ಅಮಿತ್ ಶಾ ಭೇಟಿಗೆ ವಿರೋಧ; ಬೆಳಗಾವಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ
ಖಾಲಿ ಕುರ್ಚಿಗೆ ಚೀಟಿ ಅಂಟಿಸಿ ಪಂಥಾಹ್ವಾನ ಮಾಡಿದ್ದು, ಕೇಂದ್ರ ಕೃಷಿ ತಿದ್ದುಪಡಿ ಕಾಯ್ದೆ ಬಗ್ಗೆ ನಮಗೆ ತಿಳಿಸ ಬನ್ನಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಧರಣಿನಿರತ ರೈತರು ಒತ್ತಾಯಿಸಿದ್ದಾರೆ.
ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ವಿರೋಧಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲಾಗಿ ರೈತರು ಪ್ರತಿಭಟನೆ ನಡೆಸಿದ್ದು, ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ.
ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ ರೈತ ಹೋರಾಟಗಾರರು ಆಗಮಿಸಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ರಸ್ತೆ ಮೇಲೆ ಗಾಂಧೀಜಿ ಫೋಟೊ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಅರೆಬೆತ್ತಲಾಗಿ ಡಿಸಿ ಕಚೇರಿ ಎದುರು ಧರಣಿ ಕುಳಿತ ರೈತರು ರಸ್ತೆ ಮಧ್ಯದಲ್ಲಿಯೇ ಉಪಹಾರ ಸೇವಿಸಿದ್ದಾರೆ. ಖಾಲಿ ಕುರ್ಚಿಗೆ ಚೀಟಿ ಅಂಟಿಸಿ ಪಂಥಾಹ್ವಾನ ಮಾಡಿದ್ದು, ಕೇಂದ್ರ ಕೃಷಿ ತಿದ್ದಪಡಿ ಕಾಯ್ದೆ ಬಗ್ಗೆ ನಮಗೆ ತಿಳಿಸಿ ಬನ್ನಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಧರಣಿನಿರತ ರೈತರು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ: ಪಂಜಾಬ್ ರೈತರ Delhi Chaloಗೆ ರಾಜ್ಯದ ಅನ್ನದಾತರ ಬೆಂಬಲ