ಬೆಂಗಳೂರು ರೈಲ್ವೆ ವಿಭಾಗದಲ್ಲಿ ಟಿಕೆಟ್ ಇಲ್ಲದೆ ಓಡಾಟ: 8 ತಿಂಗಳಲ್ಲಿ 45.89 ಕೋಟಿ ರೂ ದಂಡ ವಸೂಲಿ

ರೈಲಿನ ಟಿಕೆಟ್ ದರ ತುಂಬಾ ಕಡಿಮೆ ಇದ್ದರು ಕೂಡ ಟಿಕೆಟ್ ತೆಗೆದುಕೊಳ್ಳದೇ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ರೈಲ್ವೆ ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರು ಇದಕ್ಕೆ ಬ್ರೇಕ್ ಹಾಕಲು ಕಷ್ಟವಾಗಿದೆ ಅಂತೆ. ಎರಡು ಲಕ್ಷ ಕೇಸ್ ದಾಖಲಿಸುವ ಮೂಲಕ 25 ಕೋಟಿ ರೂ. ವಸೂಲಿ ಮಾಡಲಾಗಿದೆ.

ಬೆಂಗಳೂರು ರೈಲ್ವೆ ವಿಭಾಗದಲ್ಲಿ ಟಿಕೆಟ್ ಇಲ್ಲದೆ ಓಡಾಟ: 8 ತಿಂಗಳಲ್ಲಿ 45.89 ಕೋಟಿ ರೂ ದಂಡ ವಸೂಲಿ
ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿರುವ ಟಿಸಿ
Edited By:

Updated on: Dec 17, 2025 | 9:54 PM

ಬೆಂಗಳೂರು, ಡಿಸೆಂಬರ್​ 17: ಪ್ರತಿನಿತ್ಯ ಲಕ್ಷಾಂತರ ಪ್ರಯಾಣಿಕರು (Passengers) ರೈಲ್ವೆ ಪ್ರಯಾಣವನ್ನೇ ಅವಲಂಬಿಸಿ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುತ್ತಾರೆ. ಟಿಕೆಟ್ (ticket) ತೆಗೆದುಕೊಳ್ಳದೆ ಪ್ರಯಾಣ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರು ಡಿವಿಜನ್​​​​ನಲ್ಲಿ ಜನಸಂದಣಿ ಹೆಚ್ಚಾಗಿರುವ ಸಂದರ್ಭದಲ್ಲಿ ಕಿಲಾಡಿಗಳು ಟಿಕೆಟ್ ಪಡೆಯುವುದಿಲ್ಲವಂತೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಕಿಲಾಡಿಗಳನ್ನು ಲಾಕ್ ಮಾಡಲಾಗಿದ್ದು, ಎರಡು ಲಕ್ಷ ಕೇಸ್ ದಾಖಲಿಸುವ ಮೂಲಕ 25 ಕೋಟಿ ರೂ. ವಸೂಲಿ ಮಾಡಲಾಗಿದೆ.

ದಿನದಿಂದ ದಿನಕ್ಕೆ ರೈಲಿನಲ್ಲಿ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆಯಂತೆ. ಅದರಲ್ಲೂ ಬೆಂಗಳೂರು ಡಿವಿಜನ್​ನಲ್ಲೇ ಅತೀ ಹೆಚ್ಚಿನ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ರೈಲ್ವೆ ಅಧಿಕಾರಿಗಳು ಎಷ್ಟೇ ಪ್ರಯತ್ನಪಟ್ಟರು ಇದಕ್ಕೆ ಬ್ರೇಕ್ ಹಾಕಲು ಕಷ್ಟವಾಗಿದೆ ಅಂತೆ.

ಇದನ್ನೂ ಓದಿ: ಈ ರೈಲಿನಲ್ಲಿ ಹೋದ್ರೆ ಧರ್ಮಸ್ಥಳ, ಕುಕ್ಕೆ ದೇಗುಲ ಮಾತ್ರವಲ್ಲ ಪಶ್ಚಿಮಘಟ್ಟದ ಸೌಂದರ್ಯ ಸವಿಯಬಹುದು!

2024ರ ನವೆಂಬರ್ ತಿಂಗಳಿನಲ್ಲಿ ನೈರುತ್ಯ ರೈಲ್ವೆ 54 ಸಾವಿರ ಕೇಸ್ ದಾಖಲಿಸಿ 3.35 ಕೋಟಿ ರೂ. ದಂಡ ವಸೂಲಿ ಮಾಡಿದ್ದರೆ, 2025ರ ನವೆಂಬರ್ ತಿಂಗಳಿನಲ್ಲಿ ಒಟ್ಟು 67 ಸಾವಿರ ಟಿಕೆಟ್ ಚೆಕ್ಕಿಂಗ್ ಮಾಡಿ 5.36 ಕೋಟಿ ರೂ. ದಂಡ ವಸೂಲಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ನವೆಂಬರ್​ನಲ್ಲಿ 13 ಸಾವಿರ ಕೇಸ್​ಗಳು ಹೆಚ್ಚಳವಾಗಿದ್ದು, 2.01 ಕೋಟಿ ರೂ. ಹೆಚ್ಚುವರಿ ದಂಡ ವಸೂಲಿ ಮಾಡಲಾಗಿದೆ.

