TV9 Expo 2022: ​ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಉದ್ಘಾಟನೆ

TV9 Automobile, Lifestyle, Furniture Expo: ಟಿವಿ9 ನೆಟ್ ವರ್ಕ್​ನಿಂದ ಅತಿ ದೊಡ್ಡ ಲೈಫ್ ಸ್ಟೈಲ್ ಆಟೋ ಮೊಬೈಲ್ ಅಂಡ್ ಫರ್ನಿಚರ್ ಎಕ್ಸ್ ಪೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ತ್ರಿಪುರ ವಾಸಿನಿಯಲ್ಲಿ ಲೈಫ್ ಸ್ಟೈಲ್ ಆಟೋ ಮೊಬೈಲ್ ಅಂಡ್ ಫರ್ನಿಚರ್ ಎಕ್ಸ್ ಪೋ ನಡೆಯಲಿದೆ.

TV9 Expo 2022: ​ಲೈಫ್ ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್ಪೋ ಉದ್ಘಾಟನೆ
TV9 Automobile, Lifestyle, Furniture Expo 2022
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Oct 14, 2022 | 1:07 PM

ಟಿವಿ9 ನೆಟ್ ವರ್ಕ್​ನಿಂದ ಅತಿ ದೊಡ್ಡ ಲೈಫ್ ಸ್ಟೈಲ್ ಆಟೋ ಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋ ಆಯೋಜನೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಟಿವಿ9 ನೆಟ್ ವರ್ಕ್​ ನಡೆಸುತ್ತಿರುವ ಅತಿ ದೊಡ್ಡ ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಭಾಗವಹಿಸಲ್ಲಿದ್ದರೆ.

ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ತ್ರಿಪುರ ವಾಸಿನಿಯಲ್ಲಿ ಲೈಫ್ ಸ್ಟೈಲ್ ಆಟೋ ಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋ ನಡೆಯಲಿದೆ. ಇಂದಿನಿಂದ ಪ್ರಾರಂಭಗೊಂಡು ಇನ್ನೂ ಮೂರು ದಿನಗಳ ಕಾಲ ಲೈಫ್ ಸ್ಟೈಲ್ ಆಟೋ ಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋ ನಡೆಯಲಿದೆ. ಬೆಳಗ್ಗೇ 10 ರಿಂದ ಸಂಜೇ 7ರ ವರೆಗು ಈ ಎಕ್ಸ್ ಪೋ ನಡೆಯಲಿದೆ.

ಲೈಫ್ ಸ್ಟೈಲ್ ಆಟೋ ಮೊಬೈಲ್ ಮತ್ತು ಫರ್ನಿಚರ್ ಎಕ್ಸ್ ಪೋ ಕಾರ್ಯಕ್ರಮದಲ್ಲಿ ಖ್ಯಾತ ನಟ ಡಾಲಿ ಧನಂಜಯ್ ಹಾಗು ನಟಿ‌ ಐಶಾನಿ ಶೆಟ್ಟಿ ಎಕ್ಸ್ ಪೋನ ಉದ್ಘಾಟನೆ ಮಾಡಲಿದ್ದಾರೆ. ಒಂದೇ ಸೂರಿನಡಿ ಆಯೋಜನೆ ಮಾಡಿರುವ ಎಕ್ಸ್ ಪೋದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಭರ್ಜರಿ ಆಫರ್ಸ್​ಗಳನ್ನು ನೀಡಲಾಗಿದೆ. ಇದರ ಜೊತೆಗೆ ಅನೇಕ ಮಳಿಗೆಗಳು ಈ ಎಕ್ಸ್ ಪೋದಲ್ಲಿ ಭಾಗವಹಿಸಲಿದ್ದಾರೆ.

ಏಕ್ಸ್ ಪೋದಲ್ಲಿ ಎಲೆಕ್ಟ್ರಾನಿಕ್ಸ್ ಗೃಹ ಉಪಯೋಗಿ ವಸ್ತುಗಳು , ಟಿವಿ ಫ್ರಿಢ್ಜ್ ವಾಶಿಂಗ್ ಮೆಷಿನ್ ಅಂಡ್ ಫರ್ನಿಚರ್ಸ್ ಹಾಗೂ ಫೋರ್ ವಿಲರ್ ಅಂಡ್ ಟೂ ವಿಲರ್ ಗಳು ಸೇರಿದಂತೆ ನೂರಕ್ಕು ಹೆಚ್ಚು ಸ್ಟಾಲ್ಸ್ ಇಡಲಾಗಿದೆ. ಹಬ್ಬದ ಡಿಸ್ಕೌಂಟ್ಸ್ ಆಫರ್ಸ್ ಕೂಡ ಇದ್ದು ರಿಯಾಯಿತಿ ಧರದಲ್ಲಿ‌ ವಸ್ತುಗಳನ್ನ ಕೊಂಡು ಕೊಳ್ಳುವ ಸುವರ್ಣವಕಾಶವಿದೆ

Published On - 10:34 am, Fri, 14 October 22