BS Yediyurappa: ಲಂಡನ್ ಪ್ರವಾಸದಲ್ಲಿ ಥೇಮ್ಸ್ ನದಿ ತೀರದಲ್ಲಿರುವ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದ ಅಪ್ಪ-ಮಗ
Jagajyothi Basaveshwara statue: ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ ಇಬ್ಬರೂ ಲ್ಯಾಂಬೆತ್ನ ಥೇಮ್ಸ್ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ ನಮನ ಸಲ್ಲಿಸಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಮತ್ತು ಅವರ ಪುತ್ರ ಬಿ ವೈ ವಿಜಯೇಂದ್ರ (BY Vijayendra) ಕುಟುಂಬ ಸಮೇತ ಇತ್ತೀಚೆಗೆ ಲಂಡನ್ ಪ್ರವಾಸಕ್ಕೆ ತೆರಳಿದ್ದರು. ಆ ವೇಳೆ ಅಪ್ಪ-ಮಗ ಇಬ್ಬರೂ ಲ್ಯಾಂಬೆತ್ನ ಥೇಮ್ಸ್ ನದಿ ತೀರದಲ್ಲಿರುವ ಜಗಜ್ಯೋತಿ ಬಸವೇಶ್ವರರ ಪ್ರತಿಮೆಗೆ (Jagajyothi Basaveshwara statue) ನಮನ ಸಲ್ಲಿಸಿದರು.
ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಮತ್ತು ಬಿ ವೈ ವಿಜಯೇಂದ್ರ ಇಬ್ಬರೂ ತಮ್ಮ ಖಾತೆಗಳಿಂದ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2015ರ ನವೆಂಬರ್ 14ರಂದು 12ನೇ ಶತಮಾನದ ಕ್ರಾಂತಿಕಾರಿ ಸಂತ ಬಸವೇಶ್ವರರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಬಿ.ಎಸ್. ಯಡಿಯೂರಪ್ಪ ಟ್ವೀಟ್ ಸಾರಾಂಶ:
ಕಳೆದ ವಾರ ಲಂಡನ್ ಪ್ರವಾಸದ ಸಂದರ್ಭದಲ್ಲಿ, ಲ್ಯಾಂಬೆತ್ ನಲ್ಲಿರುವ ವಿಶ್ವಗುರು ಅಣ್ಣ ಬಸವಣ್ಣನವರ ಪ್ರತಿಮೆಗೆ ನಮನಗಳನ್ನು ಸಲ್ಲಿಸಲಾಯಿತು.
ಕಳೆದ ವಾರ ಲಂಡನ್ ಪ್ರವಾಸದ ಸಂದರ್ಭದಲ್ಲಿ, ಲ್ಯಾಂಬೆತ್ ನಲ್ಲಿರುವ ವಿಶ್ವಗುರು ಅಣ್ಣ ಬಸವಣ್ಣನವರ ಪ್ರತಿಮೆಗೆ ನಮನಗಳನ್ನು ಸಲ್ಲಿಸಲಾಯಿತು. pic.twitter.com/EblF12LLJp
— B.S.Yediyurappa (@BSYBJP) July 2, 2022
ಬಿ ವೈ ವಿಜಯೇಂದ್ರ ಟ್ವೀಟ್ ಸಾರಾಂಶ:
ಪೂಜ್ಯ ತಂದೆಯವರಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ, ಲಂಡನ್’ನ ಲ್ಯಾಂಬೆತ್’ನಲ್ಲಿರುವ ವಿಶ್ವಗುರು, ಭಕ್ತಿ ಭಂಡಾರಿ ಅಣ್ಣ ಬಸವಣ್ಣನವರ ಪ್ರತಿಮೆಗೆ ನಮನ ಸಲ್ಲಿಸಿದ ಸಂದರ್ಭ.
ಪೂಜ್ಯ ತಂದೆಯವರಾದ ಶ್ರೀ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ, ಲಂಡನ್’ನ ಲ್ಯಾಂಬೆತ್’ನಲ್ಲಿರುವ ವಿಶ್ವಗುರು, ಭಕ್ತಿ ಭಂಡಾರಿ ಅಣ್ಣ ಬಸವಣ್ಣನವರ ಪ್ರತಿಮೆಗೆ ನಮನ ಸಲ್ಲಿಸಿದ ಸಂದರ್ಭ.@BSYBJP pic.twitter.com/685xoPv2Za
— Vijayendra Yeddyurappa (@BYVijayendra) July 2, 2022
Also Read: