ಸ್ಮಗ್ಲರ್​​ಗಳಿಂದ ರಕ್ತ ಚಂದನ ರಾಬರಿ‌ ಮಾಡಿದ್ದ ಇಬ್ಬರು ಕಾನ್ಸ್​​ಟೇಬಲ್ ಸಸ್ಪೆಂಡ್: ಪೊಲೀಸ್​ ಆಯುಕ್ತ ಕಮಲ್ ಪಂತ್ ಆದೇಶ

| Updated By: ಆಯೇಷಾ ಬಾನು

Updated on: Jan 12, 2022 | 11:49 AM

ಮಹದೇವಪುರ ಹೆಡ್ ಕಾನ್ಸ್ಟೇಬಲ್ ಮಮ್ತೇಶ್ ಗೌಡ ಮತ್ತು ಗಿರಿನಗರ ಠಾಣೆ ಹೆಡ್ ಕಾನ್ಸ್ಟೇಬಲ್ ಮೋಹನ್ನನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಸ್ಮಗ್ಲರ್​​ಗಳಿಂದ ರಕ್ತ ಚಂದನ ರಾಬರಿ‌ ಮಾಡಿದ್ದ ಇಬ್ಬರು ಕಾನ್ಸ್​​ಟೇಬಲ್ ಸಸ್ಪೆಂಡ್: ಪೊಲೀಸ್​ ಆಯುಕ್ತ ಕಮಲ್ ಪಂತ್ ಆದೇಶ
ಸ್ಮಗಲರ್ಗಳಿಂದ ರಕ್ತ ಚಂದನ ರಾಬರಿ‌; ಕರ್ತವ್ಯಲೋಪ‌ ಎಸಗಿದ ಇಬ್ಬರು ಕಾನ್ಸ್ಟೇಬಲ್ಗಳು ಮನೆಗೆ
Follow us on

ಬೆಂಗಳೂರು: ಸ್ಮಗ್ಲರ್ಗಳಿಂದಲೇ ರಕ್ತ ಚಂದನ ರಾಬರಿ‌ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ಕರ್ತವ್ಯಲೋಪ‌ ಹಿನ್ನೆಲೆ ಕಾನ್ಸ್ಟೇಬಲ್ಗಳಿಬ್ಬರ ಸಸ್ಪೆಂಡ್ ಮಾಡಲಾಗಿದೆ. ಮಹದೇವಪುರ ಹೆಡ್ ಕಾನ್ಸ್ಟೇಬಲ್ ಮಮ್ತೇಶ್ ಗೌಡ ಮತ್ತು ಗಿರಿನಗರ ಠಾಣೆ ಹೆಡ್ ಕಾನ್ಸ್ಟೇಬಲ್ ಮೋಹನ್ನನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.

