ಅಧ್ಯಾತ್ಮಿಕ ಒಲವು ಹೆಚ್ಚಿಸಿಕೊಂಡಿದ್ದ ಯುವಕ ನಾಪತ್ತೆ; ಮನೆಗೆ ಬಾರದಿದ್ದರೂ ಸರಿ ಎಲ್ಲಿದ್ದೀಯಾ ಹೇಳು ಮಗನೇ ಎಂದು ಪೋಷಕರ ಕಣ್ಣೀರು
ಅಮ್ಮಾ ವಾಕಿಂಗ್ ಹೋಗಿ ಬರ್ತೀನಿ ಬಾಯ್ ಎಂದು ಹೇಳಿ ತೆರಳಿರುವ ಮಧುಕರ್, ಮೊಬೈಲ್ ಸಹ ಮನೆಯಲ್ಲೇ ಬಿಟ್ಟು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದ ಮಧುಕರ್ಗಾಗಿ ಪೋಷಕರು ಎಲ್ಲೆಡೆ ಹುಡುಕಾಡುತ್ತಿದ್ದಾರೆ. ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಏಪ್ರಿಲ್ 7ರಂದು ಬೆಳಗ್ಗೆ 6 ಗಂಟೆಗೆ ‘ಅಮ್ಮಾ ವಾಕಿಂಗ್ ಹೋಗಿ ಬರ್ತೀನಿ’ ಎಂದು ವಾಕಿಂಗ್ಗೆ ತೆರಳಿದ್ದ ಮಧುಕರ್(28) ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ಸಂಧ್ಯಗಪ್ಪ ಲೇಔಟ್ ನಿವಾಸಿ ಶ್ರೀನಿವಾಸ, ಕಾಂಚನಾ ದಂಪತಿ ಪುತ್ರ ಮಧುಕರ್ ಬಿಇ ವ್ಯಾಸಂಗ ಮಾಡುತ್ತಿದ್ದಾಗಲೇ ಆಧ್ಯಾತ್ಮದತ್ತ ಒಲವು ತೋರಿದ್ದರು. ಆಚಾರ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ಪದವಿ ಪಡೆದಿದ್ದರು. 2 ವರ್ಷಗಳ ಹಿಂದೆ ಲೌಕಿಕ ಜೀವನದಲ್ಲಿ ಆಸಕ್ತಿಯಿಲ್ಲ ಎಂದಿದ್ದರು. ದೇವರ ಸೇವೆ ಮಾಡುವುದಾಗಿ ಪೋಷಕರ ಬಳಿ ಹೇಳಿದ್ದರು ಆದ್ರೆ ಈಗ ನಾಪತ್ತೆಯಾಗಿರುವುದು ಪೋಷಕರಿಗೆ ಚಿಂತೆಗೀಡು ಮಾಡಿದೆ.
ಕಳೆದ 20 ದಿನಗಳ ಹಿಂದೆ ನಾಪತ್ತೆಯಾದ ಮಧುಕರ್ನಿಗಾಗಿ ಪೋಷಕರು ಕಣ್ಣೀರಿಟ್ಟಿದ್ದಾರೆ. ‘ಮನೆಗೆ ಬಾರದಿದ್ರೂ ಸರಿ ಎಲ್ಲಿದ್ದೀಯಾ ಹೇಳು ಮಗನೇ’ ಎಂದು ಗೋಕರೆಯುತ್ತಿದ್ದಾರೆ. ಕಾಲೇಜು ಜೀವನದಲ್ಲೇ ಅಧ್ಯಾತ್ಮಿಕ ಒಲವು ಹೆಚ್ಚಿಸಿಕೊಂಡಿದ್ದ ಮಧುಕರ್, 2 ವರ್ಷಗಳ ಹಿಂದೆ ಲೌಕಿಕ ಜೀವನದಲ್ಲಿ ಆಸಕ್ತಿ ಬಿಟ್ಟು ದೇವರ ಸೇವೆ ಮಾಡ್ತೀನಿ ಎಂದಿದ್ದರು. ಈ ವೇಳೆ ಪೋಷಕರು ಬೈದು ಬುದ್ಧಿವಾದ ಹೇಳಿದ್ದರು. ಬಳಿಕ ಪೋಷಕರ ಮಾತಿನಂತೆ ವಿಮಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದರು. ಅಲ್ಲದೆ ಮಧುಕರ್ ಸಮ್ಮತಿ ಮೇರೆಗೆ ವಿವಾಹಕ್ಕೆ ಸಿದ್ಧತೆ ಕೂಡ ನಡೆದಿತ್ತು. ಆದ್ರೆ ಏಪ್ರಿಲ್ 7ರಂದು ಇದ್ದಕ್ಕಿದ್ದಂತೆ ಮಧುಕರ್ ನಾಪತ್ತೆಯಾಗಿದ್ದಾರೆ.
ಅಮ್ಮಾ ವಾಕಿಂಗ್ ಹೋಗಿ ಬರ್ತೀನಿ ಬಾಯ್ ಎಂದು ಹೇಳಿ ತೆರಳಿರುವ ಮಧುಕರ್, ಮೊಬೈಲ್ ಸಹ ಮನೆಯಲ್ಲೇ ಬಿಟ್ಟು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದ ಮಧುಕರ್ಗಾಗಿ ಪೋಷಕರು ಎಲ್ಲೆಡೆ ಹುಡುಕಾಡುತ್ತಿದ್ದಾರೆ. ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 20 ದಿನಗಳು ಕಳೆದರೂ ಮಗ ವಾಪಸ್ ಬಾರದಿದ್ದರಿಂದ ಪೋಷಕರು ಕಂಗಾಲಾಗಿದ್ದಾರೆ. ಮನೆಗೆ ಬಾರದಿದ್ದರೂ ಸರಿ ಎಲ್ಲಿದ್ದೀಯಾ ಹೇಳು ಮಗನೇ ಎಂದು ಕಣ್ಣೀರು ಹಾಕಿದ್ದಾರೆ. ನಿನ್ನಿಷ್ಟದಂತೆ ಜೀವನ ನಡೆಸು ಅಡ್ಡಿಪಡಿಸಲ್ಲ ಎನ್ನುತ್ತಿದ್ದಾರೆ. ಮಧುಕರ್ ಮನೆ ಬಿಟ್ಟು ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ನಾಪತ್ತೆಯಾಗಿರುವ ಮಧುಕರ್ಗಾಗಿ ಗೋವಿಂದಪುರ ಠಾಣಾ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಬಂಗಲೆಯಲ್ಲಿ ಬಾಡಿಗೆಗಿದ್ದ ಕಲಾವಿದರ ತೆರವು: ಮನೆ ಕಳೆದುಕೊಂಡ 91ರ ಹರೆಯದ ಪದ್ಮಶ್ರೀ ಪುರಸ್ಕೃತ ಗುರು ಮಾಯಧರ್ ರಾವುತ್