ಗದಗ: ಜನರ ಖುಷಿಗೆ ಕಾರಣವಾದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ
ಉತ್ತರ ಕರ್ನಾಟಕದಲ್ಲಿ ಕಾಡು ಅಪರೂಪ. ಹೀಗಾಗಿ ಈ ಭಾಗದ ಜನರಿಗೆ ಹುಲಿ, ಚಿರತೆಗಳನ್ನು ನೋಡಲು ಕುತೂಹಲ. ಹುಬ್ಬಳ್ಳಿ, ಕೊಪ್ಪಳ, ಹಾವೇರಿ, ಬಾಗಲಕೋಟ ಜಿಲ್ಲೆ, ಗದಗ ಬೆಟಗೇರಿ, ಅವಳಿ ನಗರ ಸೇರಿದಂತೆ ವಿವಿಧ ಊರುಗಳ ಜನರು ಮಕ್ಕಳ ಸಮೇತ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಹಾಗೂ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಮತ್ತು ಪ್ರಾಣಿ ಸಂಗ್ರಹಾಲಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಗದಗ: ಉತ್ತರಾಯಣ ಪರ್ವಕಾಲದಲ್ಲಿ ಸೂರ್ಯ ಪಥ ಬದಲಿಸುತ್ತಿದ್ದಂತೆ ಜನರಲ್ಲೂ ಕೊರೊನಾ ಭಯ ಕೊಂಚ ದೂರವಾಗುತ್ತಿದೆ. ಜಿಲ್ಲೆಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಮತ್ತು ಪ್ರಾಣಿ ಸಂಗ್ರಹಾಲಯದಲ್ಲಿ ನೆರೆಯುತ್ತಿರುವ ಜನರೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.
ಉತ್ತರ ಕರ್ನಾಟಕದಲ್ಲಿ ಕಾಡು ಅಪರೂಪ. ಹೀಗಾಗಿ ಈ ಭಾಗದ ಜನರಿಗೆ ಹುಲಿ, ಚಿರತೆಗಳನ್ನು ನೋಡಲು ಕುತೂಹಲ. ಹುಬ್ಬಳ್ಳಿ, ಕೊಪ್ಪಳ, ಹಾವೇರಿ, ಬಾಗಲಕೋಟ ಜಿಲ್ಲೆ, ಗದಗ ಬೆಟಗೇರಿ, ಅವಳಿ ನಗರ ಸೇರಿದಂತೆ ವಿವಿಧ ಊರುಗಳ ಜನರು ಮಕ್ಕಳ ಸಮೇತ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯ ಹಾಗೂ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ ಮತ್ತು ಪ್ರಾಣಿ ಸಂಗ್ರಹಾಲಯಕ್ಕೆ ಲಗ್ಗೆ ಇಟ್ಟಿದ್ದಾರೆ.
ಜನರನ್ನು ನಿಯಂತ್ರಿಸಲು ಜಿಲ್ಲಾ ಸಶಸ್ತ್ರ ಮೀಸಲು ಪಡೆ ನಿಯೋಜನೆ ಮಕ್ಕಳು, ಯುವಕರು, ಯುವತಿಯರು ಸೇರಿದಂತೆ ಸಾವಿರಾರು ಜನ ಹುಲಿ, ಚಿರತೆಗಳು, ಜಿಂಕೆಗಳು, ಕರಡಿ ಸೇರಿ ಹಲವಾರು ಪ್ರಾಣಿ ಪಕ್ಷಿಗಳು ನೋಡಿ ಖುಷಿ ಪಡುತ್ತಿದ್ದಾರೆ.ಸಾವಿರ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತವಾಗಿ ಆಗಮಿಸಿದ್ದಾರೆ. ಸಾಲುಮರದ ತಿಮ್ಮಕ್ಕ ಉದ್ಯಾನದ ಹಳ್ಳಿಯ ಸೊಬಗು ಸಿಟಿ ಜನರನ್ನು ಮೈಮರೆಯುವಂತೆ ಮಾಡಿದೆ. ಹಳ್ಳಿ ಸೊಗಡಿನ ಆಟಗಳು ಸಿಟಿ ಯುವಕ, ಯುವತಿಯ ಗಮನ ಸೆಳೆದಿವೆ. ಹೀಗಾಗಿ ಹಳ್ಳಿ ಸೊಗಡಿನ ಆಟಗಳನ್ನು ಆಡಿ ಮಕ್ಕಳು, ಯುವಕ ಯುವತಿಯರು ಖುಷಿಪಡುತ್ತಿದ್ದಾರೆ. ದೊಡ್ಡವರು ಮಕ್ಕಳ ಆಟ, ಪ್ರಾಣಿಗಳ ಕಲರವ ನೋಡಿ ಸಂತಸ ಪಟ್ಟಿದ್ದಾರೆ ಎಂದು ಪ್ರವಾಸಿ ಮಂಜುಳಾ ಅಭಿಪ್ರಾಯಪಡುತ್ತಾರೆ. ಜತೆಗೆ,ಜನರನ್ನು ನಿಯಂತ್ರಿಸಲು ಜಿಲ್ಲಾ ಸಶಸ್ತ್ರ ಮೀಸಲು ಪಡೆ ನಿಯೋಜನೆ ಮಾಡಲಾಗಿದೆ.
ಅರಣ್ಯ ಇಲಾಖೆಗೂ ಖುಷಿ ಲಾಕ್ಡೌನ್ನಿಂದ ಸಂಗ್ರಹಾಲಯ ಸೊರಗಿ ಹೋಗಿತ್ತು. ಆದಾಯವಿಲ್ಲದೇ ಪ್ರಾಣಿಗಳಿಗೆ ಆಹಾರಕ್ಕಾಗಿ ಹಣದ ಕೊರತೆಯನ್ನು ಅರಣ್ಯ ಇಲಾಖೆ ಎದುರಿಸುತ್ತಿತ್ತು. ಆದರೆ ಈಗ ಹರಿದು ಬಂದ ಜನಸಾಗರ ವೀಕ್ಷಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಖುಷಿಯಾಗಿದ್ದಾರೆ.
ಹೆದ್ದಾರಿ ಪಕ್ಕದಲ್ಲೇ ನಿರ್ಮಾಣವಾಯ್ತು ಸಾಲುಮರದ ತಿಮ್ಮಕ್ಕ ಉದ್ಯಾನವನ; ವಿಶ್ರಾಂತಿಗೆ ಇದು ಪರ್ಫೆಕ್ಟ್ ತಾಣ