AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂರ್ಯೋದಯಕ್ಕೆ ಅವಕಾಶವೇ ಕೊಡದೆ ಬೆಂಗಳೂರಿನಲ್ಲಿ ಮಳೆ, ಹವಾಮಾನ ಮುನ್ಸೂಚನೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು!?

Bengaluru Rain: ಇಂದಿನ ಹವಾಮಾನ ವರದಿ ಬಗ್ಗೆ ಹೇಳೋದಾದರೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದಷ್ಟು ಕಡೆ ಮಳೆಯಾಗಿತ್ತು. ಆದರೆ ಇಂದು ಬೆಳಗಿವ ಜಾವ ಸೂರ್ಯೋದಯಕ್ಕೆ ಅವಕಾಶವೇ ಕೊಡದೆ ಮಳೆರಾಯ ಆರ್ಭಟಿಸುತ್ತಿದ್ದಾನೆ. ಬೆಳಗಿನ ಜಾವದಿಂದಲೆ ಮಳೆ ಮಳೆ ಮಳೆ.

ಸೂರ್ಯೋದಯಕ್ಕೆ ಅವಕಾಶವೇ ಕೊಡದೆ ಬೆಂಗಳೂರಿನಲ್ಲಿ ಮಳೆ, ಹವಾಮಾನ ಮುನ್ಸೂಚನೆ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು!?
ಮಳೆ (ಸಾಂದರ್ಭಿಕ ಚಿತ್ರ)
TV9 Web
| Updated By: ಸಾಧು ಶ್ರೀನಾಥ್​|

Updated on:Jul 14, 2021 | 10:41 AM

Share

ಬೆಂಗಳೂರು: ಸಾಮಾನ್ಯವಾಗಿ ಮಾಧ್ಯಮಗಳಲ್ಲಿ ಹವಾಮಾನ ಮುನ್ಸೂಚನೆ ವರದಿ ಬರುತ್ತಿದ್ದಂತೆ ಓದುಗರು/ ವೀಕ್ಷಕರು ಅದಕ್ಕೆ ವಿರುದ್ಧವಾಗಿ ಮಳೆ ಆಗುತ್ತದೆ ಅಥವಾ ಇಲ್ಲಾ ಎಂದು ಲೇವಡಿ ಮಾಡಿಕೊಂಡು ಹೇಳುವಷ್ಟು ಈ ಹವಾಮಾನ ಮುನ್ಸೂಚನೆಗಳು ಬರುತ್ತಿರುತ್ತವೆ. ಇದಕ್ಕೆ ಯಾರೂ ಹೊಣೆಯಲ್ಲ; ಇದಕ್ಕೆ ಪ್ರಕೃತಿಯೇ ಉತ್ತರ ಕೊಡಬೇಕು. ಏಕೆಂದ್ರೆ ಬಹುತೇಕ ಕರಾರುವಕ್ಕಾದ ಡೇಟಾ ಮುಂದುಟ್ಟುಕೊಂಡೇ ಹವಾಮಾನ ಮುನ್ಸೂಚನೆಗಳನ್ನು ನೀಡಲಾಗುತ್ತದೆ.

ಆದರೆ ವಿಷಯ ಅದಲ್ಲ; ಈ ಬಾರಿ ಜನ ಹಾಗಿರಲಿ ಸಾಕ್ಷಾತ್​ ದೇಶದ ಪ್ರಧಾನ ಮಂತ್ರಿಯೇ ಈ ಹವಾಮಾನ ಮುನ್ಸೂಚನೆ ವರದಿ ಬಗ್ಗೆ ಹಾಸ್ಯ ಮಾಡಿದ್ದಾರೆ. ಅದೂ ಭಯಾನಕ ಕೊರೊನಾ ವರದಿಗಳ ಜೊತೆ ಹೋಲಿಸುತ್ತಾ! ಕೊರೊನಾ ಅಲೆಗಳು ಎದ್ದಿವೆ, ಯಾವುದೇ ಕ್ಷಣ ಅಪ್ಪಳಿಸಲಿವೆ ಎಂದು ಆರೋಗ್ಯ ಸಂಬಂಧಿ ವರದಿಗಳು ಆಗಾಗ ಬಿತ್ತರಗೊಳ್ಳುತ್ತಲೇ ಇರುತ್ತವೆ. ಜನಾನೂ ಅದಕ್ಕೆ ಅಡ್ಜೆಸ್ಟ್​ ಆಗಿಬಿಟ್ಟು ಅಯ್ಯೋ ಬರೋದಿಲ್ಲ ಬಿಡಿ; ನಮಗೂ ಗೊತ್ತಿದೆ ಎಂದು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನೇ ಮುಂದಿಟ್ಟಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು (Narendra Modi) ನಿನ್ನೆ ಕೊರೊನಾ ಮುನ್ಸೂಚನೆಯು ಹವಾಮಾನ ಮುನ್ಸೂಚನೆಯಂತೆ ಅಲ್ಲ; ಜಾಗ್ರತೆ ವಹಿಸಿ ಎಂದು ನೇರವಾಗಿ ಹೇಳಿದ್ದಾರೆ.

