ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ 64.48 ರೂ ಕೋಟಿ ಅನುದಾನ ಕೋರಿ ಸಿಎಂ ಬಸವರಾಜ ಬೊಮ್ಮಾಯಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ
ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ 40 ಕೋಟಿ ರೂಪಾಯಿ ಅನುದಾನ, ಸಮಾಜ ಕಲ್ಯಾಣ ಇಲಾಖೆಯಿಂದ 6.80 ಕೋಟಿ ರೂ. ಅನುದಾನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ₹10.60 ಕೋಟಿ ಅನುದಾನ ಕೇಳಿದ್ದಾರೆ.
ಬಾಗಲಕೋಟೆ: ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಕೋರಿ ಸಿಎಂ ಬಸವರಾಜ ಬೊಮ್ಮಾಯಿಗೆ(Basavaraj Bommai) ಮಾಜಿ ಸಿಎಂ ಸಿದ್ದರಾಮಯ್ಯ(Siddaramaiah) ಪತ್ರ ಬರೆದಿದ್ದಾರೆ. 64.48 ರೂ ಕೋಟಿ ಅನುದಾನ ಮಂಜೂರು ಮಾಡಿ ಬಿಡುಗಡೆಗೆ ಮನವಿ ಮಾಡಿದ್ದಾರೆ. ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ದಿಗೆ ಲೋಕೋಪಯೋಗಿ ಇಲಾಖೆಯಿಂದ 40 ಕೋಟಿ ರೂಪಾಯಿ ಅನುದಾನ, ಸಮಾಜ ಕಲ್ಯಾಣ ಇಲಾಖೆಯಿಂದ 6.80 ಕೋಟಿ ರೂ. ಅನುದಾನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ₹10.60 ಕೋಟಿ, ಮುಜರಾಯಿ ಇಲಾಖೆಯಿಂದ 1.65 ಕೋಟಿ ರೂಪಾಯಿ ಅನುದಾನ, ಅಲ್ಪಸಂಖ್ಯಾತರ ಇಲಾಖೆಯಿಂದ 2.39 ಕೋಟಿ ರೂ. ಅನುದಾನ, ಸಾರಿಗೆ ಇಲಾಖೆಯಿಂದ 3.04 ಕೋಟಿ ಅನುದಾನ ಒದಗಿಸುವಂತೆ ವಿಪಕ್ಷ ನಾಯಕ & ಬಾದಾಮಿ ಕ್ಷೇತ್ರದ ಶಾಸಕ ಸಿದ್ದರಾಮಯ್ಯ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯರಿಂದ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಇನ್ನು ಮತ್ತೊಂದು ಕಡೆ ಬರ್ತಡೇ ಮೂಲಕ ಬೃಹತ್ ಸಮಾವೇಶ ನಡೆಸಿ ಸಿದ್ದರಾಮಯ್ಯ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಸಿದ್ದರಾಮಯ್ಯ ಈಗಾಗಲೇ ರಾಹುಲ್ ಗಾಂಧಿಗೆ ಆಹ್ವಾನ ನೀಡಿದ್ದಾರೆ. ಆದರೆ ರಾಹುಲ್ ಗಾಂಧಿ ಭಾಗವಹಿಸುವ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಇದರಿಂದ ಪಕ್ಷದಲ್ಲಿ ಹಾಗೂ ರಾಜ್ಯದಲ್ಲಿ ಬೇರೆ ಸಂದೇಶ ರವಾನೆಯಾಗುವ ಸಾಧ್ಯತೆ ಎಂದು ಆಪ್ತ ವರ್ಗ ಅಭಿಪ್ರಾಯಪಟ್ಟಿದೆ. ಹಾಗೂ ಕೆಪಿಸಿಸಿಯಿಂದಲೇ ಬೃಹತ್ ಸಮಾವೇಶದ ಬಗ್ಗೆ ಡಿಕೆ ಶಿವಕುಮಾರ್ ಚಿಂತನೆ ನಡೆಸಿದ್ದಾರೆ. ಆಗಸ್ಟ್ 15ರಂದು ರಾಜ್ಯಾದ್ಯಂತ ರಾಷ್ಟ್ರಧ್ವಜ ಹಿಡಿದು ಯಾತ್ರೆ ನಡೆಸಲು ಸಿದ್ಧತೆ ನಡೆದಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಪಕ್ಷದ ಕೊಡುಗೆ ತಿಳಿಸಲು ಸಮಾವೇಶ ನಡೆಯಲಿದ್ದು ಸುಮಾರು 2 ಲಕ್ಷ ಜನರನ್ನ ಸೇರಿಸುವ ಯೋಜನೆ ಇದೆ. ಇದಕ್ಕೆ ರಾಹುಲ್ ಗಾಂಧಿಗೆ ಆಹ್ವಾನ ನೀಡುವ ಬಗ್ಗೆ ಪಕ್ಷದಲ್ಲಿ ಚಿಂತನೆ ನಡೆದಿದೆ. ಇದನ್ನೂ ಓದಿ: ಶಿವಕುಮಾರ ಜೊತೆ ಹಸ್ತಲಾಘವ ಮಾಡಲು ಮುಂದಾಗದ ಸಿದ್ದರಾಮಯ್ಯ; ಈಗಲೂ ನಾನೊಂದು ತೀರ ನೀನೊಂದು ತೀರ…
Published On - 11:48 am, Mon, 4 July 22