ಘಟನೆ ಹಿನ್ನೆಲೆ:
ಡಿಸೆಂಬರ್ 15 ರಂದು ನೆರೆಯ ಆಂಧ್ರದಿಂದ ರೆಡ್ ಸ್ಯಾಂಡಲ್ ಸಾಗಾಟ ಮಾಡ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಸಿಸಿಬಿ ಹೆಡ್ ಕಾನ್ಸ್‌ಟೇಬಲ್ ಮೋಹನ್ ಮತ್ತು ಮಹದೇವಪುರ ಠಾಣೆಯ HC ಮಮ್ತೇಶ್ ಗೌಡ ಖಚಿತ ಮಾಹಿತಿ ಮೆರೆಗೆ ಮೊದಲೇ ಕೋಲಾರದ ಶ್ರೀನಿವಾಸಪುರಕ್ಕೆ ತೆರಳಿದ್ದರು. ಶ್ರೀನಿವಾಸಪುರದಿಂದ ಚಿಂತಾಮಣಿ ಮೂಲಕ ಹೊಸಕೋಟೆಗೆ ಬರ್ತಿದ್ದ ಟಾಟಾಏಸ್ ಗೂಡ್ಸ್ ವಾಹನ ಹಿಂಬಾಲಿಸಿ ಹೊಸಕೋಟೆಯ ಸಂತೇಗೇಟ್ ಬಳಿ‌ ಬರ್ತಿದ್ದಂತೆ ಆಕ್ಸಿಡೆಂಟ್ ಡ್ರಾಮ ಮಾಡಿ‌ ಟಾಟಾಏಸ್ ನಿಲ್ಲಿಸಿದ್ದರು. ಬಳಿಕ ಚಾಲಕನಿಗೆ ಬೇಡಿ ತೋರಿಸಿ ರಕ್ತ ಚಂದನ ಸಮೇತ ವಾಹನ ಮತ್ತು ಚಾಲಕನನ್ನ ಕರೆದುಕೊಂಡು ಹೋಗಿದ್ದರು. ತಮ್ಮ ಅಡ್ಡಾಗೆ ಕರೆದೋಗಿ ಗೂಡ್ಸ್ ವಾಹನದಲ್ಲಿದ್ದ 13 ಲಕ್ಷ ಮೌಲ್ಯದ 21 ರಕ್ತ ಚಂದನದ ತುಂಡುಗಳನ್ನು ವಶಕ್ಕೆ ಪಡೆದು ಚಾಲಕನನ್ನ ಬೆದರಿಸಿ ಕಳಿಸಿದ್ದರು. ಹೆದ್ದಾರಿ ಬದಿ ನಡೆದಿದ್ದ ಡ್ರಾಮದ ಬಗ್ಗೆ ಕಿಡ್ನಾಪ್ ಅಂತಾ ಪೊಲೀಸರಿಗೆ ಸ್ಥಳೀಯರು ಮಾಹಿತಿ‌ ನೀಡಿದ್ದರು. ಹೀಗಾಗಿ ಡಿಸೆಂಬರ್ 15 ರಂದು ನಡೆದಿದ್ದ ಘಟನೆಯ ಮಾಹಿತಿಯನ್ನು ಪಡೆದ ಹೊಸಕೋಟೆ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಎಲ್ಲೂ ಡಿಸೆಂಬರ್ 15ರಂದು ನಡೆದ ಘಟನೆ ಸಂಬಂಧ ಕೇಸ್ ದಾಖಲಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡ ಪೊಲೀಸರು ತನಿಖೆ ವೇಳೆ ಹೆದ್ದಾರಿ‌ ಬದಿಯಲ್ಲಿರುವ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಿದಾಗ ಘಟನೆ ಸಂಬಂಧ ಸುಳಿವು ಸಿಕ್ಕಿದೆ. ವಾಹನದ ನಂಬರ್ ಪ್ಲೇಟ್ ಆಧಾರದ ಮೇಲೆ ಹೊಸಕೋಟೆ ಪೊಲೀಸರು ತನಿಖೆ ನಡೆಸಿದಾಗ ಅಕ್ರಮ ಬಯಲಾಗಿದೆ.

ಖತರ್ನಾಕ್ ಪೇದೆಗಳಿಗೆ ಅಡ್ಡೆಯಾಗಿದ್ದ ಹೊಸಕೋಟೆ
ಕಳೆದ ಹಲವು ವರ್ಷಗಳಿಂದ ಹೊಸಕೋಟೆ ಸುತ್ತಾಮುತ್ತ ಕೆಲಸ ಮಾಡಿದ್ದ ಇಬ್ಬರು ಪೇದೆಗಳು ರೆಡ್ ಸ್ಯಾಂಡಲ್ ಮತ್ತು ಗಾಂಜಾ ಸಾಗಾಟದ ಬಗ್ಗೆ ಚನ್ನಾಗಿ ತಿಳಿದುಕೊಂಡಿದ್ದರು. ಈ ವೇಳೆ ಕೇಸ್ ಮಾಡಿದ್ರೆ ಅಲ್ಪ ಸ್ವಲ್ಪ ಹಣ ಸಿಗುತ್ತೆ ಅಂತ ಡೈರೆಕ್ಟ್ ಡೀಲ್ಗೆ ಮುಂದಾಗಿದ್ದರು. ಕಳೆದ ಹಲವು ವರ್ಷಗಳಿಂದ ಸಾಕಷ್ಟು ಭಾರಿ ರಕ್ತ ಚಂದನ ಮತ್ತು ಗಾಂಜಾ ಹಿಡಿದು ಹಣ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹಲವು ಸ್ಮಗ್ಲರ್ಗಳ ಜೊತೆಗೂಡಿ ಅಡ್ಡ ದಾರಿಯಲ್ಲಿ ಹಣ ಸಂಪಾದನೆ ಮಾಡ್ತಿದ್ದ ಇವರು, ಸ್ಥಳೀಯ ರಾಜಕೀಯ ಮುಖಂಡರ ಜೊತೆಗೂ ಪರಿಚಯ ಬೆಳೆಸಿಕೊಂಡಿದ್ದರು. ಪೊಲೀಸರೆ ಸ್ಮಗ್ಲರ್ಗಳಂತೆ ದಂದೆ ಮಾಡ್ತಿದ್ದರು.

ಇದನ್ನೂ ಓದಿ: Viral Video: ತಂದೆಗೆ ಮೇಕಪ್​ ಮಾಡಿದ ಮಗಳು; ವಿಡಿಯೋ ನೋಡಿ ಸಖತ್​ ಖುಷಿಪಟ್ಟ ನೆಟ್ಟಿಗರು

Published On - 9:55 am, Wed, 12 January 22