ಬೆಂಗಳೂರಿನ ಕಾಂಗ್ರೆಸ್ ಮುಖಂಡ ಅಲ್ತಾಪ್ ಖಾನ್ ಹಲ್ಲೆಗೆ ಹೊಂಚು ಹಾಕಿ ಕುಳಿತಿದ್ದ ಮೂವರು ಆರೋಪಿಗಳು ವಶ

| Updated By: ಆಯೇಷಾ ಬಾನು

Updated on: Dec 25, 2022 | 7:53 AM

ಮಾರಕಾಸ್ತ್ರಗಳೊಂದಿಗೆ ಮನೆ ಬಳಿ ಬಂದಿದ್ದ ಮೂವರು ಯುವಕರು ಅಲ್ತಾಪ್ ಖಾನ್ ಮೇಲೆ ಹಲ್ಲೆಗೆ ಯತ್ನಿಸಲು ಪ್ಲಾನ್ ಮಾಡಿದ್ರು.

ಬೆಂಗಳೂರಿನ ಕಾಂಗ್ರೆಸ್ ಮುಖಂಡ ಅಲ್ತಾಪ್ ಖಾನ್ ಹಲ್ಲೆಗೆ ಹೊಂಚು ಹಾಕಿ ಕುಳಿತಿದ್ದ ಮೂವರು ಆರೋಪಿಗಳು ವಶ
Follow us on

ಬೆಂಗಳೂರು: ಮಂಗಳೂರು ಸುರತ್ಕಲ್​​ನಲ್ಲಿ (Surathkal) ಅಬ್ದುಲ್​ ಜಲೀಲ್ ಹತ್ಯೆ ಪ್ರಕರಣ ಬೆನ್ನಲ್ಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಮುಖಂಡ ಅಲ್ತಾಪ್ ಖಾನ್ ಮೇಲೆ ಹಲ್ಲೆಗೆ ಹೊಂಚು ಹಾಕಿದ್ದ ಯುವಕರನ್ನು ವಶಕ್ಕೆ ಪಡೆಯಲಾಗಿದೆ. ಮಾರಕಾಸ್ತ್ರಗಳೊಂದಿಗೆ ಮನೆ ಬಳಿ ಬಂದಿದ್ದ ಮೂವರು ಯುವಕರು ಅಲ್ತಾಪ್ ಖಾನ್ ಮೇಲೆ ಹಲ್ಲೆಗೆ ಯತ್ನಿಸಲು ಪ್ಲಾನ್ ಮಾಡಿದ್ರು. ಸದ್ಯ ಜೆಜೆ ನಗರ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳು ರಾತ್ರಿ ಹತ್ತು ಗಂಟೆ ಸುಮಾರಿಗೆ ಅಲ್ತಾಪ್ ಖಾನ್ ಮನೆ ಬಳಿ ಆಟೋರಿಕ್ಷಾದಲ್ಲಿ ಬಂದು ಹೊಂಚಾಕಿ ಕುಳಿತ್ತಿದ್ರು. ಬಹಳ ಹೊತ್ತಿನ ವರೆಗೆ ಕಾದು ಕುಳಿತರೂ ಅಲ್ತಾಫ್ ಖಾನ್ ಹೊರ ಬರದ ಹಿನ್ನೆಲೆ ಅವನು ಹೊರ ಬರ್ಲಿಲ್ಲ ಬಚಾವ್ ಆದ ಅಂತ ಮಾತನಾಡಿಕೊಂಡಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡ ಸ್ಥಳೀಯರು ಪರಾರಿಯಾಗ್ತಿದ್ದ ಆಟೋ ಬೆನ್ನತ್ತಿ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಚಾಕು, ಬ್ಲೇಡ್​ಗಳನ್ನ ಹಿಡಿದು ಬಂದಿದ್ದ ನಾಲ್ವರು ಯುವಕರಲ್ಲಿ ಮೂವರು ಸಿಕ್ಕಿದ್ದು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಭೀಕರ ಅಗ್ನಿ ದುರಂತ; ಶಾರ್ಟ್​ಸರ್ಕ್ಯೂಟ್​ಗೆ 10ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

ಸುರತ್ಕಲ್​ನ ಕಾಟಿಪಳ್ಯದಲ್ಲಿ ಚಾಕು ಇರಿತ

ಮಂಗಳೂರು: ಮಂಗಳೂರು (Mangalore) ಹೊರವಲಯದ ಸುರತ್ಕಲ್​​ನ (Surathkal) ಕಾಟಿಪಳ್ಳ ನಾಲ್ಕನೇ ಬ್ಲಾಕ್​ನಲ್ಲಿ ಜಲೀಲ್ (45) ಎಂಬುವರಿಗೆ ದುಷ್ಕರ್ಮಿಗಳು ಇಂದು (ಡಿ. 24) ಚಾಕು ಇರಿದಿದ್ದಾರೆ. ಜಲೀಲ್ ಕಾಟಿಪಳ್ಳದ ನೈತಂಗಡಿ ರಸ್ತೆಯಲ್ಲಿರುವ ಲತೀಫಾ ಸ್ಟೋರ್ ಮಾಲಿಕರಾಗಿದ್ದರು. ಸ್ಟೋರ್​ನಲ್ಲಿದ್ದ ಜಲೀಲ್​ಗೆ ದುಷ್ಕರ್ಮಿಗಳ ಗುಂಪು ಚಾಕು ಇರಿದು ಪರಾರಿಯಾಗಿದ್ದರು. ಇದರಿಂದ ತೀರ್ವ ಗಯಗೊಂಡಿದ್ದ ಜಲೀಲ್​ರನ್ನು ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಲೀಲ್​ ಸಾವನ್ನಪ್ಪಿದ್ದಾರೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಹೊಸ ವರ್ಷ ಆಚರಣೆ; ಮಂಗಳೂರಿನ ಮೇಲೆ ಡ್ರಗ್​ ಪೆಡ್ಲರ್​ಗಳ ಕಣ್ಣು

ಹೊಸ ವರ್ಷಾಚರಣೆ ಆಚರಿಸಲು ಮಂಗಳೂರಿಗೆ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸುವ ಸಾಧ್ಯತೆ ಹಿನ್ನೆಲೆ ಡ್ರಗ್ ಪೆಡ್ಲರ್​ಗಳ ಕಣ್ಣು ಮಂಗಳೂರಿನ ಮೇಲೆ ಬಿದ್ದಿದೆ. ಕೇರಳ ಸೇರಿದಂತೆ ವಿವಿಧ ಕಡೆಯಿಂದ ಗಾಂಜಾ, ಡ್ರಗ್ಸ್ ಅಪಾರ ಪ್ರಮಾಣದಲ್ಲಿ ಬರುವ ಸಾಧ್ಯತೆ ಇದ್ದು, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಫುಲ್ ಅಲರ್ಟ್ ಆಗಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:53 am, Sun, 25 December 22