AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಶ್ಮಿಕಾ ತಡಬಡಾಯಿಸಿದಾಗ ಸಾಲು ಮರದ ತಿಮ್ಮಕ್ಕನ ಸಾಧನೆ ಬಗ್ಗೆ ಹೇಳಿದ್ದ ವಿವೇಕ್​

ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ, ವಿವೇಕ್​ ಇಬ್ಬರೂ ಪಾಲ್ಗೊಂಡಿದ್ದರು. ಈ ವೇಳೆ ಸಾಲು ಮರದ ತಿಮ್ಮಕ್ಕನ ಬಗ್ಗೆ ಕೇಳಲಾಗಿತ್ತು. ಇದನ್ನು ಹೇಳೋಕೆ ರಶ್ಮಿಕಾ ತಡವರಿಸಿದ್ದರು.

ರಶ್ಮಿಕಾ ತಡಬಡಾಯಿಸಿದಾಗ ಸಾಲು ಮರದ ತಿಮ್ಮಕ್ಕನ ಸಾಧನೆ ಬಗ್ಗೆ ಹೇಳಿದ್ದ ವಿವೇಕ್​
ವೇದಿಕೆ ಮೇಲೆ ಅಂದು ನಡೆದ ಘಟನೆ
ರಾಜೇಶ್ ದುಗ್ಗುಮನೆ
|

Updated on:Apr 17, 2021 | 9:30 PM

Share

ಇಂದು (ಏಪ್ರಿಲ್​ 17) ಆಸ್ಪತ್ರೆಯಲ್ಲಿ ಮೃತಪಟ್ಟ ವಿವೇಕ್​ ಕೇವಲ ಕಲಾವಿದ ಮಾತ್ರ ಆಗಿರಲಿಲ್ಲ. ಸಾವಿರಾರು ಗಿಡಗಳನ್ನು ನೆಟ್ಟು ಪರಿಸರ ಬೆಳೆಸಲೂ ಸಹಕಾರಿಯಾಗಿದ್ದರು. ಇಂದು ವಿವೇಕ್​ ಮೃತಪಡುತ್ತಿದ್ದಂತೆ ಅವರ ಹಳೆಯ ವಿಡಿಯೋ ಒಂದು ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಅವರು ಸಾಲು ಮರದ ತಿಮ್ಮಕ್ಕನ ಸಾಧನೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟದ್ದರು. ಎರಡು ವರ್ಷಗಳ ಹಿಂದಿನ ಕಾರ್ಯಕ್ರಮವೊಂದರಲ್ಲಿ ಸಾಲು ಮರದ ತಿಮ್ಮಕ್ಕಗೆ ಸನ್ಮಾನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ, ವಿವೇಕ್​ ಇಬ್ಬರೂ ಪಾಲ್ಗೊಂಡಿದ್ದರು. ಈ ವೇಳೆ ಸಾಲು ಮರದ ತಿಮ್ಮಕ್ಕನ ಬಗ್ಗೆ ಕೇಳಲಾಗಿತ್ತು. ಇದನ್ನು ಹೇಳೋಕೆ ರಶ್ಮಿಕಾ ತಡವರಿಸಿದ್ದರು.

ಇವರು ಸಾಲು ಮರದ ತಿಮ್ಮಕ್ಕ. ಇವರಿಗೆ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಗಿಡ ಬೆಳೆಸಲು ಆರಂಭಿಸಿದರು ಎಂದ ರಶ್ಮಿಕಾ, ಸೋ.. ಸೋ.. ಎಂದು ಹೇಳಲು ಆರಂಭಿಸಿದರು. ರಶ್ಮಿಕಾಗೆ ಏನೂ ಗೊತ್ತಿಲ್ಲ ಎನ್ನುವುದನ್ನು ತಿಳಿದುಕೊಂಡ ವಿವೇಕ್​ ಮೈಕ್​ ಕೈಗೆ ತೆಗೆದುಕೊಂಡು ತಿಮ್ಮಕ್ಕ ಅವರ ಬಗೆಗಿನ ಇಂಚಿಂಚು ಮಾಹಿತಿಯನ್ನೂ ಬಿಚ್ಚಿಡುತ್ತಾ ಬಂದರು. ಅವರ ಜೀವನ ಹೇಗಿತ್ತು, ಅವರು ಗಿಡ ನೆಡಲು ಆರಂಭಿಸಿದ್ದು ಏಕೆ ಎಂಬಿತ್ಯಾದಿ ಮಾಹಿತಿಗಳನ್ನು ನೀಡಿದರು.

ಅವರ ಮಾತನ್ನು ಕೇಳಿ ವೇದಿಕೆ ಮೇಲಿದ್ದ ಎಲ್ಲರೂ ಅಚ್ಚರಿಪಟ್ಟರು. ಕನ್ನಡದವರಾಗಿ ಸಾಲುಮರದ ತಿಮ್ಮಕ್ಕನ ಬಗ್ಗೆ ಮಾಹಿತಿ ಗೊತ್ತಿಲ್ಲವಲ್ಲ ಎಂದು ರಶ್ಮಿಕಾ ಟ್ರೋಲ್​ ಆಗಿದ್ದು ಒಂದು ಕಡೆಯಾದರೆ, ವಿವೇಕ್​ ತಮಿಳುನಾಡಿನವರಾಗಿ ಇಷ್ಟೊಂದು ತಿಳಿದುಕೊಂಡಿದ್ದಾರಲ್ಲ ಎಂಬುದು ಹೆಚ್ಚು ಹೈಲೈಟ್​ ಆಗಿತ್ತು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಹೃದಯ ಸಂಬಂಧಿ ತೊಂದರೆಗೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ತಮಿಳಿನ ಖ್ಯಾತ ನಟ ವಿವೇಕ್​​ ಚೆನ್ನೈ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಹೃದಯ ನಾಳದಲ್ಲಿ ರಕ್ತ ಸಂಚಾರದಲ್ಲಿ ತೊಂದರೆಯಾದ ಕಾರಣ ಅವರನ್ನು ತುರ್ತು ಚಿಕಿತ್ಸೆಗಾಗಿ ಐಸಿಯುಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: Vivek: ತಮಿಳು ನಟ ವಿವೇಕ್​ ನಿಧನಕ್ಕೆ ಕಂಬನಿ ಮಿಡಿದ ಪುನೀತ್​, ರಜನಿಕಾಂತ್​, ಪ್ರಕಾಶ್​ ರೈ, ರೆಹಮಾನ್​

ಗದಗ: ಜನರ ಖುಷಿಗೆ ಕಾರಣವಾದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ

Published On - 9:09 pm, Sat, 17 April 21

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!
ಶಿವಕುಮಾರ್ ಒಗಟಲ್ಲಿ ಮಾತಾಡ್ತಾರೆ, ಸಿದ್ದರಾಮಯ್ಯ ನಂದೇ ಪೂರ್ಣಾವಧಿ ಅಂತಾರೆ!