AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಸ್ಕ್‌ ಧರಿಸದಿದ್ದರೆ ಸದ್ಯಕ್ಕೆ ದಂಡ ಹಾಕುವುದಿಲ್ಲ; ಆದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ -ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌

Dr K Sudhakar: ಮಾಸ್ಕ್‌ ಧರಿಸದಿದ್ದರೆ ಸದ್ಯಕ್ಕೆ ದಂಡ ಹಾಕುವುದಿಲ್ಲ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಲು ಸಭೆಯಲ್ಲಿ ತೀರ್ಮಾನಿಸಿದ್ದೇವೆ - ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌

ಮಾಸ್ಕ್‌ ಧರಿಸದಿದ್ದರೆ ಸದ್ಯಕ್ಕೆ ದಂಡ ಹಾಕುವುದಿಲ್ಲ; ಆದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ -ಆರೋಗ್ಯ ಸಚಿವ ಡಾ. ಕೆ.ಸುಧಾಕರ್‌
ಡಾ.ಕೆ. ಸುಧಾಕರ್
TV9 Web
| Updated By: ಸಾಧು ಶ್ರೀನಾಥ್​|

Updated on:Apr 25, 2022 | 3:49 PM

Share

ಬೆಂಗಳೂರು: ಇನ್ಮುಂದೆ ರಾಜ್ಯದಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಈ ಬಗ್ಗೆ ಕೆಲ ಹೊತ್ತಿನಲ್ಲೇ ಮಾರ್ಗಸೂಚಿ ಹೊರಡಿಸುತ್ತೇವೆ. ಮಾಸ್ಕ್‌ ಧರಿಸದಿದ್ದರೆ ಸದ್ಯಕ್ಕೆ ದಂಡ ಹಾಕುವುದಿಲ್ಲ. ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಈ ಬಗ್ಗೆ ನಿಗಾ ವಹಿಸಲು ಸಭೆಯಲ್ಲಿ ತೀರ್ಮಾನಿಸಿದ್ದೇವೆ. ಲಸಿಕೆ ತೆಗೆದುಕೊಳ್ಳದವರಿಗೆ ಹೆಚ್ಚಿನ ಸಮಸ್ಯೆ ಆಗುತ್ತಿದೆ, ಜಾಗ್ರತೆ ವಹಿಸಿ ಎಂದು ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಸೋಂಕಿತರಿಗೆ ಯಾವ ತಳಿ ಅಟ್ಯಾಕ್ ಆಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ: ಸೋಂಕಿತರಿಗೆ ಯಾವ ತಳಿ ಅಟ್ಯಾಕ್ ಆಗಿದೆ ಎಂಬುದು ಇನ್ನೂ ಗೊತ್ತಾಗಿಲ್ಲ. ಜೀನೋಮಿಕ್ ಸ್ವೀಕ್ವೆನ್ಸ್ ಗೆ ಲ್ಯಾಬ್ ಗೆ ಕಳುಹಿಸಲಾಗಿದೆ. ರಿಪೋರ್ಟ್ ಬಂದ ಕೂಡಲೇ ರೂಪಾಂತರಿಯೇ ಅಥವಾ ಹಳೆಯ ಪ್ರಬೇಧವಾ ಅನ್ನೋದು ಗೊತ್ತಾಗಲಿದೆ. ಪ್ರತಿನಿತ್ಯ 10 ಸಾವಿರ ಮಂದಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತದೆ. ನಮ್ಮ ಆರೋಗ್ಯ ಇಲಾಖೆ ವತಿಯಿಂದ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ. ಇದೇ 27 ರಂದು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಲಿದ್ದಾರೆ. ಅವರು ಏನು ತೀರ್ಮಾನ ಕೊಡ್ತಾರೆ ಅನ್ನೋದನ್ನ ಎದುರು ನೋಡುತ್ತಿದ್ದೇವೆ. ತಕ್ಷಣಕ್ಕೆ ಯಾವುದೆ ನಿರ್ಬಂಧಗಳನ್ನ ಮಾಡಲ್ ಆಗಿ ಜಾರಿ ಮಾಡುವುದಿಲ್ಲ. ಕೊರೊನಾದ ನಾಲ್ಕನೆಯ ಅಲೆ ಸಿವಿಯಾರಿಟಿ ಕಡಿಮೆ ಅಂತಾ ಹೇಳಲಾಗ್ತಿದೆ ಎಂದು ಸಚಿವ ಸುಧಾಕರ್ ಹೇಳಿದರು.

