ಬೆಂಗಳೂರಿನ ಬಹುತೇಕ ವಿಧಾನಸಭಾ ಕ್ಷೇತ್ರ( Assembly Constituencies) ದ ಮತದಾರರ ಪಟ್ಟಿಯಿಂದ ಸಾವಿರಾರು ಮತದಾರರ ಹೆಸರನ್ನು ಅಳಿಸಿಹಾಕಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಮತದಾರರ ಪಟ್ಟಿ( Voters List) ಯಿಂದ ಹೆಸರು ಅಳಿಸಿ ಹೋದವರು ಅರ್ಜಿ ಸಲ್ಲಿಸಿದ್ದಾರೆ. ವಿಲ್ಸನ್ ಗಾರ್ಡನ್ ನ ಒಂದೇ ಕುಟುಂಬದ ಇಬ್ಬರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಒಂದೇ ವಿಳಾಸವೂ ಆಗಿದ್ದು, ಜೀವಂತವಾಗಿದ್ದರೂ ಕೂಡ ಪಟ್ಟಿಯಿಂದ ಹೆಸರನ್ನು ಕೈಬಿಡಲಾಗಿದೆ ಎಂದು ದೂರಿದ್ದಾರೆ.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 21,968 ಮತದಾರರ ಹೆಸರನ್ನು ಕೈಬಿಡಲಾಗಿದೆ. ಕೆ.ಆರ್ ಪುರಂ ಕ್ಷೇತ್ರದಿಂದ 39,763 ಮತದಾರರು, ಬ್ಯಾಟರಾಯನಪುರ ಕ್ಷೇತ್ರದಿಂದ 30,757 ಮತದಾರರು, ಯಶವಂತಪುರ 35,829, ಆರ್ ಆರ್ ನಗರ 33,009, ದಾಸರ ಹಳ್ಳಿ 35,086, ಮಹಾಲಕ್ಷ್ಮಿಲೇಔಟ್ 20,404, ಮಲ್ಲೇಶ್ವರಂ 11,788, ಹೆಬ್ಬಾಳ 20,039, ಪುಲಕೇಶಿ ನಗರ 22,196, ಸರ್ವಜ್ಞ ನಗರ 28,691, ಸಿವಿ ರಾಮನ್ ನಗರ 21,457, ಶಿವಾಜಿನಗರ 14,679, ಶಾಂತಿನಗರ 20,386, ಗಾಂಧಿನಗರ 16,465 ಮತದಾರರ ಹೆಸರುಗಳನ್ನು ಅಳಿಸಿಹಾಕಲಾಗಿದೆ.
ರಾಜಾಜಿನಗರ 12,757, ಗೋವಿಂದರಾಜ್ ನಗರ 20,067, ವಿಜಯನಗರ 28,562, ಚಾಮರಾಜಪೇಟೆ 19,304, ಚಿಕ್ಕಪೇಟೆ 16,231, ಬಸವನಗುಡಿ 18,838, ಪದ್ಮನಾಭ ನಗರ 17,435, ಬಿಟಿಎಂ ಲೇಔಟ್ 16,141, ಜಯನಗರ 13,061, ಮಹಾದೇವಪುರ 33,376
ಬೊಮ್ಮನಹಳ್ಳಿ 31,157, ಬೆಂಗಳೂರು ಸೌತ್ 45,927, ಆನೇಕಲ್ 24,279 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