ಬೆಂಗಳೂರಿನ ಎರಡು ಖಾಸಗಿ ಶಾಲೆಯ ಮಕ್ಕಳಿಗೆ ಕೊರೊನಾ ಪಾಸಿಟಿವ್​​; ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಜಂಟಿ ಆಯುಕ್ತ ಜಗದೀಶ್

ಕೊರೊನಾ 4ನೆ ಅಲೆ ಸೋಂಕಿನ ಪ್ರಕರಣಗಳು ನಗರದಲ್ಲಿ ಏರಿಕೆಯಾಗುತ್ತಿದ್ದು, ದಾಸರಹಳ್ಳಿ ವಲಯದ ರಾಜ್ ಗೋಪಾಲನಗರ ದಲ್ಲಿ ಇರುವ ನ್ಯೂ ಸ್ಟ್ಯಾಂಡರ್ಡ್ ಇಂಗ್ಲೀಷ್ ಸ್ಕೂಲ್ ಮತ್ತು ಎಂಇಎಸ್ ಪಬ್ಲಿಕ್ ಖಾಸಗಿ ಶಾಲೆಯ ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

ಬೆಂಗಳೂರಿನ ಎರಡು ಖಾಸಗಿ ಶಾಲೆಯ ಮಕ್ಕಳಿಗೆ ಕೊರೊನಾ ಪಾಸಿಟಿವ್​​; ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ  ಜಂಟಿ ಆಯುಕ್ತ ಜಗದೀಶ್
ಎಮ್​​.ಇ..ಎಸ್​ ಪಬ್ಲಿಕ್​​ ಶಾಲೆ
Follow us
TV9 Web
| Updated By: ವಿವೇಕ ಬಿರಾದಾರ

Updated on:Jun 14, 2022 | 2:49 PM

ಬೆಂಗಳೂರು: ಕೊರೊನಾ 4ನೆ (Covid 4th wave) ಅಲೆ ಸೋಂಕಿನ ಪ್ರಕರಣಗಳು ನಗರದಲ್ಲಿ ಏರಿಕೆಯಾಗುತ್ತಿದ್ದು, ದಾಸರಹಳ್ಳಿ (Dasarhalli) ವಲಯದ ರಾಜ್ ಗೋಪಾಲನಗರ ದಲ್ಲಿ ಇರುವ ನ್ಯೂ ಸ್ಟ್ಯಾಂಡರ್ಡ್ ಇಂಗ್ಲೀಷ್ ಸ್ಕೂಲ್ ಮತ್ತು ಎಂಇಎಸ್ ಪಬ್ಲಿಕ್ ಖಾಸಗಿ ಶಾಲೆಯ ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ನ್ಯೂ ಸ್ಟ್ಯಾಂಡರ್ಡ್ ಇಂಗ್ಲೀಷ್ ಸ್ಕೂಲ್​ನ  5 ಮತ್ತು 6 ನೇ ತರಗತಿಯಲ್ಲಿ ಓದುತ್ತಿರುವ 21 ಮಕ್ಕಳಿಗೆ,  ಎಂಇಎಸ್ ಪಬ್ಲಿಕ್ ಸ್ಕೂಲ್​​ನ 5 ನೇ ತರಗತಿಯಲ್ಲಿ ಓದುತ್ತಿದ್ದ  10 ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಸದ್ಯಕ್ಕೆ ಎಲ್ಲಾ ಮಕ್ಕಳಿಗೂ ಮತ್ತು ಶಾಲಾ ಸಿಬ್ಬಂದಿಗೂ  ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಸದ್ಯ ಶಾಲೆಗಳನ್ನ ಕಂಟೈನ್ಮೆಂಟ್ ಜೋನ್​​ ಅಂತಾ ಘೋಷಣೆ ಮಾಡಲಾಗಿದೆ.

ಇದನ್ನು ಓದಿ: 2022 ರಾಷ್ಟ್ರಪತಿ ಚುನಾವಣೆಯ ರೇಸ್​​ನಲ್ಲಿ ಇಲ್ಲ ಎಂದ ಶರದ್​​ ಪವಾರ್​​

ಸದ್ಯ ಪಾಸಿಟಿವ್ ಆಗಿರುವ ಮಕ್ಕಳು ಎಲ್ಲರೂ ಕೂಡ ಆರಾಮಾಗಿ ಇದ್ದು, ಆತಂಕ ಪಡುವಂತಿಲ್ಲ. ನ್ಯೂ ಸ್ಟ್ಯಾಂಡರ್ಡ್ ಇಂಗ್ಲೀಷ್ ಸ್ಕೂಲ್ 21 ವಿದ್ಯಾರ್ಥಿಗಳಿಗೆ ಪಾಸಿಟಿವ್ ಆಬಮದರು ಶಾಲೆಗೆ ರಜೆ ನೀಡಿಲ್ಲ. ಪಾಸಿಟಿವ್ ಕಾಣಿಸಿಕೊಂಡ ತರಗತಿಯ ಮಕ್ಕಳಿಗೆ ಮಾತ್ರ ರಜೆ ನೀಡಲಾಗಿದೆ. ಈ ಸಂಬಂಧ ಬಿಬಿಎಂಪಿ (BBMP) ಆರೋಗ್ಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ನ್ಯೂ ಸ್ಟ್ಯಾಂಡರ್ಡ್ ಇಂಗ್ಲೀಷ್ ಸ್ಕೂಲ್ ನಲ್ಲಿ 21 ವಿದ್ಯಾರ್ಥಿಗಳಿಗೆ ಪಾಸಿಟಿವ್ ಹಿನ್ನಲೆ  ಶಾಲೆಗೆ ಭೇಟಿ ನೀಡಿದ ದಾಸರಹಳ್ಳಿ ವಿಭಾಗದ ಜಂಟಿ ಆಯುಕ್ತ ಜಗದೀಶ್ ಶಾಲೆಯ ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದಿದ್ದಾರೆ. ಶಾಲೆಯಲ್ಲಿ ಕೈಗೊಂಡ ಮುನ್ನೇಚ್ಚರಿಕಾ ಕ್ರಮಗಳ ಬಗ್ಗೆಯೂ ಪರಿಶೀಲನೆ ಮಾಡಿದ್ದಾರೆ.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:49 pm, Tue, 14 June 22

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