ಇತ್ತ 2024 ಏಪ್ರಿಲ್ 1ರಿಂದ ನವೆಂಬರ್ 30ರವರೆಗೆ ನೈರುತ್ಯ ರೈಲ್ವೆಯಿಂದ 4.8 ಲಕ್ಷ ಕೇಸ್ ದಾಖಲಿಸಿ 32.87 ಕೋಟಿ ರೂ. ದಂಡ ವಸೂಲಿ ಮಾಡಿದರೆ2025 ಏಪ್ರಿಲ್- 1 ರಿಂದ ನವೆಂಬರ್- 30 ರ ವರೆಗೆ 5.57 ಲಕ್ಷ ಟಿಕೆಟ್ ಚೆಕ್ಕಿಂಗ್ ಮಾಡಿ 45.89 ಕೋಟಿ ರೂ ದಂಡ ವಸೂಲಿ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 77 ಸಾವಿರ ಹೆಚ್ಚುವರಿ ಕೇಸ್ ಮತ್ತು 13 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ.

ಇನ್ನು 2024ರ ನವೆಂಬರ್ ತಿಂಗಳಿನಲ್ಲಿ ಬೆಂಗಳೂರು ರೈಲ್ವೆ ವಿಭಾಗದಲ್ಲಿ 26248 ಕೇಸ್ ದಾಖಲಿಸಿ, 1.62 ಕೋಟಿ ರೂ. ದಂಡ ವಸೂಲಿ ಮಾಡಿದರೆ, 2025 ನವೆಂಬರ್ ತಿಂಗಳಿನಲ್ಲಿ ಬೆಂಗಳೂರು ರೈಲ್ವೆ ವಿಭಾಗದಲ್ಲಿ 34156 ಲಕ್ಷ ಕೇಸ್ ದಾಖಲಿಸಿ 3.01 ಕೋಟಿ ರೂ ದಂಡ ವಸೂಲಿ ಮಾಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ 7908 ಹೆಚ್ಚುವರಿ ಕೇಸ್​ಗಳು ದಾಖಲಿಸುವ ಮೂಲಕ 1.39 ಕೋಟಿ ರೂ. ಹೆಚ್ಚುವರಿ ದಂಡ ವಸೂಲಿ ಮಾಡಲಾಗಿದೆ.

ಇದನ್ನೂ ಓದಿ: ಧರ್ಮಸ್ಥಳ, ಕುಕ್ಕೆ- ಶ್ರವಣಬೆಳಗೊಳಕ್ಕೆ ಹೋಗುವವರಿಗೆ ಸಿಹಿಸುದ್ದಿ: ಮತ್ತೆ ಶುರುವಾಯ್ತು ಗೊಮ್ಮಟೇಶ್ವರ ಎಕ್ಸ್‌ಪ್ರೆಸ್ ರೈಲು

ಇತ್ತ 2024 ಏಪ್ರಿಲ್​ನಿಂದ ನವೆಂಬರ್​ವರೆಗೆ ಬೆಂಗಳೂರು ಡಿವಿಜನ್ ವ್ಯಾಪ್ತಿಯಲ್ಲಿ 2,41,825 ಲಕ್ಷ ಕೇಸ್ ದಾಖಲಿಸಿ 17,27 ಕೋಟಿ ರೂ. ದಂಡ ವಸೂಲಿ ಮಾಡಿದರೆ, ಇತ್ತ ಏಪ್ರಿಲ್​ನಿಂದ ನವೆಂಬರ್​ನಲ್ಲಿ ಬೆಂಗಳೂರು ಡಿವಿಜನ್ ವ್ಯಾಪ್ತಿಯಲ್ಲಿ 2,85,905 ಲಕ್ಷ ಕೇಸ್ ದಾಖಲಿಸಿ 25.53 ಕೋಟಿ ರೂ. ದಂಡ ವಸೂಲಿ ಮಾಡಿದ್ದಾರೆ. ಈ ವರ್ಷ ಹೆಚ್ಚುವರಿಯಾಗಿ 44080 ಕೇಸ್ ದಾಖಲಿಸಿ, 8.26 ಕೋಟಿ ರೂ. ಹೆಚ್ಚುವರಿ ದಂಡ ವಸೂಲಿ ಮಾಡಿದ್ದಾರೆ.

ಟಿಕೆಟ್ ಇಲ್ಲದೆ ಪ್ರಯಾಣಿಸುವುದು ಸರಿಯಲ್ಲ: ಪ್ರಯಾಣಿಕ 

ಈ ಬಗ್ಗೆ ಮಾತನಾಡಿದ ರೈಲ್ವೆ ಪ್ರಯಾಣಿಕರು, ಟಿಕೆಟ್ ಇಲ್ಲದೆ ಪ್ರಯಾಣ ಮಾಡುವುದು ಸರಿಯಲ್ಲ. ರೈಲಿನಲ್ಲಿ ಟಿಕೆಟ್ ದರ ತುಂಬಾ ಕಡಿಮೆ ಇದೆ ಆದರೂ ಟಿಕೆಟ್ ತೆಗೆದುಕೊಳ್ಳಲಿಲ್ಲ ಅಂದರೆ ಅದು ಸರಿಯಲ್ಲ ಎಂದು ಆದರ್ಶ ಎಂಬುವವರು ಹೇಳಿದ್ದಾರೆ.

ಒಟ್ನಲ್ಲಿ ಬಸ್ಸು, ಕಾರಿಗೆ ಹೋಲಿಕೆ ಮಾಡಿಕೊಂಡರೇ ರೈಲಿನಲ್ಲಿ ಟಿಕೆಟ್ ದರ ತುಂಬಾ ಕಡಿಮೆಯೇ ಇದೆ ಆದ್ರು,ಈ ಕಿಲಾಡಿಗಳು ಟಿಕೆಟ್ ಖರೀದಿಸದೆ ಪ್ರಯಾಣ ಮಾಡಿ ಲಾಕ್ ಆಗ್ತಿರೋದು ದುರಂತವೇ ಸರಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.