ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

| Updated By: sandhya thejappa

Updated on: Jul 04, 2022 | 12:49 PM

ಯುವತಿ ಕಿರುಚಾಟ ಕೇಳಿ ಅಕ್ಕಪಕ್ಕದವರು ಮನೆಗೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಸದ್ಯ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ವಿವೇಕ್​ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು
ನರ್ಸಿಂಗ್ ವಿದ್ಯಾರ್ಥಿನಿ, ಆರೋಪಿ
Follow us on

ಬೆಂಗಳೂರು: ನಗರದ ಈಜಿಪುರದಲ್ಲಿ ಅಪರಿಚಿತನೊಬ್ಬ ಮನೆಗೆ ನುಗ್ಗಿ ನರ್ಸಿಂಗ್ ವಿದ್ಯಾರ್ಥಿನಿ (Student) ಮೇಲೆ ಲೈಂಗಿಕ ದೌರ್ಜನ್ಯ (Sexual Assault) ಎಸಗಿದ್ದಾನೆ. ಬೆಳಗಿನ ಜಾವ ಕಾಲಿಂಗ್ ಬೆಲ್ ಹೊಡೆದು ಕಾಟ ಕೊಡುತ್ತಿದ್ದನಂತೆ. ಯಾರೋ ಬಂದಿದ್ದಾರೆಂದು ಹೊರ ರಾಜ್ಯದ ವಿದ್ಯಾರ್ಥಿನಿ ಬಾಗಿಲು ತೆಗೆದಿದ್ದಾರೆ. ಈ ವೇಳೆ ಏಕಾಏಕಿ ಒಳಗೆ ನುಗ್ಗಿದಲ್ಲದೇ ಯುವತಿ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾನೆ. ಹಣ ನೀಡುತ್ತೇನೆ ಬಿಡು ಅಂದರೂ ಆರೋಪಿ ಕೇಳಲಿಲ್ಲ. ಯುವತಿ ಕಿರುಚಾಟ ಕೇಳಿ ಅಕ್ಕಪಕ್ಕದವರು ಮನೆಗೆ ಬಂದು ಆಕೆಯನ್ನು ರಕ್ಷಿಸಿದ್ದಾರೆ. ಸದ್ಯ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಈ ಬಗ್ಗೆ ವಿವೇಕ್ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಹಿಳೆ‌ ಮೇಲೆ ಅತ್ಯಾಚಾರ:
ವಿಕಲಚೇತನ ಮಹಿಳೆ‌ ಮೇಲೆ ಅತ್ಯಾಚಾರ ನಡೆದಿರುವ ಆರೋಪ ಕೇಳಿಬಂದಿದ್ದು, ಈ ಘಟನೆ ಯಾದಗಿರಿ ಜಿಲ್ಲೆಯ ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಿಳೆ ಐದು ತಿಂಗಳ‌ ಗರ್ಭಿಣಿಯಾದ ಬಳಿಕ‌ ಪ್ರಕರಣ ಬೆಳಕಿಗೆ ಬಂದಿದೆ. ಹೊಟ್ಟೆ ನೋವು ಅಂತ ಆಸ್ಪತ್ರೆಗೆ ಹೋದಾಗ ಗರ್ಭಿಣಿಯಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ತಂದೆ- ತಾಯಿಯನ್ನ ಕಳೆದುಕೊಂಡ ಸಂತ್ರಸ್ತೆ ಅಜ್ಜಿ ಜೊತೆ ಇರುತ್ತಿದ್ದರು. ಆರೋಪಿ ಮಹಿಳೆಯ ಪಕ್ಕದ‌ ಮನೆಗೆ ಬಂದು ಹೋಗುತ್ತಿದ್ದಾಗ ಅತ್ಯಾಚಾರ ನಡೆಸಿನೆ ಎಂದು ಹೇಳಲಾಗುತ್ತಿದೆ. ಪ್ರಕರಣ ಸಂಬಂಧ ಆರೋಪಿ ಅರೆಸ್ಟ್ ಆಗಿದ್ದಾನೆ.

ಇದನ್ನೂ ಓದಿ: ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಜಿಲ್ಲಾಧಿಕಾರಿಗೆ ಕರೆ ಮಾಡಿ ವಂಚಿಸಲು ಯತ್ನಿಸಿದ್ದವನ ವಿರುದ್ಧ FIR, ಅಪರಿಚಿತನಿಗಾಗಿ ಹುಡುಕಾಟ

ಇದನ್ನೂ ಓದಿ
Cheteshwar Pujara: ಅಚ್ಚರಿಯೆನಿಸುವ ವಿಶೇಷ ದಾಖಲೆ ಬರೆದ ಚೇತೇಶ್ವರ ಪೂಜಾರಾ
CBSE 10th Result 2022: ಇಂದು ಸಿಬಿಎಸ್​ಇ 10ನೇ ತರಗತಿ ಫಲಿತಾಂಶ ಪ್ರಕಟ ಸಾಧ್ಯತೆ
ಇಂಟರ್​ವ್ಯೂಗೆ ತೆರಳಿದ ವಿಮಾನ ಸಿಬ್ಬಂದಿ: ತಡವಾಗಿ ನಗರಗಳ ತಲುಪಿದ 900ಕ್ಕೂ ಹೆಚ್ಚು ಇಂಡಿಯೋ ವಿಮಾನಗಳು
Jonny Bairstow vs Virat Kohli: ಕರಡಿಯನ್ನು ಕೆಣಕಿದ್ರಾ ಕೊಹ್ಲಿ? ಈ ಬಗ್ಗೆ ಬೈರ್​ಸ್ಟೋವ್ ಹೇಳಿದ್ದೇನು?

ನಗರದಲ್ಲಿ ಹೆಚ್ಚಾಯ್ತು ಬೈಕ್ ವೀಲಿಂಗ್:
ನಗರದಲ್ಲಿ ಬೈಕ್ ವೀಲಿಂಗ್ ಮಾಡುತ್ತಿರುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಲೈಕ್ಸ್​ಗಾಗಿ ಬೈಕ್​ ವೀಲಿಂಗ್ ಮಾಡುವ ಮೂಲಕ ಸಂಚಾರಿ ನಿಯಮಗಳನ್ನ ಪಾಲಿಸುತ್ತಿಲ್ಲ. ಪ್ರಮುಖ ರಸ್ತೆಗಳು, ಅಂಡರ್ ಪಾಸ್, ಫ್ಲೈಓವರ್​ಗಳಲ್ಲಿ ವ್ಹೀಲಿಂಗ್ ಮಾಡಿ ಹುಚ್ಚಾಟ ಮೆರೆಯುತ್ತಿದ್ದಾರೆ. ಬೈಕ್ ಹ್ಯಾಂಡಲ್ ಮೇಲೆ ಕಾಲಿಟ್ಟು ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮನೆಗೆ ನುಗ್ಗಿ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಯನ್ನು ಪೊಲೀಸರಿಗೊಪ್ಪಿಸಿದ ಸ್ಥಳೀಯರು

Published On - 12:31 pm, Mon, 4 July 22