ಬೆಂಗಳೂರಿನಲ್ಲಿ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗ! ಮೇ ಮೊದಲ ವಾರದಿಂದ ನಿಯಮ ಜಾರಿ
ನಾಲ್ಕನೇ ಅಲೆ ತಡೆಯಲು ಬಿಬಿಎಂಪಿ ಮೇ ಮೊದಲ ವಾರದಿಂದ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗ ಮಾಡಲು ನಿರ್ಧರಿಸಿದೆ. ಮಾಸ್ಕ್ ಹಾಕದೆ ಓಡಾಡುವವರಿಗೆ 250 ರೂಪಾಯಿ ದಂಡ ಹಾಕಲು ತೀರ್ಮಾನ ಮಾಡಲಾಗಿದೆ.
ಬೆಂಗಳೂರು: ನಿಯಂತ್ರಣದಲ್ಲಿದ್ದ ಕೊರೊನಾ (Coronavirus) ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ರಾಜ್ಯ ಸಹಜ ಸ್ಥಿತಿಗೆ ಬಂದಿದೆ. ಈ ನಡುವೆ ಮತ್ತೆ ಲಾಕ್ಡೌನ್ (Lockdown) ಆದರೆ ಹೇಗೆ ಎಂಬ ಚಿಂತೆ ಜನರಲ್ಲಿ ಹೆಚ್ಚಾಗುತ್ತಿದೆ. ಆರಂಭದಲ್ಲೆ ಕೊರೊನಾ ನಿಯಂತ್ರಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ. ಸದ್ಯ ಡಂದ ಹಾಕಲ್ಲ. ಆದರೆ ಎಲ್ಲರೂ ಮಾಸ್ಕ್ ಧರಿಸಬೇಕು ಅಂದಿದ್ದಾರೆ. ಆದರೆ ಹಲವೆಡೆ ಜನರು ಮಾಸ್ಕ್ ಧರಿಸುತ್ತಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ದಂಡ ಪ್ರಯೋಗ ಮಾಡಲು ಬಿಬಿಎಂಪಿ ನಿರ್ಧರಿಸಿದೆ.
ನಾಲ್ಕನೇ ಅಲೆ ತಡೆಯಲು ಬಿಬಿಎಂಪಿ ಮೇ ಮೊದಲ ವಾರದಿಂದ ಮಾಸ್ಕ್ ಹಾಕದಿದ್ದರೆ ದಂಡ ಪ್ರಯೋಗ ಮಾಡಲು ನಿರ್ಧರಿಸಿದೆ. ಮಾಸ್ಕ್ ಹಾಕದೆ ಓಡಾಡುವವರಿಗೆ 250 ರೂಪಾಯಿ ದಂಡ ಹಾಕಲು ತೀರ್ಮಾನ ಮಾಡಲಾಗಿದೆ. ಏಪ್ರಿಲ್ ಅಂತ್ಯದವರೆಗೂ ಮಾಸ್ಕ್ ಹಾಕದಿದ್ದರೆ ವಿನಾಯಿತಿ ನೀಡಿ. ಜೊತೆಗೆ ಜಾಗೃತಿ ಮೂಡಿಸಿ ಕಳುಹಿಸಿ ಅಂತ ಮಾರ್ಷೆಲ್ಗಳಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಮಾಸ್ಕ್ ಧರಿಸಿದರೆ ಮಾತ್ರ ಬಿಎಂಟಿಸಿ ಬಸ್ ಹತ್ತಲು ಅವಕಾಶ: ಇಷ್ಟು ದಿನ ಮಾಸ್ಕ್ ಮರೆತಿದ್ದ ಜನರಿಗೆ ಈಗ ಮತ್ತೆ ಮಾಸ್ಕ್ ಬಿಸಿ ತಟ್ಟಲಿದೆ. ಇನ್ನು ಮುಂದೆ ಮಾಸ್ಕ್ ಧರಿಸಿದರೆ ಮಾತ್ರ ಬಿಎಂಟಿಸಿ ಬಸ್ ಹತ್ತಲು ಅವಕಾಶ ನೀಡಲಾಗುತ್ತದೆ. ಕಪವಿಡ್ ಪಾಸಿಟಿವ್ ದರ ಹೆಚ್ಚುತ್ತಿರುವ ಹಿನ್ನೆಲೆ ಬಿಎಂಟಿಸಿ ಎಚ್ಚರಿಕೆ ಕ್ರಮಕೈಗೊಳ್ಳಲು ಮುಂದಾಗಿದೆ. ಡ್ರೈವರ್, ಕಂಡಕ್ಟರ್ ಕಡ್ಡಾಯವಾಗಿ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು. ಈ ಬಗ್ಗೆ ಬಿಎಂಟಿಸಿ ಶೀಘ್ರದಲ್ಲೇ ಗೈಡ್ಲೈನ್ಸ್ ಜಾರಿಗೊಳಿಸುತ್ತದೆ.
ಭಾರತದಲ್ಲಿ ಹೆಚ್ಚಾಗುತ್ತಿದೆ ಕೊವಿಡ್ ಪ್ರಕರಣ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 2,927 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು 32 ಜನರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಪ್ರಸ್ತುತ 16,279 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಸೋಂಕಿತರ ಒಟ್ಟು ಸಂಖ್ಯೆ 4,30,65,496ಕ್ಕೆ ಮುಟ್ಟಿದೆ. ದೇಶದಲ್ಲಿ ಈವರೆಗೆ ಕೊವಿಡ್ನಿಂದಾಗಿ ಒಟ್ಟು 5,23,654 ಜನರು ಸಾವನ್ನಪ್ಪಿದ್ದಾರೆ. 2,252 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ನಿನ್ನೆ ದೇಶದಲ್ಲಿ 2,483 ಮಂದಿಯಲ್ಲಿ ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಈವರೆಗೆ ಒಟ್ಟು 4,25,25,563 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣವು ಶೇ 98.75 ಇದೆ.
ಇದನ್ನೂ ಓದಿ
Covid 19: ಕೊವಿಡ್ ಸೋಂಕಿತರಿಗೆ ಭವಿಷ್ಯದಲ್ಲಿ ಅಡ್ಡಪರಿಣಾಮಗಳು ಉಂಟಾಗುತ್ತವೆಯೇ? ಸಂಶೋಧನೆಯಲ್ಲಿ ಮಾಹಿತಿ ಬಹಿರಂಗ
Published On - 8:35 am, Thu, 28 April 22