ಇದೆಲ್ಲ ಯಾಕೆ ಹೇಳಬೇಕಾಯ್ತು ಅಂದ್ರೆ ತಾಜಾ ಆಗಿ ಈ ಬಾರಿ ಮುಂಗಾರು ಅಂದಾಜಿಗಿಂತ (Monsoon 2021) ತುಸು ಏರುಪೇರಾಗಿ ಬರುತ್ತಿದೆ. ನಿನ್ನೆಯಂತೂ ರಾಷ್ಟ್ರ ರಾಜಧಾನಿಯಲ್ಲಿ ಮಳೆ ಬರುತ್ತಿದ್ದಂತೆ ಜನ ಹವಾಮಾನ ವರದಿಗಳ ಬಗ್ಗೆ ಹೀಗೆಯೇ ಲೇವಡಿ ಮಾಡುತ್ತಾ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯ ಮಾಡಿದ್ದಾರೆ.

ಇನ್ನು ಇಂದಿನ ಹವಾಮಾನ ವರದಿ ಬಗ್ಗೆ ಹೇಳೋದಾದರೆ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದಷ್ಟು ಕಡೆ ಮಳೆಯಾಗಿತ್ತು. ಆದರೆ ಇಂದು ಬೆಳಗಿವ ಜಾವ ಸೂರ್ಯೋದಯಕ್ಕೆ ಅವಕಾಶವೇ ಕೊಡದೆ ಮಳೆರಾಯ ಆರ್ಭಟಿಸುತ್ತಿದ್ದಾನೆ. ಬೆಳಗಿನ ಜಾವದಿಂದಲೆ ಮಳೆ ಮಳೆ ಮಳೆ.

ಈ ಮಳೆ ಈಗ 10 ಗಂಟೆಯ ವೇಳೆಯಲ್ಲಿ ತುಸು ನಿಂತಿದೆಯಾದರೂ ಯಾವುದೇ ಕ್ಷಣ ಭೋರ್ಗರೆಯುವ ಮುನ್ಸೂಚನೆಗಳು ಹೆಚ್ಚಾಗಿವೆ. ಇಂದು ಸೂರ್ಯನ ದರುಶನವಂತೂ ದುರ್ಲಭವೇ ಸರಿ. ಎಂದಿನಂತೆ ಹವಾಮಾನ ಇಲಾಖೆಯು ನಾಳೆಯೂ ಹೀಗೇ ಮಳೆ ಮುಂದುವರಿಯುತ್ತದೆ ಎಂದು ತಿಳಿಸಿದೆ. ಆಂಧ್ರ ಪ್ರದೇಶ, ಒಡಿಶಾ ಮತ್ತು ಸೌರಾಷ್ಟ್ರ ಭಾಗಗಳಲ್ಲಿ ಹವಾಮಾನ ವೈಪರೀತ್ಯದಿಂದ ಮಳೆಯಾಗುತ್ತಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಮಧ್ಯೆ ಚಳಿಗಾಲದಂತೆ ಕೊರೆಯೋ ಚಳಿ ಬೆಂಗಳೂರಿನಲ್ಲಿ ದಾಂಗುಡಿಯಿಟ್ಟಿದೆ.

ವಿಳಂಬವಾಗಿ ದಿಲ್ಲಿಯಲ್ಲಿ ಕಾಲಿಟ್ಟ ಮುಂಗಾರು 2021 ಬಗ್ಗೆ ರಾಜಧಾನಿ ಮಂದಿಯಿಂದ ಟ್ವೀಟ್​​ಗಳ ಮಳೆ…!

(today and tomorrow july 15 continuous rains in Bengaluru)

Published On - 10:28 am, Wed, 14 July 21

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!