ಇವತ್ತು ಸಿಎಂ ನೇತೃತ್ವದಲ್ಲಿ ಕೋವಿಡ್ ನಾಲ್ಕನೇ ಅಲೆಯ ಸಂಬಂಧ ಪರಿಶೀಲನಾ ಸಭೆ ನಡೆಸಲಾಯ್ತು. ಕೆಲವು ಕ್ರಮಗಳ ಬಗ್ಗೆ ತೀರ್ಮಾನ ಮಾಡಲಾಯ್ತು. ಕಡ್ಡಾಯವಾಗಿ ಮಾಸ್ಕ್ ಗಳನ್ನ ಧರಿಸಬೇಕು. ಒಳಾಂಗಣ ಹಾಗೂ ಹೆಚ್ಚು ಜನಸಂದಣಿ ಪ್ರದೇಶದಲ್ಲಿ ಕಡ್ಡಾಯ. ಆದ್ರೆ ತಕ್ಷಣಕ್ಕೆ ಯಾವುದೇ ಪೆನಾಲ್ಟಿ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ಯಾರೆಲ್ಲ ಸೋಂಕಿತರು ಪತ್ತೆಯಾಗ್ತಿದ್ದಾರೆ ಅದರಲ್ಲಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇವತ್ಗು 1.9 ಪರ್ಸೆಂಟ್ ಬೆಂಗಳೂರಿನಲ್ಲಿ ಆಗಿದೆ. ಅವರ ಮೇಲೆ ನಿಗಾ ಇಡುವುದು ಹಾಗೂ ಅವರಿಗೆ ಅವಶ್ಯಕತೆ ಇದ್ರೆ ಚಿಕಿತ್ಸೆ ನೀಡಲಾಗುವುದು ಎಂದು ಡಾ. ಕೆ ಸುಧಾಕರ್ ಹೇಳಿದ್ದಾರೆ.

ಯಾರು ಲಸಿಕೆಯನ್ನ ತೆಗೆದುಕೊಂಡಿಲ್ಲ ಅವರಿಗೆ ಹೆಚ್ಚು ತೊಂದರೆಯಾಗ್ತಿದೆ. ಇಡೀ ವಿಶ್ವದಲ್ಲಿ ಇದು ಸಾಬೀತಾಗಿದೆ. ಮೂರನೆ ಡೋಸ್ ಕಡ್ಡಾಯವಾಗಿ ತೆಗೆದುಕೊಳ್ಳಬೇಕು. 60 ವರ್ಷ ಮೇಲ್ಪಟ್ಟವರು ಈ ಡೋಸ್ ತೆಗೆದುಕೊಳ್ಳಬೇಕು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣ ಬಳಸಿಕೊಂಡು ಹೆಚ್ಚು ಅರಿವು ಮೂಡಿಸಲಾಗುವುದು. ದಕ್ಷಿಣ ಕೋರಿಯಾ, ಥೈಲ್ಯಾಂಡ್, ಜಪಾನ್ ನಲ್ಲಿ ಕೊರೊನಾ 4ನೆಯ ಅಲೆ ಜಾಸ್ತಿಯಾಗ್ತಿದೆ. ಇಂಥಹ ದೇಶಗಳಿಂದ ಬರುವವರ ಮೇಲೆ ಏರ್ ಪೋರ್ಟ್ ನಲ್ಲಿ ನಾವೂ ತೀವ್ರ ನಿಗಾಯಿಡುತ್ತೇವೆ. ಅವರು ಮನೆಗೆ ಹೋದ ಮೇಲೆ ಟೆಲಿಮಾನಿಟಿರಿಂಗ್ ಮಾಡಲಾಗುತ್ತೆ ಎಂದು ಸಚಿವ ಸುಧಾಕರ್ ಸಭೆಯಲ್ಲಿ ಚರ್ಚೆಯಾದ ವಿಷಯಗಳ ಕುರಿತು ಮಾಹಿತಿ ನೀಡಿದರು.

Dr Sudhakar: ವಿದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲಾಗುವುದು

Published On - 2:38 pm, Mon, 25 April 22