ಬೆಂಗಳೂರು,ಅ.05: ಇಂದು ಬೆಳಿಗ್ಗೆ ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ (Saalumarada Thimakka) ಮೃತರಾಗಿದ್ದಾರೆ ಎಂಬ ವದಂತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಡಲಾಗಿತ್ತು. ಇದಕ್ಕೆ ಕೂಡಲೇ ಅವರ ದತ್ತು ಮಗ ಉಮೇಶ್ ಪ್ರತಿಕ್ರಿಯಿಸಿ, ಇದು ಸುಳ್ಳು ಎಂದು ಸೋಶಿಯಲ್ ಮೀಡಿಯಾ ಮೂಲಕವೇ ಮಾಹಿತಿ ನೀಡಿದ್ದರು. ಇದೀಗ ಸಾಲು ಮರದ ತಿಮ್ಮಕ್ಕ ಅವರಿಗೆ ಚಿಕಿತ್ಸೆ ನೀಡುತ್ತಿರುವ ಅಪೋಲೋ ಆಸ್ಪತ್ರೆ ಕಾರ್ಡಿಯೊಲಾಜಿಸ್ಟ್ ಡಾ. ಅಭಿಜಿತ್ ಕುಲಕರ್ಣಿ ಮಾತನಾಡಿ ‘ಎರಡು ದಿನದ ಹಿಂದೆ ಸಾಲು ಮರದ ತಿಮ್ಮಕ್ಕ ಅವರು ಅಸ್ತಾಮಾ ಸಮಸ್ಯೆಯಿಂದ ಬಂದು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು ಎಂದಿದ್ದಾರೆ.
ನಿನ್ನೆ(ಅ.05) ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡು ಸುಸ್ತಾಗಿದ್ದರು. ಕೂಡಲೇ ಟೆಸ್ಟ್ ಮಾಡಿದಾಗ ಇಸಿಜಿಯಲ್ಲಿ ಸ್ವಲ್ಲ ಚೇಂಜಸ್ ಆಗಿದೆ. ಇದೀಗ ಅವರ ವಯಸ್ಸಿನ ಆಧಾರದ ಮೇಲೆ ಔಷಧಿ ನೀಡುತ್ತಿದ್ದೇವೆ. ಅಂಜಿಯೋಗ್ರಾಂ ಮಾಡಿದಾಗ ರಕ್ತನಾಳದಲ್ಲಿ 95 ಬ್ಲಾಕೆಜ್ ಕಾಣಿಸಿಕೊಂಡಿದೆ. ಅವರಿಗೆ ಸ್ಟಂಟ್ ಅಳವಡಿಕೆ ಮಾಡಿದ್ದೇವೆ. ಐಸಿಯುಲಿ ಇದ್ದು, 48 ಗಂಟೆ ಅಬ್ಸಾರ್ವೇಷನ್‌ನಲ್ಲಿ ಇಟ್ಟೆದ್ದೇವೆ. 48 ಗಂಟೆಗಳ ಕಾಲ ಕ್ರಿಟಿಕಲ್ ಇರಲಿದೆ. ಸದ್ಯಕ್ಕೆ ಆರೋಗ್ಯ ಸ್ಟೇಬಲ್ ಆಗಿದೆ ಎಂದರು.
ಇದನ್ನೂ ಓದಿ: ಸಾಲುಮರದ ತಿಮ್ಮಕ್ಕ ನಿಧನದ ಸುದ್ದಿ ಸುಳ್ಳು
ಇನ್ನು ಇದೀಗ ಮಾತನಾಡಿದ ಸಾಲು ಮರದ ತಿಮ್ಮಕ್ಕನ ದತ್ತು ಮಗ ಉಮೇಶ್ ‘ ಸಾಲು ಮರದ ತಿಮ್ಮಕ್ಕಗೆ ಈಗ 112 ವರ್ಷ. ಎರಡು ತಿಂಗಳ ಹಿಂದೆ ಬಿದ್ದು, ಇದೇ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹುಷಾರ್ ಆಗಿದ್ದರು. ಇತ್ತೀಚಿಗೆ ಬೇಲೂರಿನಲ್ಲಿರುವಾಗ ಅವರಿಗೆ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತ್ತು. ಯಾವಾಗಲೂ ಈ ಆಸ್ಪತ್ರೆಯಲ್ಲೇ ಅವರನ್ನ ತೋರಿಸೋದು. ನಿನ್ನೆ(ಅ.05) ರಾತ್ರಿ ಸುಸ್ತು ಎಂದು ಹೇಳಿದರು. ತಕ್ಷಣ ಡಾಕ್ಟರ್ ಎಲ್ಲಾ ಟೆಸ್ಟ್ ಮಾಡಿ, ಸ್ಟಂಟ್ ಅಳವಡಿಸಿದ್ದಾರೆ ಎಂದು ಹೇಳಿದರು.
ಇನ್ನು ತಿಮ್ಮಕ್ಕನ ಬಗ್ಗೆ ಪದೇ ಪದೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬುತ್ತಿದೆ. ಸಾಲು ಮರದ ತಿಮ್ಮಕ್ಕ ಎಂದರೆ ಎಲ್ಲಾರಿಗೂ ತಾಯಿ, ವೃಕ್ಷ ಮಾತೆ. ಅವರು ಆರೋಗ್ಯವಾಗಿದ್ದಾರೆ. ಹೀಗಿದ್ದಾಗಲೇ ಅವರಿಗೆ ಶಂದ್ರಾಜಲಿ ಹಾಕಿದ್ದರೆ ಹೇಗೆ?. ನಿಮ್ಮ ತಂದೆ-ತಾಯಿಗೂ ಹೀಗೆ ಮಾಡಿದರೆ ಹೇಗೆ ಇರುತ್ತೆ. ಅವರು ಆರೋಗ್ಯವಾಗಿದ್ದು, ಮನೆಗೆ ಬರುತ್ತಾರೆ. ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಎಲ್ಲರಿಗೂ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