ಬೆಂಗಳೂರು: ಮಂಗಳಮುಖಿಯರ ಬಗ್ಗೆ ಸಮಾಜ ಸದಾ ಒಂದು ಬಗೆಯ ಕನಿಕರ ಇಟ್ಟುಕೊಂಡೇ ನೋಡುತ್ತಿರುತ್ತದೆ. ಅವರ ದೇಖರೇಖಿ ಬಗ್ಗೆ ಸಮಾಜ, ಸರ್ಕಾರ ಆಗಾಗ್ಗೆ ಕಾಳಜಿ ವಹಿಸುತ್ತಿರುತ್ತದೆ. ಇದಕ್ಕೆ ಮಂಗಳಮುಖಿಯರ (transgender) ಕಡೆಯಿಂದಲೂ ಸೂಕ್ತ ಸ್ಪಂದನೆ ಸಿಗುತ್ತದೆ. ಉತ್ತಮ ಸಮಾಜಕ್ಕಾಗಿ ಕೈಲಾದ ಮಟ್ಟಿಗೆ ಒಳ್ಳೆಯದನ್ನು ಮಾಡಬೇಕು ಎಂದು ಮಂಗಳಮುಖಿಯರೂ ಹಂಬಲಿಸುತ್ತಾರೆ. ಆದರೆ… ಇವರಿಗೆ ಸಂಬಂಧಿಸಿದ ಕೆಲ ಪ್ರಕರಣಗಳು ನಡೆದಾಗ ಮನಸ್ಸು ಪಿಚ್ಚೆನ್ನಿಸುತ್ತದೆ. ಕೆಲ ಮಂಗಳಮುಖಿಯರು ಮಾಡುವ ಕೆಲಸಗಳಿಂದ ಆ ಸಮುದಾಯಕ್ಕೆ ಕೆಟ್ಟ ಹೆಸರು ಬರುವುದೂ ಉಂಟು. ಮಂಗಳಮುಖಿಯರ ಈ ನಡುವಳಿಕೆಗಳಿಂದ ಸಮಾಜ ಬೇಸರಿಸಿಕೊಳ್ಳುವುದೂ ಉಂಟು. ಅಲ್ಲಲ್ಲಿ ಕಿರಿಕ್, ವಂಚನೆ, ಮರಾಮೋಸ ನಡೆಯುವುದೂ ಉಂಟು. ಮಂಗಳಮುಖಿಯರಿಂದ ಅವರಿವರ ಹೆಸರಿನಲ್ಲಿ ಹಣ ದೋಚುವ ಪ್ರಯತ್ನಗಳೂ ನಡೆಯುತ್ತವೆ. ಇದರಿಂದ ಉಳಿದವರಿಗೆ ಕಳಂಕ ತಟ್ಟುತ್ತದೆ. ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ತಾಜಾ ಆಗಿ ಇದಕ್ಕೆ ಪುಷ್ಟಿ ನೀಡುವಂತಹ ಘಟನೆ ನಡೆದಿದೆ.
ಗೃಹಪ್ರವೇಶ ಸಂಭ್ರಮಕ್ಕೆ ( Gruhapravesa) ಮಂಗಳಮುಖಿಯರು ಕಾಟ ಕೊಟ್ಟಿರುವ ಘಟನೆ ಬೆಂಗಳೂರಿನ ಕಲ್ಕೆರೆ ಚೆನ್ನಸಂದ್ರದಲ್ಲಿ ನಡೆದಿದೆ (kalkere bangalore). 25 ಸಾವಿರ ರೂಪಾಯಿ ನೀಡುವಂತೆ ಕಿರಿಕ್ ತಗೆದ ಮಂಗಳಮುಖಿಯರು ಮನೆಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಅಷ್ಟು ಕೊಡಲು ಸಾಧ್ಯವಿಲ್ಲ ಎಂದು ಮನೆ ಮಾಲೀಕರು ಖಡಕ್ಕಾಗಿ ಹೇಳಿದ್ದಾರೆ. ಅಲ್ಲಿಗೂ, 2500 ಸಾವಿರ ರೂಪಾಯಿಯಷ್ಟೆ ಕೊಡ್ತಿವಿ ತೆಗೆದುಕೊಂಡು, ಊಟ ಮಾಡಿ ಹೋಗಿ ಎಂದು ಮನೆ ಮಾಲೀಕರು ಹೇಳಿದ್ದಾರೆ.
ಆಗ ಆ ಮಂಗಳಮುಖಿಯರು 25 ಸಾವಿರ ರೂಪಾಯಿ ಕೊಡದಿದ್ದರೆ ಇನ್ನಷ್ಟು ಜನ ಬಂದು ಗಲಾಟೆ ಮಾಡುವುದಾಗಿ ಧಮ್ಕಿ ಹಾಕಿದ್ದಾರೆ. ಈ ವೇಳೆ ಮನೆ ಮಾಲೀಕರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದ್ದಾರೆ. ಸಾಲದು ಅಂತಾ ಅಶ್ಲೀಲ ಪದಗಳಿಂದ ಬೈದು ಮನೆಯವರ ಮೇಲೆ ಹಲ್ಲೆ ಮಾಡಿದ್ದಾರೆ. ಚೇರ್ ಗಳನ್ನ ಒಡೆದು ಹಾಕಿ ಗಲಾಟೆ ಮಾಡಿದ್ದಾರೆ. ಇಂದು ಬೆಳಗ್ಗೆ ಗೃಹಪ್ರವೇಶ ಪೂಜೆಯ ವೇಳೆ ಇಷ್ಟೆಲ್ಲಾ ರಾದ್ಧಾಂತ ಮಾಡಿದ್ದಾರೆ ಮಂಗಳಮುಖಿಯರು. ಆದರೆ ಇದರಿಂದ ಎದೆಗುಂದದ ಮನೆ ಮಂದಿ ಎಲ್ಲಾ ಒಟ್ಟುಗೂಡಿದಾಗ, ಪರಿಸ್ಥಿತಿ ಅರಿತ ಮಂಗಳಮುಖಿಯರು ಎರಡು ಆಟೋಗಳಲ್ಲಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಮನೆ ಮಾಲೀಕ ಲೋಕೇಶ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು, ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.
