Job Fraud: ಕೆಲಸ ಕೊಡಿಸುವುದಾಗಿ ಹೇಳಿ 500ಕ್ಕೂ ಹೆಚ್ಚು ಜನರಿಂದ ₹15 ಕೋಟಿ ವಂಚನೆ; ಇಬ್ಬರು ಅರೆಸ್ಟ್

| Updated By: ಆಯೇಷಾ ಬಾನು

Updated on: Oct 17, 2021 | 12:47 PM

KSRTCಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಂಜುನಾಥ್, ನಡುವಳಿಕೆ ಸರಿಯಿಲ್ಲದ ಕಾರಣ ಅಮಾನತುಗೊಂಡಿದ್ದ ಬಳಿಕ ಕೆಲಸದಿಂದ ವಜಾಗೊಳಿಸಲಾಗಿತ್ತು. ಕೆಲಸ ಕಳೆದುಕೊಂಡ ಮೇಲೆ ಜನರನ್ನು ವಂಚಿಸಿ ಹಣ ಮಾಡಲು ಮುಂದಾಗಿದ್ದ.

Job Fraud: ಕೆಲಸ ಕೊಡಿಸುವುದಾಗಿ ಹೇಳಿ 500ಕ್ಕೂ ಹೆಚ್ಚು ಜನರಿಂದ ₹15 ಕೋಟಿ ವಂಚನೆ; ಇಬ್ಬರು ಅರೆಸ್ಟ್
ಅನಿಲ್, ಮಂಜುನಾಥ್
Follow us on

ಬೆಂಗಳೂರು: KSRTCಯಲ್ಲಿ ಕೆಲಸ ಕೊಡಿಸೋದಾಗಿ ವಂಚಿಸಿದ್ದ ಇಬ್ಬರನ್ನು ಬೆಂಗಳೂರಿನ ಮಾಗಡಿ ರೋಡ್ ಪೊಲೀಸರು ಸೆರೆ ಹಿಡಿದಿದ್ದಾರೆ. ಹಗರಿಬೊಮ್ಮನಹಳ್ಳಿ ಮೂಲದ ಮಂಜುನಾಥ್, ಅನಿಲ್ ಬಂಧಿತರು. 500ಕ್ಕೂ ಹೆಚ್ಚು ಜನರಿಗೆ ಸುಮಾರು ₹15 ಕೋಟಿ ವಂಚನೆ ಮಾಡಿದ್ದಾರೆ.

KSRTCಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಂಜುನಾಥ್, ನಡುವಳಿಕೆ ಸರಿಯಿಲ್ಲದ ಕಾರಣ ಅಮಾನತುಗೊಂಡಿದ್ದ ಬಳಿಕ ಕೆಲಸದಿಂದ ವಜಾಗೊಳಿಸಲಾಗಿತ್ತು. ಕೆಲಸ ಕಳೆದುಕೊಂಡ ಮೇಲೆ ಜನರನ್ನು ವಂಚಿಸಿ ಹಣ ಮಾಡಲು ಮುಂದಾಗಿದ್ದ. ಜನರಿಗೆ ವಂಚಿಸಲು 100 ಕ್ಕೂ ಹೆಚ್ಚು ಸಿಮ್ ಮತ್ತು ಹತ್ತಾರು ಮೊಬೈಲ್ಗಳನ್ನು ಬಳಕೆ ಮಾಡಿದ್ದಾನೆ. 500 ಜನರಿಗೆ ಸುಮಾರು 15 ಕೋಟಿ ವಂಚನೆ ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಆರೋಪಿ ಮಂಜುನಾಥ್ ಕೆಎಸ್ಆರ್ಟಿಸಿ ನಿರ್ವಾಹಕ, ಚಾಲಕ ಸೇರಿ ವಿವಿಧ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ‌ ಸರಣಿ ವಂಚನೆ ಮಾಡಿದ್ದಾನೆ. ಜೊತೆಗೆ ತನ್ನ ಕಾರ್ಗೆ ಕರ್ನಾಟಕ ಸರ್ಕಾರ ಅಂತ ನಾಮಫಲಕ ಹಾಕಿಕೊಂಡು ಓಡಾಡುತ್ತ ಮೋಸ ಮಾಡಿದ್ದಾನೆ. ಬಳ್ಳಾರಿ, ಗದಗ, ಚಿತ್ರದುರ್ಗ, ದಾವಣಗೆರೆ ಸುತ್ತಲಿನ ಜನರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಮಂಚುನಾರ್ಥ ತನ್ನ ಅಕೌಂಟ್ಗೆ ಹಣ ಹಾಕಿಸಿಕೊಂಡರೆ ಐಟಿ‌ ಇಲಾಖೆಯಿಂದ ಸಮಸ್ಯೆ ಆಗುತ್ತೆ ಎಂದು ಚಾಲಾಕಿತನದಿಂದ ತನ್ನ ಶಿಷ್ಯ ಅನೀಲ್ ಅಕೌಂಟ್ಗೆ ಹಣ ಹಾಕಿಸಿ ಬಳಿಕ ಅದನ್ನು ಡ್ರಾ ಮಾಡಿಕೊಳ್ಳುತ್ತಿದ್ದ. ಇದಕ್ಕೆ ಶಿಷ್ಯ ಅನೀಲ್ಗೆ ಕಮಿಷನ್ ಕೂಡ ಕೊಡ್ತಿದ್ದ. ಸದ್ಯ ಈಗ ಇವರಿಬ್ಬರೂ ಅರೆಸ್ಟ್ ಆಗಿದ್ದು ವಂಚನೆ ಮಾಡಿದ ಹಣ ಎಲ್ಲಿಟ್ಟಿದಿಯಾ ಎಂದು ಪೊಲೀಸರು ಕೇಳಿದ್ರೆ ಅದನ್ನು ಕೆಲ ಅಧಿಕಾರಿಗಳಿಗೆ ನೀಡಿದ್ದೀನಿ ಎಂದು ಉತ್ತರ ನೀಡ್ತಿದ್ದಾನೆ.

ಇದನ್ನೂ ಓದಿ: ಗೃಹ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ; ಬೆಂಗಳೂರಿನ ವಿಧಾನಸೌಧ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲು

ಮೈಸೂರು ಮಹಾರಾಣಿ ಕಾಲೇಜಿನಲ್ಲಿ ಕೆಲಸ ಕೊಡಿಸುವುದಾಗಿ ವಂಚನೆ; ಉಪನ್ಯಾಸಕ ಅರೆಸ್ಟ್