ಬೆಂಗಳೂರು: ರಾಜ್ಯ ಸರ್ಕಾರದ ಇಲಾಖೆ, ಮಂಡಳಿ & ಸ್ವಾಯತ್ತ ಸಂಸ್ಥೆಗಳು ನಿಗಮಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಹೆರಿಗೆ ರಜೆ(Maternity Leave) ನೀಡಲು ಸರ್ಕಾರ ಅನುಮೋದನೆ ನೀಡಿದೆ. ಗರಿಷ್ಠ 180 ದಿನಗಳವರೆಗೆ ರಜೆ ಪಡೆಯಲು ಅನುಮತಿ ನೀಡಿದೆ. ಏಪ್ರಿಲ್ 1ರಿಂದಲೇ ರಜೆ ಸೌಲಭ್ಯ ಅನ್ವಯವಾಗಲಿದೆ. 2ಕ್ಕಿಂತ ಹೆಚ್ಚು ಮಕ್ಕಳಿರುವ ಮಹಿಳಾ ನೌಕರರಿಗೆ ಈ ನಿಯಮ ಅನ್ವಯಸುವುದಿಲ್ಲ.