ಮಂಗಳಮುಖಿಯರಿಗೆ ಹೇಗೆ ಗೊತ್ತಾಗುತ್ತೆ?
ಬೆಂಗಳೂರಿನ ವಿವಿಧೆಡೆ ಮಂಗಳಮುಖಿಯರು ಗೃಹಪ್ರವೇಶ ಅಥವಾ ಇತರ ಶುಭ ಸಮಾರಂಭಗಳಲ್ಲಿ ತೊಂದರೆ ಕೊಡುವುದು ಕಂಡುಬಂದಿದೆ. ಸರಕು ಸಾಗಿಸುವವರು ಅಥವಾ ಶಾಮಿಯಾನ ಅಂಗಡಿಗಳವರು ಇವರಿಗೆ ಆಯಾ ಬಡಾವಣೆಗಳಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮಗಳ ಮಾಹಿತಿ ಕೊಡುತ್ತಿರಬಹುದು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.
ಟ್ರಾಫಿಕ್ ದಂಡ: ಮಾಧ್ಯಮದವರು ವಿಡಿಯೋ ಮಾಡಿದ್ದಕ್ಕೆ ನೆಲಮಂಗಲ ಇನ್ಸ್ಪೆಕ್ಟರ್ ಕುಮಾರ್ ಕೆಂಡಾಮಂಡಲ
ನೆಲಮಂಗಲ: ರಸ್ತೆ ನಿಯಮ ಪಾಲಿಸದ ವಾಹನ ಸವಾರರಿಗೆ ರಸ್ತೆ ಬದಿಗಳಲ್ಲಿ ನಿಂತು ಪೊಲೀಸರು ದಂಡ ಹಾಕುವ ವೇಳೆ ಮಾಧ್ಯಮದವರು ಅದನ್ನು ವಿಡಿಯೋ ಮಾಡಬಾರದೆಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಇನ್ಸ್ಪೆಕ್ಟರ್ ಕುಮಾರ್ ವಾಗ್ವಾದ ನಡೆಸಿದ್ದಾರೆ.
ಠಾಣೆ ಮುಂಭಾಗದಲ್ಲಿ ನಿಂತ ಪೊಲೀಸರು ವಾಹನ ಸವಾರರನ್ನ ಅಡ್ಡಗಟ್ಟಿ, ಲಾಠಿ ಹಿಡಿದು ದೊಡ್ಡ ಮಟ್ಟದಲ್ಲಿ ದಂಡ ವಸೂಲಿ ಮಾಡುತ್ತಿದ್ದರು. ಅದನ್ನು ಕಂಡ ಕೆಲ ಸವಾರರು ದೂರದಿಂದಲೇ ಪರಾರಿಯಾಗುತ್ತಿದ್ದ ದೃಶ್ಯಗಳೂ ಸೆರೆಯಾದವು. ಕೆಲವರಂತೂ ಪೊಲೀಸರನ್ನ ಕಂಡು ದಿಕ್ಕಾಪಾಲಾಗಿ ವಾಹನ ಚಲಾಯಿಸಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಸೆರೆ ಹಿಡಿಯುತ್ತಿದ್ದ ಮಾಧ್ಯಮದವರನ್ನು ಕಂಡು ನೆಲಮಂಗಲ ಟೌನ್ ಇನ್ಸ್ಪೆಕ್ಟರ್ ಕುಮಾರ್ ಏಕಾಏಕಿ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.
ಠಾಣೆಯಿಂದ ಹೇಳಿದ್ರೆ ವಿಡಿಯೋ ಮಾಡಿ, ಇಲ್ಲದಿದ್ದರೆ ನೀವು ವಿಡಿಯೋ ಮಾಡಬಾರದೆಂದು ತಾಕೀತು ಮಾಡಿದ್ದಾರೆ. ಮಾಮೂಲು ಕೊಡುವ ಕೆಲ ವಾಹನಗಳನ್ನ ಪೊಲೀಸರು ಬಿಟ್ಟು ಕಳಿಸುತ್ತಿದ್ದಾರೆ ಅನ್ನೋ ಅರೋಪಗಳು ಕೇಳಿ ಬಂದಾಗ ಸುದ್ದಿ ಹುಡುಕಿ, ಮಾಧ್ಯಮದವರು ಸ್ಥಳಕ್ಕೆ ತೆರಳಿದ್ದರು. ಮಾಧ್ಯಮದ ಕ್ಯಾಮರಾ ನೋಡುತ್ತಲೇ ಇನ್ಸ್ಪೆಕ್ಟರ್ ಕುಮಾರ್ ಸಾಹೇಬರು ಕೆಂಡಾಮಂಡಲರಾದರು.
ಇದನ್ನೂ ಓದಿ:
Published On - 6:01 pm, Thu, 23 June 22