಇಂದು ಅಂಕಿತ ಹಾಕಿದ್ದಾರೆ. ಬಹುಮಾನದ ಮೊತ್ತವನ್ನು ಈ ಹಿಂದೆ 2017ರಲ್ಲಿ ಪರಿಷ್ಕರಿಸಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ, ಐಜಿಪಿ ಅವರ ಆರ್ಥಿಕ ವಿತ್ತಾಧಿಕರದಲ್ಲಿ ಯಾವುದೇ ನಗದು ಪ್ರೋತ್ಸಾಹ ಧನವನ್ನು ನೀಡಿರುದಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.