ವಿಷಕಾರಿ ಓಝೋನ್‌ನಿಂದ ಬೆಂಗಳೂರು ಗಾಳಿ ಅಸುರಕ್ಷಿತ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಅಧ್ಯಯನ

ಬೆಂಗಳೂರಿನಲ್ಲಿ ವಿಷಕಾರಿ ಓಝೋನ್ ಮಟ್ಟ ಹೆಚ್ಚುತ್ತಿದ್ದು, ನಾಗರಿಕರು ದಿನಕ್ಕೆ 16 ಗಂಟೆ ಕಲುಷಿತ ಗಾಳಿ ಉಸಿರಾಡುತ್ತಿದ್ದಾರೆ ಎಂದು ಸಿಎಸ್ಇ ಅಧ್ಯಯನ ತಿಳಿಸಿದೆ. ಶ್ವಾಸಕೋಶ ಹಾಗೂ ಹೃದಯದ ಆರೋಗ್ಯಕ್ಕೆ ಇದು ತೀವ್ರ ಕಂಟಕವಾಗಿದೆ. 2026ರ ಮಾರ್ಚ್ 1ರಿಂದ ಮೇ 10ರವರೆಗೆ ದೇಶದ 25 ನಗರಗಳಲ್ಲಿ ನಡೆಸಿದ ಅಧ್ಯಯನದಲ್ಲಿ ಈ ಆಘಾತಕಾರಿ ವಿಚಾರ ಗೊತ್ತಾಗಿದೆ.

ವಿಷಕಾರಿ ಓಝೋನ್‌ನಿಂದ ಬೆಂಗಳೂರು ಗಾಳಿ ಅಸುರಕ್ಷಿತ: ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ಅಧ್ಯಯನ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Jul 02, 2026 | 6:35 AM

ಮುಖ್ಯಾಂಶಗಳು

  • ಸಿಎಸ್​​ಸಿ ನಡೆಸಿದ ಅಧ್ಯಯನದಲ್ಲಿ ಶಾಕಿಂಗ್​​ ಮಾಹಿತಿ ಬಹಿರಂಗ
  • NAAQS ಮಿತಿ ಮೀರಿರುವ ಬೆಂಗಳೂರಿನ ಗಾಳಿಯ ಗುಣಮಟ್ಟ
  • ನಗರದ ನಿವಾಸಿಗಳ ಆರೋಗ್ಯದ ಮೇಲೆ ಪರಿಣಾಮದ ಎಚ್ಚರಿಕೆ

ಬೆಂಗಳೂರು, ಜುಲೈ 02: ಪ್ರತಿದಿನ ಸರಾಸರಿ 16 ಗಂಟೆಗಳ ಕಾಲ ಬೆಂಗಳೂರಿನಲ್ಲಿ (Bengaluru)  ಜನರು ವಿಷಕಾರಿ ಓಝೋನ್‌ಗೆ ಒಡ್ಡಿಕೊಳ್ಳುತ್ತಿರುವುದು ಕಂಡುಬಂದಿದ್ದು, ದಿನದ ಸುಮಾರು ಮೂರನೇ ಎರಡರಷ್ಟು ಸಮಯ ನಾಗರಿಕರು ಕಲುಷಿತ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ (CSE) ನಡೆಸಿದ ಅಧ್ಯಯನ ತಿಳಿಸಿದೆ. ಕಳೆದ 71 ದಿನಗಳ ಅವಧಿಯಲ್ಲಿ 55 ದಿನಗಳು ನೆಲಮಟ್ಟದ (Ground-level) ಓಝೋನ್ ಪ್ರಮಾಣವು ರಾಷ್ಟ್ರೀಯ ವಾಯು ಗುಣಮಟ್ಟದ ಮಾನದಂಡ (NAAQS) ಮಿತಿಯನ್ನು ಮೀರಿರೋದು ಕೂಡ ಬಗಿರಂಗಗೊಂಡಿದೆ.

ಆತಂಕಕಾರಿ ಬೆಳವಣಿಗೆ

2026ರ ಮಾರ್ಚ್ 1ರಿಂದ ಮೇ 10ರವರೆಗೆ ದೇಶದ 25 ನಗರಗಳಲ್ಲಿ ನಡೆಸಿದ ಅಧ್ಯಯನದಲ್ಲಿ, ದೆಹಲಿ (62 ದಿನ) ಮತ್ತು ಭೋಪಾಲ್ (60 ದಿನ) ನಂತರ ಬೆಂಗಳೂರು (55 ದಿನ) ಅತಿ ಹೆಚ್ಚು ಅಪಾಯಕಾರಿ ಓಝೋನ್ ಮಟ್ಟ ದಾಖಲಿಸಿದ ನಗರವಾಗಿದೆ. ಅಧ್ಯಯನದ ಪ್ರಕಾರ, ನೆಲಮಟ್ಟದ ಓಝೋನ್ ಪ್ರಮಾಣವು ಗರಿಷ್ಠ ಎಂಟು ಗಂಟೆಗಳ ಅವಧಿಗೆ 100 ಮೈಕ್ರೋಗ್ರಾಂ ಪ್ರತಿ ಘನ ಮೀಟರ್ (μg/m³) ಎಂಬ ರಾಷ್ಟ್ರೀಯ ಮಿತಿಯನ್ನು ಕೇವಲ 16 ದಿನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲಿ ಮೀರಿದೆ. ಇದುವರೆಗೆ ಹಗಲಿನ ಸಮಸ್ಯೆ ಎಂದು ಪರಿಗಣಿಸಲಾಗುತ್ತಿದ್ದ ವಿಷಕಾರಿ ಓಝೋನ್ ಈಗ ರಾತ್ರಿ ವೇಳೆಯಲ್ಲಿಯೂ ಮುಂದುವರಿಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ 14 ರಾತ್ರಿಗಳಲ್ಲಿ ಸೂರ್ಯಾಸ್ತದ ನಂತರವೂ ಓಝೋನ್ ಅಪಾಯಕಾರಿ ಮಟ್ಟದಲ್ಲೇ ಇತ್ತು ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ರಾಜ್ಯಾದ್ಯಂತ ಮುಂದುವರಿದ ಮೋಡ ಕವಿದ ವಾತಾವರಣ; ಉಡುಪಿ, ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್

ಆರೋಗ್ಯದ ಮೇಲೆ ಗಂಭೀರ ಪರಿಣಾಮ

ಓಝೋನ್ ಅತ್ಯಂತ ಪ್ರಬಲ ಆಕ್ಸಿಡೆಂಟ್ ಆಗಿದ್ದು, ಶ್ವಾಸಕೋಶದ ಕೋಶಗಳನ್ನು ಹಾನಿಗೊಳಿಸಿ ಉಸಿರಾಟದ ಮಾರ್ಗಗಳಲ್ಲಿ ಉರಿಯೂತ ಉಂಟುಮಾಡುತ್ತದೆ. ಅಲ್ಪಾವಧಿಯಲ್ಲೇ ತೀವ್ರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದರೆ, ದೀರ್ಘಾವಧಿಯಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಹೃದಯಾಘಾತ, ಪಾರ್ಶ್ವವಾಯು ಹಾಗೂ ಸಿಒಪಿಡಿ (COPD) ಕಾಯಿಲೆಯ ತೀವ್ರತೆ ಹೆಚ್ಚುವ ಅಪಾಯವಿದೆ ಎಂದು ವರದಿ ತಿಳಿಸಿರೋದಾಗಿ ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:30 am, Thu, 2 July 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us