ಖಾಸಗಿ ಅಂಗ ತೋರಿಸಿ ಉಬರ್ ಕ್ಯಾಬ್ ಚಾಲಕನ ಅನುಚಿತ ವರ್ತನೆ, ಲಿಂಕ್ಡ್‌ಇನ್​ನಲ್ಲಿ ಪೋಸ್ಟ್ ಮಾಡಿದ ಮಹಿಳೆ: ಮುಂದೇನಾಯ್ತು?

ಮಹಿಳೆಯೊಬ್ಬರು ಉಬರ್​ ಕ್ಯಾಬ್​ನಲ್ಲಿ ಪ್ರಯಾಣಿಸುತ್ತಿರುವಾಗ ಚಾಲಕ ಅನುಚಿತವಾಗಿ ನಡೆದುಕೊಂಡು ಹಣವನ್ನು ಪಾವತಿಸಲು ಹೋದಾಗ ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ ಎಂದು ಆರೋಪಿಸಿದ್ದು, ಇದೀಗ ಆತನ ವಿರುದ್ದ ಉಬರ್​ ಸಂಸ್ಥೆ ಸೂಕ್ತ ಕ್ರಮ ಕೈಗೊಂಡಿದೆ.

ಖಾಸಗಿ ಅಂಗ ತೋರಿಸಿ ಉಬರ್ ಕ್ಯಾಬ್ ಚಾಲಕನ ಅನುಚಿತ ವರ್ತನೆ, ಲಿಂಕ್ಡ್‌ಇನ್​ನಲ್ಲಿ ಪೋಸ್ಟ್ ಮಾಡಿದ ಮಹಿಳೆ: ಮುಂದೇನಾಯ್ತು?
ಉಬರ್​
Edited By:

Updated on: Jun 22, 2023 | 10:56 AM

ಬೆಂಗಳೂರು: ನಗರದಲ್ಲಿ ಮಹಿಳೆಯೊಬ್ಬರು ಬಿಟಿಎಂ 2ನೇ ಹಂತದಿಂದ ಜೆಪಿ ನಗರ ಮೆಟ್ರೋಗೆ ಕ್ಯಾಬ್ ರೈಡ್(cab ride) ಮಾಡುವಾಗ ಉಬರ್ (Uber) ಚಾಲಕರೊಬ್ಬರು ಅಹಿತಕರವಾಗಿ ನಡೆದುಕೊಂಡ ಘಟನೆ ನಡೆದಿದೆ. ಈ ಕುರಿತು ನೊಂದ ಮಹಿಳೆ ಲಿಂಕ್ಡ್‌ಇನ್(LinkedIn)​ನಲ್ಲಿ ಪೋಸ್ಟ್‌ ಹಾಕುವ ಮೂಲಕ ಆರೋಪಿಸಿದ್ದರು. ಆಕೆಯ ಪೋಸ್ಟ್ ವೈರಲ್ ಆದ ನಂತರ, ಮಹಿಳೆ ಮತ್ತೊಂದು ಪೋಸ್ಟ್‌ನ್ನು ಹಾಕಿ, ಉಬರ್ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.

ಘಟನೆಯ ವಿವರ

ಇನ್ನು ಈ ಕುರಿತು ಮಹಿಳೆ ‘ಕ್ಯಾಬ್​ ಬುಕ್​ ಮಾಡಿದ ಮೇಲೆ ಚಾಲಕನು ಸಮಯಕ್ಕೆ ಸರಿಯಾಗಿ ನನ್ನನ್ನು ಕರೆದುಕೊಂಡು ಹೋಗಲು ಬಂದನು. ಮೊದಲಿಗೆ ಎಲ್ಲವೂ ಸರಿಯಾಗಿಯೇ ಇತ್ತು. ಬಳಿಕ ಇದ್ದಕ್ಕಿದ್ದಂತೆ ಚಾಲಕ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದು, ಇದರಿಂದ ನಾನು ಮುಜುಗರಕ್ಕೆ ಒಳಗಾಗಿ, ನಿಗದಿತ ಸಮಯಕ್ಕಿಂತ ಸ್ವಲ್ಪ ಬೇಗನೆ ನಾನು ತಲುಪಬೇಕಿದ್ದ ಸ್ಥಳಕ್ಕೆ ಬಿಡಲು ಕೇಳಿಕೊಡೆ. ಅದರಂತೆ ಆತ ಬೇಗ ಸ್ಥಳಕ್ಕೆ ಬಿಟ್ಟಿದ್ದರು. ನಂತರ ಹಣ ಕೊಡಲು ಹೋದಾಗ ಚಾಲಕ ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ. ಇದರಿಂದ ನಾನು ಗಾಬರಿಗೊಂಡು ತಕ್ಷಣ ಚಾಲಕನಿಂದ ಓಡಿಹೋದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ವಿಮಾನ ನಿಲ್ದಾಣದಿಂದ ದುಬಾರಿ ದರ ವಿಧಿಸುತ್ತಿರುವ ಉಬರ್; ನೋಟಿಸ್ ನೀಡಲು ಸಾರಿಗೆ ಇಲಾಖೆ ಸೂಚನೆ

ಇದಾದ ಒಂದು ದಿನದ ನಂತರ ಮಹಿಳೆಯು ಮತ್ತೊಂದು ಪೋಸ್ಟ್ ಮಾಡಿದ್ದು, “ನಾನು ಆ ಘಟನೆಯ ಬಗ್ಗೆ ಮಾಹಿತಿ ನೀಡಲು ಬಯಸುತ್ತೇನೆ ‘ನಾನು ಉಬರ್ ಚಾಲಕನ ಕುರಿತು ಕಂಪ್ಲೆಂಟ್​ ಮಾಡಿದ್ದೆ, ಈ ಕುರಿತು ಉಬರ್​ ತಂಡವು ನನ್ನನ್ನು ಸಂಪರ್ಕಿಸಿ, ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದು, ಚಾಲಕನ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ಉಬರ್​ ಪ್ರತಿಕ್ರಿಯೆ ಜೊತೆಗೆ ಲಿಂಕ್ಡ್‌ಇನ್‌ಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.

ಉಬರ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತಮ್ಮ ಪ್ರಯಾಣಿಕರ ಸುರಕ್ಷತೆಗೆ ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ. ಈ ರೀತಿಯ ಘಟನೆಗಳು ಮುಂದೆ ಎಂದಿಗೂ ಆಗಬಾರದು. ಗ್ರಾಹಕರ ಯೋಗಕ್ಷೇಮವು ಮೊದಲ ಆದ್ಯತೆಯಾಗಿದ್ದು, ಈ ಮೂಲಕ ಅದು ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