ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಮಾಜಿ ಸಚಿವೆ ಲಲಿತಾ ನಾಯಕ್‌ಗೆ ಕೊಲೆ ಬೆದರಿಕೆ ಪತ್ರ
ಮಾಜಿ ಸಚಿವೆ ಬಿ.ಟಿ ಲಲತಾನಾಯಕ್, ಮಾಜಿ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕೆಲವು ಸಾಹಿತಿಗಳ ಹೆಸರು ಉಲ್ಲೇಖಿಸಿ ಕೊಲೆ ಬೆದರಿಕೆ ಪತ್ರವೊಂದನ್ನು ಕಿಡಿಗೇಡಿಗಳು ಬರೆದಿದ್ದಾರೆ.
ಬೆಂಗಳೂರು: ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್, (BT Lalitha Nayak) ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumarswamy) ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaih) ಸೇರಿ ಕೆಲವು ಸಾಹಿತಿಗಳ ಹೆಸರು ಉಲ್ಲೇಖಿಸಿ ಕೊಲೆ ಬೆದರಿಕೆ ಪತ್ರವೊಂದನ್ನು (Letter) ಕಿಡಿಗೇಡಿಗಳು ಬರೆದಿದ್ದಾರೆ. ಕಿಡಿಗೇಡಿಗಳು ಡಾ.ಬಿ.ಟಿ.ಲಲತಾನಾಯಕ್ ರವರ ಸಂಜಯನಗರ ನಿವಾಸದ ವಿಳಾಸಕ್ಕೆ ಕೊಲೆ ಬೆದರಿಕೆ ಪತ್ರ ಬರೆದಿದ್ದಾರೆ. ಬೆದರಿಕೆ ಪತ್ರ ಹಿನ್ನೆಲೆ ಡಾ.ಬಿ.ಟಿ.ಲಲಿತನಾಯಕ್ ನಿವಾಸಕ್ಕೆ ಸಂಜಯ ನಗರ ಪೊಲೀಸರ ಭೇಟಿ ನೀಡಿ, ಪತ್ರದ ಕುರಿತು ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಇದನ್ನು ಓದಿ: ರೆಬೆಲ್ ಸ್ಟಾರ್ ಅಂಬರೀಶ್ ಕನಸನ್ನು ಸೂಪರ್ ಸ್ಟಾರ್ ಸೋಮಣ್ಣ ನೆರೆವೇರಿಸಿದ್ದಾರೆ ಎಂದು ಹಾಡಿಹೊಗಳಿದ ಸುಮಲತಾ
ಪತ್ರದಲ್ಲಿ ಪಠ್ಯದಲ್ಲಿ ದೇಶ ಪ್ರೇಮ, ದೇಶ ಭಕ್ತಿ, ದೇಶ ರಕ್ಷಣೆ ಪಾಠ ಸೇರಿಸಿದ್ದಕ್ಕೆ ನಿಮಗೆಲ್ಲ ಭಯವಾಗಿದೆ. ನೀವೂ ನಿಜವಾದ ದೇಶ ದ್ರೋಹಿಗಳು. ನಮ್ಮ ದೇಶವನ್ನು ನಾಶ ಮಾಡಲು ಹೊಂಚು ಹಾಕುತ್ತಿದ್ದೀರಾ..? ಭಯೋತ್ಪಾದಕರು, ನಕ್ಸಲೇಟ್ ಗಳು, ಮಾವೋವಾದಿಗಳು, ದೇಶದ್ರೋಹಿ (ಅಲ್ಪಸಂಖ್ಯಾತ ಸಮುದಾಯದ ಹೆಸರು ಉಲ್ಲೇಖ) ಬೆಂಬಲವಾಗಿ ನಿಂತಿದ್ದೀರಿ. ಸಂಘಟನೆಯೊಂದರ (ಪಿಎಫ್ಐ) ಕಾರ್ಯಕ್ರಮದಲ್ಲಿ ನಮ್ಮ ವೀರ ಸೈನಿಕರ ಬಗ್ಗೆ ಅಗೌರವವಾಗಿ ಮಾತನಾಡಿದ್ದೀರಿ..? ನೀವು ಕ್ಷಮೆ ಕೇಳಬೇಕು. ದಯವಿಟ್ಟು ನೀವು ಎಚ್ಚರಿಕೆಯಿಂದ ಇರಿ ಎಂದು ಕಿಡಿಗೇಡಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನು ಓದಿ: ಲಂಡನ್ ಪ್ರವಾಸದಲ್ಲಿ ಥೇಮ್ಸ್ ನದಿ ತೀರದಲ್ಲಿರುವ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದ ಅಪ್ಪ-ಮಗ
2015 ರಲ್ಲೂ ಕೂಡ ಇದೇ ರೀತಿ ಬೆದರಿಕೆ ಪತ್ರ ಬರೆಯಲಾಗಿತ್ತು. ಚಿಕ್ಕಮಗಳೂರಿನಿಂದ ಬೆದರಿಕೆ ಪತ್ರ ಬಂದಿತ್ತು. ಆಗ ಬಿ.ಟಿ.ಲಲಿತಾ ನಾಯಕ್ ಸಂಜಯ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಆದರೆ ಆರೋಪಿ ಪತ್ತೆಯಾಗಿರಲಿಲ್ಲ. ಹೀಗಾಗಿ ಕೋರ್ಟ್ ಗೆ ಆರೋಪಿ ಸಿಕ್ಕಿಲ್ಲ ಎಂದು ಸಂಜಯ್ ನಗರ ಪೊಲೀಸರು ಸಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು.
Published On - 10:09 pm, Sat, 2 July 22