ಪ್ರಯಾಣಿಕರಿಗೆ ಶಾಕ್​: ಯುಗಾದಿ -ರಂಜಾನ್ ಹಬ್ಬ ಪ್ರಯುಕ್ತ ಖಾಸಗಿ ಬಸ್​​ ಟಿಕೆಟ್ ಡಬಲ್, ತ್ರಿಬಲ್

|

Updated on: Mar 28, 2025 | 7:29 PM

ಯುಗಾದಿ ಮತ್ತು ರಂಜಾನ್ ಹಬ್ಬಗಳಿಂದಾಗಿ ಬೆಂಗಳೂರಿನಿಂದ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದಾಗಿ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು 50% ರಷ್ಟು ಏರಿಸಿದ್ದಾರೆ. ಈ ಅತಿಯಾದ ದರ ಏರಿಕೆಯಿಂದ ಪ್ರಯಾಣಿಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಸಾರಿಗೆ ಇಲಾಖೆ ಮತ್ತು ಆರ್ಟಿಒ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಖಾಸಗಿ ಬಸ್ ಮಾಲೀಕರ ಮೇಲೆ ಕ್ರಮ ಜರುಗಿಸಲು 10 ತಂಡಗಳನ್ನು ರಚಿಸಲಾಗಿದೆ.

ಪ್ರಯಾಣಿಕರಿಗೆ ಶಾಕ್​: ಯುಗಾದಿ -ರಂಜಾನ್ ಹಬ್ಬ ಪ್ರಯುಕ್ತ ಖಾಸಗಿ ಬಸ್​​ ಟಿಕೆಟ್ ಡಬಲ್, ತ್ರಿಬಲ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್​ 28: ಯುಗಾದಿ (Ugadi) ಮತ್ತು ರಂಜಾನ್​ (Ramzan) ಹಬ್ಬ ಒಟ್ಟಿಗೆ ಬಂದ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ (Bengaluru) ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್​ ಮಾಲೀಕರು ಟಿಕೆಟ್​ ದರ ಏರಿಕೆ ಮಾಡಿದ್ದಾರೆ. ಖಾಸಗಿ ಬಸ್ ಟಿಕೆಟ್ ದರ ಶೇ.50ರವರೆಗೂ ಏರಿಕೆಯಾಗಿದೆ.

ಇಷ್ಟೊಂದು ಪ್ರಮಾಣದಲ್ಲಿ ಟಿಕೆಟ್ ದರ ಏರಿಕೆ ಮಾಡಿದ್ದರೂ, ಕಡಿವಾಣ ಹಾಕದ ಕಣ್ಮುಚ್ಚಿ ಕುಳುತಿರುವ ಸಾರಿಗೆ ಇಲಾಖೆ ಮತ್ತು ಆರ್​ಟಿಒ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಅಸಮಾಧಾನಗೊಂಡಿದ್ದಾರೆ. ಹಬ್ಬ ಅಥವಾ ಬೇಡಿಕೆಯ ಸಂದರ್ಭಗಳಲ್ಲಿ ಟಿಕೆಟ್ ನೆಪದಲ್ಲಿ ಖಾಸಗಿ ಬಸ್​ ಮಾಲೀಕರು ಸುಲಿಗೆ ಮಾಡುತ್ತಿದ್ದಾರೆ ಎಂದು ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ . ಕೊನೆಗೆ ಪ್ರಯಾಣಿಕರು ಬೇರೆ ವಿಧಿಯಿಲ್ಲದೆ ದುಪ್ಪಟ್ಟು ದರ ಕೊಟ್ಟು ತೆತ್ತು ಪ್ರಯಾಣಿಸುತ್ತಿದ್ದಾರೆ.

ಖಾಸಗಿ ಟಿಕೆಟ್ ದರ ಗಗನಕ್ಕೆ!

ಊರು ಸಾಮಾನ್ಯ ದರ (ರೂ.ಗಳಲ್ಲಿ)
ಈಗಿನ ದರ (ರೂ.ಗಳಲ್ಲಿ) (ಬೆಂಗಳೂರಿನಿಂದ)
ಶಿವಮೊಗ್ಗ 750 1000-1,500
ಮಂಗಳೂರು 900 1,500-2,000
ಹುಬ್ಬಳ್ಳಿ 1,000 1,500
ಬೆಳಗಾವಿ 1,000 1,400-1,700
ಕಾರವಾರ 1,000-1,500 2,000-3,000
ದಾವಣಗೆರೆ 800 1,500
ರಾಯಚೂರು 850 1,500

ಇದನ್ನೂ ಓದಿ: ಯುಗಾದಿ ಹಬ್ಬದಂದು ಏನು ಮಾಡಬೇಕು ಮತ್ತು ಏನು ಮಾಡಬಾರದು?

ಇದನ್ನೂ ಓದಿ
ವಿಶ್ವಾವಸು ಸಂವತ್ಸರಕ್ಕೆ ಮೇಷದಿಂದ ಮೀನ ರಾಶಿ ತನಕ ಯುಗಾದಿ ವರ್ಷ ಭವಿಷ್ಯ
ಪ್ರಯಾಣಿಕರಿಗೆ ಗುಡ್ ನ್ಯೂಸ್: ಯುಗಾದಿ, ರಂಜಾನ್​​ ಹಬ್ಬಕ್ಕೆ ಹೆಚ್ಚುವರಿ ಬಸ್
ಯುಗಾದಿ, ರಂಜಾನ್​ಗೆ ಊರಿಗೆ ಹೋಗುವವರಿಗೆ ಶಾಕ್: ಬಸ್ ಟಿಕೆಟ್ ದರ ಭಾರಿ ಏರಿಕೆ
ಯುಗಾದಿ, ರಂಜಾನ್: ಬೆಂಗಳೂರು, ಮೈಸೂರಿನಿಂದ ವಿಶೇಷ ರೈಲು

ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಪ್ಲಾನ್

ಪ್ರಯಾಣಿಕರು ಛೀಮಾರಿ ಹಾಕಿದ ಬಳಿಕ ಖಾಸಗಿ ಬಸ್ ಮಾಲೀಕರಿಗೆ ಬಿಸಿ ಮುಟ್ಟಿಸಲು ಬೆಂಗಳೂರು ಕೇಂದ್ರೀಯ ವಿಭಾಗ ಆರ್​ಟಿಒ ಅಧಿಕಾರಿಗಳು ಮುಂದಾಗಿದ್ದಾರೆ. ಬೆಂಗಳೂರು ಹಾಗೂ ಸುತ್ತಮುತ್ತ 10 ತಂಡಗಳ ಮೂಲಕ ಕಾರ್ಯಾಚರಣೆ ನಡೆಸಲು ಸಿದ್ಧವಾಗಿದೆ. ಬೆಂಗಳೂರು ಕೇಂದ್ರೀಯ ವಿಭಾಗದ ಆರ್​ಟಿಒ ಅಧಿಕಾರಿಗಳು ಕಲಾಸಿಪಾಳ್ಯ, ಆನಂದ್​ರಾವ್ ಸರ್ಕಲ್, ಮೈಸೂರ್ ರಸ್ತೆ, ಟಿನ್ ಫ್ಯಾಕ್ಟರಿ, ಗೋರಗುಂಟೆ ಪಾಳ್ಯ ಸೇರಿ 10 ಕಡೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